ಯಾದಗಿರಿ: ಜಗನ್ಮಾತೆಯ ಆರಾಧನೆ, ವಿಜಯದಶಮಿಯೊಂದಿಗೆ ತೆರೆ
ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ 10 ದಿನಗಳಿಂದ ಕಳೆಗಟ್ಟಿದ್ದ ನವರಾತ್ರಿ ಸಂಭ್ರಮಕ್ಕೆ ಮಂಗಳವಾರ ಆಯುಧಪೂಜೆ ಹಾಗೂ ಬುಧವಾರ ವಿಯಜದಶಮಿಯ ಬನ್ನಿ ಮುಡಿಯುವ ಆಚರಣೆಯೊಂದಿಗೆ ತೆರೆಬಿದ್ದಿತು.ಒಂಬತ್ತು ದಿನಗಳ ಕಾಲ ದೇವಾಲಯಗಳು, ಧಾರ್ಮಿಕ ಕೇಂದ್ರಗಳು ಹಾಗೂ ಮನೆಗಳಲ್ಲಿ ದೇವಿಯ ಆರಾಧನೆ ಸಡಗರದಿಂದ ಜರುಗಿದವು. ಎಂಟು ದಿನಗಳ ಹಬ್ಬ, ಒಂಬತ್ತನೇ ದಿನ ವಿಜಯ ದಶ

ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ 10 ದಿನಗಳಿಂದ ಕಳೆಗಟ್ಟಿದ್ದ ನವರಾತ್ರಿ ಸಂಭ್ರಮಕ್ಕೆ ಮಂಗಳವಾರ ಆಯುಧಪೂಜೆ ಹಾಗೂ ಬುಧವಾರ ವಿಯಜದಶಮಿಯ ಬನ್ನಿ ಮುಡಿಯುವ ಆಚರಣೆಯೊಂದಿಗೆ ತೆರೆಬಿದ್ದಿತು.ಒಂಬತ್ತು ದಿನಗಳ ಕಾಲ ದೇವಾಲಯಗಳು, ಧಾರ್ಮಿಕ ಕೇಂದ್ರಗಳು ಹಾಗೂ ಮನೆಗಳಲ್ಲಿ ದೇವಿಯ ಆರಾಧನೆ ಸಡಗರದಿಂದ ಜರುಗಿದವು. ಎಂಟು ದಿನಗಳ ಹಬ್ಬ, ಒಂಬತ್ತನೇ ದಿನ ವಿಜಯ ದಶಮಿಯೊಂದಿಗೆ ನವರಾತ್ರಿ ಉತ್ಸವ ಸಂಪನ್ನವಾಯಿತು.ಸ್ಟೇಷನ್ ಏರಿಯಾದ ಭವಾನಿ ಮಂದಿರ, ಭೋವಿ ವಾಡದ ದುರ್ಗಾದೇವಿ ದೇವಸ್ಥಾನ, ಆತ್ಮಲಿಂಗ ದೇವಸ್ಥಾನ, ಬೆಟ್ಟದ ಮೇಲಿನ ಭುನವೇಶ್ವರಿ ದೇವಿ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕಿದವು.ದೇವಸ್ಥಾನಗಳಲ್ಲಿ ನಿತ್ಯ ಪೂಜೆ, ಅಲಂಕಾರ, ಆರತಿ, ಪ್ರಸಾದ ವಿತರಣೆ, ವೈವಿಧ್ಯಮಯ ದಾಂಡಿಯಾ ನೃತ್ಯ ನವರಾತ್ರಿ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ನವರಾತ್ರಿಯ ವಿಯಜದಶಮಿ ದಿನ ಸಂಪ್ರದಾಯದಂತೆ ಭಕ್ತರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.ಬನ್ನಿ ಮರದ ಎಲೆಗಳನ್ನು ಪರಸ್ಪರ ಹಂಚಿಕೊಂಡು ‘ಬಂಗಾರದಂತೆ ಒಟ್ಟಾಗಿ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರ ಕಾಲು ಬಿದ್ದು ಆಶೀರ್ವಾದ ಪಡೆದರು.ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಅಧಿಕಾರಿಗಳು ಪ್ರತಿಷ್ಠಾಪನೆ ಮಾಡಿದ ದೇವಿಯ ಮೂರ್ತಿಗಳ ದರ್ಶನ ಪಡೆದರು. ಮುಂಜಾಗೃತಾ ಕ್ರಮವಾಗಿ ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಖಂಡೇಪೂಜೆ: ವಾಹನ, ಯಂತ್ರಗಳಿಗೂ ಪೂಜೆ ಖಂಡೇಪೂಜೆಯ (ಆಯುಧ) ದಿನದಂದು ವಾಹನ ಮತ್ತು ಆಯುಧಗಳಿಗೆ ಪೂಜೆ ನೆರವೇರಿಸಿದರು.ಆಯುಧ ಪೂಜೆಯ ದಿನವಾದ ಮಂಗಳವಾರ ಸಂಪ್ರದಾಯಸ್ಥರು ಕೆಲಸದ ಸಾಮಗ್ರಿಗಳು, ವಾಹನಗಳು, ಕೈಗಾರಿಕ ಘಟಕಗಳ ಯಂತ್ರಗಳು, ಕೃಷಿಕರು ಕೃಷಿ ಉಪಕರಣಗಳನ್ನು ತೊಳೆದು ಸಿಂಗರಿಸಿ ಅವುಗಳಿಗೆ ಪೂಜೆ ಸಲ್ಲಿಸಿದರು. ಅಂಗಡಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿ, ಸಂಸ್ಥೆಗಳು, ಸಣ್ಣ ಕಾರ್ಖಾನೆಗಳಲ್ಲಿ ಸಿಬ್ಬಂದಿ ಮತ್ತು ಮಾಲೀಕರು ತಮ್ಮ ವಾಹನ ಮತ್ತು ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ಗಳನ್ನು ಸ್ವಚ್ಛಗೊಳಿಸಿ ಕಬ್ಬು, ಬಾಳೆದಿಂಡು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.ಲಾರಿ, ಪ್ರಯಾಣಿಕ ವಾಹನ, ಕಾರು, ಟ್ರ್ಯಾಕ್ಟರ್ಗಳ ಮಾಲೀಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂಗಳಿಂದ ಅಲಂಕರಿಸಿ ಆರತಿ ಬೆಳಗಿ ಪೂಜೆ ಮಾಡಿದರು.ದೇವಿ ಮೂರ್ತಿಯ ಅದ್ದೂರಿ ಮೆರವಣಿಗೆಹಿಂದೂ ಸೇವಾ ಸಮಿತಿ ಪ್ರತಿಷ್ಠಾಪಿಸಿದ ಭವಾನಿ ದೇವಿ ಮೂರ್ತಿಯ ಅದ್ದೂರಿ ಮೆರವಣಿಗೆ ಬನ್ನಿ ಮಂಟಪದ ವರೆಗೆ ಸಕಲ ಮಂಗಲವಾದ್ಯಗಳೊಂದಿಗೆ ನಡೆಸಲಾಯಿತು. ಉಡುಪಿಯ ವಾದ್ಯ ಮೇಳ ಮೆರವಣಿಗೆಗೆ ಮೆರುಗು ನೀಡಿತು.ನಗರದ ಶಾಸ್ತ್ರಿ ವೃತ್ತದಲ್ಲಿ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಅಂಬಾ ಭವಾನಿ ದೇವಿಯ ದರ್ಶನ ಪಡೆದರು. ಮೆರವಣಿಗೆ ಉದ್ದಕ್ಕೂ ‘ದುರ್ಗಾ ಮಾತಾಕೀ ಜೈ’ ಎಂಬ ಘೋಷಣೆಗಳು ಮೊಳಗಿದವು. ಬನ್ನಿ ಮಂಟಪ ಬಳಿ ಶ್ರದ್ಧ–ಭಕ್ತಿಯಿಂದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿಯಲಾಯಿತು.261022-30-364818543