ಟಿಬೆಟ್ನಲ್ಲಿ 7 ತೀವ್ರತೆಯ ಪ್ರಬಲ ಭೂಕಂಪ
ನವದೆಹಲಿ: ಟಿಬೆಟ್ನಲ್ಲಿ ಗುರುವಾರ 7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್ವರ್ಕ್ ಕೇಂದ್ರವು ತಿಳಿಸಿದೆ.ಉತ್ತರ ಟಿಬೆಟ್ನ ಎತ್ತರದ ಪ್ರದೇಶ ನಾಗ್ಕ್ಯೂ ಕೌಂಟಿಯ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದ್ದು, ಸಾವುನೋವಿನ ವರದಿ ಆಗಿಲ್ಲ. ಟಿಬೆಟ್ ರಾಜಧಾನಿ ಲ್ಹಾಸಾದಿಂದ 400

ನವದೆಹಲಿ: ಟಿಬೆಟ್ನಲ್ಲಿ ಗುರುವಾರ 7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್ವರ್ಕ್ ಕೇಂದ್ರವು ತಿಳಿಸಿದೆ.ಉತ್ತರ ಟಿಬೆಟ್ನ ಎತ್ತರದ ಪ್ರದೇಶ ನಾಗ್ಕ್ಯೂ ಕೌಂಟಿಯ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದ್ದು, ಸಾವುನೋವಿನ ವರದಿ ಆಗಿಲ್ಲ. ಟಿಬೆಟ್ ರಾಜಧಾನಿ ಲ್ಹಾಸಾದಿಂದ 400 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ಇದೆ.ನೇಪಾಳ–ಚೀನಾ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ 1,400ಕ್ಕೂ ಅಧಿಕ ಮಂದಿ ಮೃತಪಟ್ಟು ಕೆಲ ದಿನಗಳಲ್ಲೇ ಈ ಭೂಕಂಪ ಸಂಭವಿಸಿದೆ.ಆಗಸ್ಟ್ನಲ್ಲಿ ನೇಪಾಳ ಮತ್ತು ಚೀನಾ ಟಿಬೆಟ್ ಗಡಿಯಲ್ಲಿ ಹಿಮಬಂಡೆ ಕುಸಿದು ಭೂಕುಸಿತ ಮತ್ತು ಹಠಾತ್ ಪ್ರವಾಹ ಸಂಭವಿಸಿತ್ತು.
Read the complete story at Prajavani