ಬೀದರ್ | ಜನವಸತಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಬೃಹತ್ ಮೊಸಳೆ – ಗ್ರಾಮಸ್ಥರಲ್ಲಿ ಆತಂಕ
ಬೀದರ್: ಕೆರೆಯ ಕಡೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆ ಎಂಟ್ರಿ ಕೊಟ್ಟ ಘಟನೆ ಬೀದರ್ (Bidar) ತಾಲೂಕಿನ ಜನವಾಡ (Janawad) ಗ್ರಾಮದಲ್ಲಿ ನಡೆದಿದೆ. ಬೃಹತ್ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದೊಳಗೆ ಎಂಟ್ರಿ ಕೊಡುತ್ತಿದ್ದಂತೆ ಮೊಸಳೆ ಕಂಡು ಜನವಾಡ ಗ್ರಾಮದ ಜನ್ರು ಭಯ ಭೀತರಾಗಿದ್ದಾರೆ. ಇದನ್ನೂ ಓದಿ: ಮುಖೇಶ್ ಅಂಬಾನಿ,

ಬೀದರ್: ಕೆರೆಯ ಕಡೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆ ಎಂಟ್ರಿ ಕೊಟ್ಟ ಘಟನೆ ಬೀದರ್ (Bidar) ತಾಲೂಕಿನ ಜನವಾಡ (Janawad) ಗ್ರಾಮದಲ್ಲಿ ನಡೆದಿದೆ. ಬೃಹತ್ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದೊಳಗೆ ಎಂಟ್ರಿ ಕೊಡುತ್ತಿದ್ದಂತೆ ಮೊಸಳೆ ಕಂಡು ಜನವಾಡ ಗ್ರಾಮದ ಜನ್ರು ಭಯ ಭೀತರಾಗಿದ್ದಾರೆ. ಇದನ್ನೂ ಓದಿ: ಮುಖೇಶ್ ಅಂಬಾನಿ, ಅನಂತ್ ಅಂಬಾನಿ ಭೇಟಿಯಾದ ಮಾರ್ಕೊ ರೂಬಿಯೊ ಮೊಸಳೆ ಎರಡು ಕ್ವಿಂಟಾಲ್, 8 ಅಡಿ ಉದ್ದವಿದ್ದು ಜನವಾಡ ಕೆರೆಯಲ್ಲಿ ಇನ್ನಷ್ಟು ಮೊಸಳೆ ಇರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದು, ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮಾಡಿ, ಬೃಹತ್ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಮೊಸಳೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ನಂದಿಧ್ವಜ ಪೂಜೆ ವೇಳೆ ಯಡವಟ್ಟು; ಸಿಎಂ ಜೊತೆ ಸಚಿವರನ್ನ ಪೂಜೆಗೆ ಬಿಡದೆ ಅಡ್ಡಗಟ್ಟಿದ ಎಸ್ಪಿ