Jio IPO: ಯಾಕಿಷ್ಟು ಬೇಡಿಕೆ? ಹೇಗಿದೆ ಲಾಭದ ಲೆಕ್ಕಾಚಾರ
ನವದೆಹಲಿ: ಜಿಯೊ ಪ್ಲಾಟ್ಫಾರ್ಮ್ಸ್ ಬುಧವಾರದಿಂದ(ಅ.21) ಬಹುನಿರೀಕ್ಷಿತ ಐಪಿಒ ಆರಂಭಿಸಿದೆ. ಎರಡನೇ ದಿವೂ ಐಪಿಒಗೆ ಭಾರಿ ಬೇಡಿಕೆ ಬಂದಿದ್ದು, 27 ಕೋಟಿ ಷೇರುಗಳು ಲಭ್ಯವಿದ್ದು, 80 ಕೋಟಿಗೂ ಅಧಿಕ ಷೇರುಗಳಿಗೆ ಬಿಡ್ಡಿಂಗ್ ಬಂದಿದೆ.₹30,213 ಕೋಟಿ ಸಂಗ್ರಹಕ್ಕೆ ಈ ಐಪಿಒ ಆರಂಭಿಸಲಾಗಿದ್ದು, ಇದರಲ್ಲಿ ಸಿಂಹಪಾಲನ್ನು ಸಂಸ್ಥೆಯು ಸಾಲ ಮರುಪಾವತಿಗೆ ಬಳಸಲಾಗುತ್ತದೆ. ₹27,500

ನವದೆಹಲಿ: ಜಿಯೊ ಪ್ಲಾಟ್ಫಾರ್ಮ್ಸ್ ಬುಧವಾರದಿಂದ(ಅ.21) ಬಹುನಿರೀಕ್ಷಿತ ಐಪಿಒ ಆರಂಭಿಸಿದೆ. ಎರಡನೇ ದಿವೂ ಐಪಿಒಗೆ ಭಾರಿ ಬೇಡಿಕೆ ಬಂದಿದ್ದು, 27 ಕೋಟಿ ಷೇರುಗಳು ಲಭ್ಯವಿದ್ದು, 80 ಕೋಟಿಗೂ ಅಧಿಕ ಷೇರುಗಳಿಗೆ ಬಿಡ್ಡಿಂಗ್ ಬಂದಿದೆ.₹30,213 ಕೋಟಿ ಸಂಗ್ರಹಕ್ಕೆ ಈ ಐಪಿಒ ಆರಂಭಿಸಲಾಗಿದ್ದು, ಇದರಲ್ಲಿ ಸಿಂಹಪಾಲನ್ನು ಸಂಸ್ಥೆಯು ಸಾಲ ಮರುಪಾವತಿಗೆ ಬಳಸಲಾಗುತ್ತದೆ. ₹27,500 ಕೋಟಿಯನ್ನು ಅದರ ಪ್ರಮುಖ ಅಂಗಸಂಸ್ಥೆಯಾದ 'ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ (ಆರ್ಜೆಐಎಲ್) ಪಡೆದಿರುವ ಸಾಲ ಮರುಪಾವತಿಸಲು ಬಳಸಲಾಗುತ್ತದೆ. ಐಪಿಒ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, ಈ ಹಣವನ್ನು ಸಾಲದ ಹೊರೆ ಕಡಿಮೆ ಮಾಡಲು ಬಳಸಲಾಗುವುದು ಎಂದು ತಿಳಿಸಿದ್ದರು.ಉಳಿದ ಹಣವನ್ನು ಸಂಸ್ಥೆಯ ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಲಾಗುತ್ತದೆ.ಜಿಯೊ ಪ್ಲಾಟ್ಫಾರ್ಮ್ಸ್ ಪ್ರತಿ ಈಕ್ವಿಟಿ ಷೇರಿಗೆ ₹1,065 ರಿಂದ ₹1,119 ರವರೆಗಿನ ಬೆಲೆ ನಿಗದಿಪಡಿಸಿದೆ. ಒಂದು ಲಾಟ್ಗೆ 12 ಷೇರುಗಳನ್ನು ನಿಗದಿಪಡಿಸಿದೆ. ಹೂಡಿಕೆದಾರರು ಒಂದು ಲಾಟ್ಗೆ ಅರ್ಜಿ ಸಲ್ಲಿಸಲು ಕನಿಷ್ಠ ₹13,428 ಅನ್ನು ಹೂಡಿಕೆ ಮಾಡಬೇಕಾಗುತ್ತದೆ.ಜಿಯೊ ಐಪಿಒಗೆ ಬೇಡಿಕೆ ಏಕೆ?ಕಳೆದ ಎರಡು ದಶಕಗಳಲ್ಲಿ ರಿಲಯನ್ಸ್ ಗ್ರೂಪ್ ಮೊದಲ ಪ್ರಮುಖ ಐಪಿಒ ಇದಾಗಿದ್ದು, ದೇಶದ ಬಹುದೊಡ್ಡ ಡಿಜಿಟಲ್ ಮತ್ತು ಟೆಲಿಕಾಂ ಜಾಲದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತಿದೆ. 2016ರಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸಿದ ಜಿಯೊ, ಕಡಿಮೆ ದರದ ಡೇಟಾ ಮತ್ತು ಉಚಿತ ಕರೆಗಳ ಮೂಲಕ ಜನರನ್ನು ತಲುಪಿತ್ತು. ಹೋಮ್ ಬ್ರಾಡ್ಬ್ಯಾಂಡ್, ಎಂಟರ್ಪ್ರೈಸಸ್ ತಂತ್ರಜ್ಞಾನ, ಡಿಜಿಟಲ್ ಸೇವೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಉದ್ಯಮವನ್ನು ವಿಸ್ತರಿಸಿದೆ. ಮೆಟಾ ಮತ್ತು ಗೂಗಲ್ನಂತಹ ದೈತ್ಯ ಸಂಸ್ಥೆಗಳ ಸಹಯೋಗವಿದೆ. ಐಪಿಒ ಆರಂಭದ ಹೊತ್ತಿಗೆ ಜಿಯೊ ಪ್ಲಾಟ್ಫಾರ್ಮ್ಸ್ನ ಚಂದಾದಾರರ ಸಂಖ್ಯೆ 50 ಕೋಟಿಯಷ್ಟಿತ್ತು.ಜಿಯೊ ಐಪಿಒ ಅಪಾಯದ ಬಗ್ಗೆ ಹೂಡಿಕೆದಾರರು ಅರಿಯಬೇಕಿರುವುದುಮಾರುಕಟ್ಟೆ ಉತ್ತಮ ಸ್ಥಾನದಲ್ಲಿದ್ದರೂ ಯಾವುದೇ ಐಪಿಒ ಅಪಾಯಮುಕ್ತವಾಗಿರುವುದಿಲ್ಲ. ಈ ಕುರಿತಂತೆ ಎನ್ಡಿಟಿವಿ ಕೆಲ ಮಾಹಿತಿಯನ್ನು ಹಂಚಿಕೊಂಡಿದೆ.ನಿಯಂತ್ರಕ ಅಪಾಯ: ಟೆಲಿಕಾಂ ಒಂದು ನಿಯಂತ್ರಿತ ಉದ್ಯಮವಾಗಿದ್ದು, ಪರವಾನಗಿ ಅಗತ್ಯತೆಗಳು, ಸ್ಪೆಕ್ಟ್ರಮ್ ವೆಚ್ಚಗಳು ಮತ್ತು ಡೇಟಾ ನಿಯಮಗಳಲ್ಲಿನ ಬದಲಾವಣೆ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು.ಸ್ಪರ್ಧೆ: ಜಿಯೊ ಟೆಲಿಕಾಂ ಸಂಸ್ಥೆಯು ಉಪಗ್ರಹ ಬ್ರಾಡ್ಬ್ಯಾಂಡ್ ಸೇವೆಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಪೂರೈಕೆದಾರರಿಂದ ಸ್ಪರ್ಧೆ ಎದುರಿಸುತ್ತಿದೆ.ತಂತ್ರಜ್ಞಾನ ಖರ್ಚು: ನೆಟ್ವರ್ಕ್ ಅಪ್ಗ್ರೇಡ್, ಎಐ ಮೂಲಸೌಕರ್ಯ ಮತ್ತು ಇತರ ಡಿಜಿಟಲ್ ಹೂಡಿಕೆಗಳಿಗೆ ಬಂಡವಾಳದ ಅಗತ್ಯವಿರುತ್ತದೆ. ನಿರೀಕ್ಷಿತ ಆದಾಯ ಬರಲು ಸಮಯ ಬೇಕಾಗುತ್ತದೆ.ಪ್ರಮೋಟರ್ ನಿಯಂತ್ರಣ: ರಿಲಯನ್ಸ್ ಇಂಡಸ್ಟ್ರೀಸ್ ಬಹುಪಾಲು ಮಾಲೀಕತ್ವವನ್ನು ಉಳಿಸಿಕೊಳ್ಳುತ್ತದೆ. ಸಣ್ಣ ಷೇರುದಾರರು ಆಡಳಿತ ಮತ್ತು ಸಂಬಂಧಿತ ಅಪಾಯಗಳನ್ನು ನಿರ್ಣಯಿಸಬೇಕಾಗುತ್ತದೆ.ಮಾರುಕಟ್ಟೆ ಚಂಚಲತೆ: ಮಾರುಕಟ್ಟೆ ಪರಿಸ್ಥಿತಿಗಳು ದುರ್ಬಲಗೊಂಡರೆ ಅಥವಾ ಹೂಡಿಕೆದಾರರ ಬೇಡಿಕೆ ಬದಲಾದರೆ, ಬಲವಾದ ಐಪಿಒ ಷೇರುಗಳ ಬೆಲೆ ಕುಸಿಯಬಹುದುಭಾರಿ ಬೇಡಿಕೆಜಿಯೊ ಪ್ಲಾಟ್ಫಾರ್ಮ್ನ ₹30,213 ಕೋಟಿ ಮೌಲ್ಯದ ಐಪಿಒ ಹೂಡಿಕೆದಾರರಿಂದ ಭಾರಿ ಬೇಡಿಕೆ ಮುಂದುವರಿದಿದೆ. ಬಿಡ್ಡಿಂಗ್ ಪ್ರಕ್ರಿಯೆಯ ಎರಡನೇ ದಿನವಾದ ಗುರುವಾರ, ಬೆಳಿಗ್ಗೆ 10:45ರ ಹೊತ್ತಿಗೆ ಚಿಲ್ಲರೆ ಹೂಡಿಕೆದಾರರ ವಿಭಾಗವು ಸಂಪೂರ್ಣವಾಗಿ ಭರ್ತಿಯಾಗಿದೆ.ಮಧ್ಯಾಹ್ನ 3:10 ರ ವೇಳೆಗೆ, ಜಿಯೊ ಪ್ಲಾಟ್ಫಾರ್ಮ್ಸ್ ಐಪಿಒ 4.38 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರ ವಿಭಾಗದಲ್ಲಿ 10.07 ಪಟ್ಟು ಸಬ್ಸ್ಕ್ರೈಬ್ ಆಗಿದ್ದರೆ, ಸಾಂಸ್ಥಿಕೇತರ ಹೂಡಿಕೆದಾರರ ವಿಭಾಗವು 4.60 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಚಿಲ್ಲರೆ ಹೂಡಿಕೆದಾರರ ವಿಭಾಗವು 1.40 ಪಟ್ಟು ಸಬ್ಸ್ಕ್ರೈಬ್ ಆಗಿದ್ದರೆ, ಷೇರುದಾರರ ವಿಭಾಗವು 3.36 ಪಟ್ಟು ಮತ್ತು ಉದ್ಯೋಗಿಗಳ ವಿಭಾಗವು 1.93 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಹೂಡಿಕೆದಾರರು ಸುಮಾರು 86.47 ಕೋಟಿ ಷೇರುಗಳಿಗೆ ಬಿಡ್ ಸಲ್ಲಿಸಿದ್ದಾರೆ.ಜಿಯೊ ಪ್ಲಾಟ್ಫಾರ್ಮ್ಸ್ ತನ್ನ ಬಹುನಿರೀಕ್ಷಿತ ಐಪಿಒವನ್ನು ಬುಧವಾರ(ಅ. 21) ಸಾರ್ವಜನಿಕರಿಗಾಗಿ ಮುಕ್ತಗೊಳಿಸಿತ್ತು. ಮೂರು ದಿನಗಳ ಕಾಲ ನಡೆಯುವ ಈ ಐಪಿಒ ಪ್ರಕ್ರಿಯೆಯು ಅಕ್ಟೋಬರ್ 23 ರಂದು ಕೊನೆಗೊಳ್ಳಲಿದೆ.