ಜೀವನದಲ್ಲೇ ಅತ್ಯಂತ ಯಶಸ್ವಿ ವರ್ಷವಾಗಲಿ... ಪ್ರೇಮ್ಗೆ ಶುಭಕೋರಿದ ರಕ್ಷಿತಾ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಜೋಗಿ ಪ್ರೇಮ್ ಅವರು ಇಂದು (ಅಕ್ಟೋಬರ್ 22) ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಪ್ರೇಮ್ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.ನಟ ಪ್ರೇಮ್, ನಟಿ ರಕ್ಷಿತಾ ಪ್ರೇಮ್, ಮಗ ಸೂರ್ಯ ಹುಟ್ಟುಹಬ್ಬದ ಸಂಭ್ರಮದಲ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಜೋಗಿ ಪ್ರೇಮ್ ಅವರು ಇಂದು (ಅಕ್ಟೋಬರ್ 22) ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಪ್ರೇಮ್ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.ನಟ ಪ್ರೇಮ್, ನಟಿ ರಕ್ಷಿತಾ ಪ್ರೇಮ್, ಮಗ ಸೂರ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪತಿ ಪ್ರೇಮ್ ಅವರಿಗೆ ಪತ್ನಿ ರಕ್ಷಿತಾ ಪ್ರೇಮ್ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ. ಅಅದರೊಂದಿಗೆ ಜೊತೆಗೆ ಮಧ್ಯರಾತ್ರಿ ಕೇಕ್ ಕಟ್ ಮಾಡಿಸಿದ ಫೋಟೊ ಹಂಚಿಕೊಂಡು, ‘ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಪ್ರೇಮ್. ಈ ವರ್ಷ ನಿಮ್ಮ ವೃತ್ತಿಜೀವನದಲ್ಲೇ ಅತ್ಯಂತ ಯಶಸ್ವಿ ವರ್ಷವಾಗಲಿ’ ಎಂದು ಬರೆದುಕೊಂಡಿದ್ದಾರೆ.ನಟ ಪ್ರೇಮ್ಪ್ರೇಮ್ ಅವರು ‘ಎಕ್ಸ್ಕ್ಯೂಸ್ ಮಿ’, ‘ಜೋಗಿ’, ‘ಕರಿಯ’, ‘ಈ ಪ್ರೀತಿ ಯಾಕೆ ಭೂಮಿ ಮೇಲಿದೆ’, ‘ಜೋಗಯ್ಯ’, ‘ಜೋಗಿ’, ‘ಡಿಕೆ’, ‘ದಿ ವಿಲನ್’, ‘ಏಕ್ ಲವ್ ಯಾ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಅವರ ಸಂಯೋಜನೆಯಲ್ಲಿ ಹೊಸ ಸಿನಿಮಾ ಸೆಟ್ಟೆರಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಪ್ರೇಮ್ ಅವರು ಹೆಚ್ಚಿನ ಮಾಹಿತಿ ನೀಡಬೇಕಿದೆ.ಪ್ರೇಮ್ ಅವರ ಹುಟ್ಟುಹಬ್ಬ ಸಂಭ್ರಮದ ವೇಳೆ ರಕ್ಷಿತಾ, ನಟ ರಾಣಾ ದಂಪತಿ, ಮಗ ಸೂರ್ಯ ಸೇರಿದಂತೆ ಹಲವಾರು ಮಂದಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. View this post on Instagram