ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ಆನೆ ಸೋಮಣ್ಣನ ದಾಂದಲೆ
ಶಿವಮೊಗ್ಗ: ಮೈಸೂರಿನ ರಾಜ ಸವಾರಿಗೆ ಪ್ರತಿಬಿಂಬದಂತೆ ತೋರುವ ಶಿವಮೊಗ್ಗದ ದಸರಾ ಜಂಬೂ ಸವಾರಿ ವೇಳೆ ಆನೆ ‘ಸೋಮಣ್ಣ’ನ ದಾಂದಲೆಯಿಂದ ಆದ ಅವಘಡಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣವೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.ಈ ಹಿಂದಿನ ಜಂಬೂ ಸವಾರಿಗಳ ಯಶಸ್ವಿ ಕ್ಯಾಪ್ಟನ್ ‘ಸಾಗರ’ನಿಗೆ ಕಾಲು ನೋವಿನ ಕಾರಣ ನೀಡಿ ಕೇವಲ 24 ಗಂಟೆಗಳ ಹಿಂದಷ್ಟೇ ನೇತೃತ್ವ ಬದಲಾಯಿಸಲಾಯಿತು. ಮೊದಲ

ಶಿವಮೊಗ್ಗ: ಮೈಸೂರಿನ ರಾಜ ಸವಾರಿಗೆ ಪ್ರತಿಬಿಂಬದಂತೆ ತೋರುವ ಶಿವಮೊಗ್ಗದ ದಸರಾ ಜಂಬೂ ಸವಾರಿ ವೇಳೆ ಆನೆ ‘ಸೋಮಣ್ಣ’ನ ದಾಂದಲೆಯಿಂದ ಆದ ಅವಘಡಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣವೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.ಈ ಹಿಂದಿನ ಜಂಬೂ ಸವಾರಿಗಳ ಯಶಸ್ವಿ ಕ್ಯಾಪ್ಟನ್ ‘ಸಾಗರ’ನಿಗೆ ಕಾಲು ನೋವಿನ ಕಾರಣ ನೀಡಿ ಕೇವಲ 24 ಗಂಟೆಗಳ ಹಿಂದಷ್ಟೇ ನೇತೃತ್ವ ಬದಲಾಯಿಸಲಾಯಿತು. ಮೊದಲ ಬಾರಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸೋಮಣ್ಣನಿಗೆ ವಾಸ್ತವವಾಗಿ ಕುಮ್ಕಿ ಆನೆ ಆಗಿ ತಾಲೀಮು ನೀಡಲಾಗಿತ್ತು. ಆದರೆ ‘ಅನಿವಾರ್ಯ’ ಕಾರಣ ನೀಡಿ ರಾತ್ರೋರಾತ್ರಿ ಅನನುಭವಿ ಸೋಮಣ್ಣನಿಗೆ ‘ನಾಯಕ’ನಾಗಿ ಬಡ್ತಿ ನೀಡಲಾಯಿತು. ಅದರ ಬದಲಿಗೆ ಈ ಹಿಂದೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ‘ಅನುಭವಿ’ ಬಹದ್ದೂರ್ಗೆ ಅಂಬಾರಿ ಹೊರುವ ಹೊಣೆ ನೀಡಬಹುದಿತ್ತು ಎಂದು ಹೇಳಲಾಗುತ್ತಿದೆ.ತಾಲೀಮಿನ ಕೊರತೆ: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಸಾಮಾನ್ಯವಾಗಿ 65 ದಿನಗಳ ತರಬೇತಿ ನೀಡಲಾಗುತ್ತದೆ. ಅಲ್ಲಿ ಅಂಬಾರಿ ಹೊರುವ ಸಾಮರ್ಥ್ಯ ಪರೀಕ್ಷೆ ಮಾತ್ರವಲ್ಲ ಜನರೊಂದಿಗೆ ಬೆರೆಯುವ, ಪಟಾಕಿ, ಜನಜಂಗುಳಿ, ವಾಹನಗಳ ಸದ್ದು ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಯುವ ರೀತಿ ಆನೆಗಳನ್ನು ಸಜ್ಜುಗೊಳಿಸಲಾಗುತ್ತದೆ. ಆದರೆ ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಆನೆ ಶಿಬಿರದಿಂದ ಗಾಜನೂರು ರಸ್ತೆಯಲ್ಲಿ ನಾಲ್ಕು ದಿನ, ಶಿವಮೊಗ್ಗ ನಗರದಲ್ಲಿ ವಾರ ಕಾಲ ತಾಲೀಮು ನಡೆಸಲಾಗಿದೆ. ಇಲ್ಲಿ ಜನಜಂಗುಳಿ, ವಾದ್ಯಮೇಳ, ಸಿಡಿಮದ್ದಿನ ಶಬ್ಧ ತಡೆದುಕೊಳ್ಳುವ ಯಾವುದೇ ತರಬೇತಿ ಆನೆಗಳಿಗೆ ಕೊಟ್ಟಿಲ್ಲ.ಹೆಣ್ಣಾನೆಗಳ ಸಾಂಗತ್ಯ ಇಲ್ಲದಿರುವುದು: ಈ ಹಿಂದಿನ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆಯ ಆಸುಪಾಸಿನಲ್ಲಿ ಹೆಣ್ಣಾನೆಗಳು ಸಾಂಗತ್ಯ ನೀಡುತ್ತಿದ್ದವು. ಎರಡು ವರ್ಷಗಳ ಹಿಂದೆ ಹೆಣ್ಣಾನೆ ನೇತ್ರಾವತಿ ದಸರಾ ಜಂಬೂ ಸವಾರಿಯ ತಾಲೀಮಿಗೆ ಬಂದಾಗ ಮರಿಗೆ ಜನ್ಮವಿತ್ತು ಸುದ್ದಿಯಾಗಿತ್ತು. ಆಗಿನಿಂದ ಹೆಣ್ಣಾನೆಗಳ ಬಳಕೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಹೆಣ್ಣಾನೆಗಳು ಇದ್ದರೆ ಸಾಮಾನ್ಯವಾಗಿ ಗಂಡಾನೆ ಶಾಂತ ಚಿತ್ತವಾಗಿ ವರ್ತಿಸುತ್ತದೆ. ಏಕಾಏಕಿ ಉದ್ರಿಕ್ತಗೊಳ್ಳುವುದಿಲ್ಲ. ಜಗಳಕ್ಕೆ ಬೀಳುವುದಿಲ್ಲ. ಆದರೆ ಬುಧವಾರ ಮೆರವಣಿಗೆಯಲ್ಲಿ ಆನೆಗಳಾದ ಸೋಮಣ್ಣ ಹಾಗೂ ಬಹದ್ದೂರ್ ನಡುವಿನ ಮುನಿಸು ಅವಘಡಕ್ಕೆ ಮುನ್ನುಡಿ ಬರೆದಿದೆ ಎನ್ನಲಾಗಿದೆ.ಆತಿಯಾದ ಆತ್ಮವಿಶ್ವಾಸ?: ಆನೆ ‘ಸಾಗರ’ನ ಗಾಯದ ಸಮಸ್ಯೆ ಜಂಬೂ ಸವಾರಿಯ ಹಿಂದಿನ ದಿನದವರೆಗೂ ಬಹಿರಂಗಗೊಂಡಿರಲಿಲ್ಲ. ಅದು ಗೊತ್ತಾದ ನಂತರ ಆನೆಗಳ ಬಳಕೆ ಬದಲು ಎರಡು ವರ್ಷಗಳ ಹಿಂದಿನಂತೆ ವಾಹನದಲ್ಲಿ ಅಂಬಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಬಹುದಿತ್ತು. ರಾಜಕೀಯ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ಅಧಿಕಾರಿಗಳು ‘ಅನನುಭವಿ’ ಸೋಮಣ್ಣನಿಗೆ ದಿಢೀರನೆ ಮಣೆ ಹಾಕಿದರು. ಹೇಗೋ ನಡೆಯುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸವೇ ಇಲ್ಲಿ ಮುಳುವಾಗಿದೆ ಎಂಬ ಮಾತು ಇಲಾಖೆಯ ಒಳಗಿನಿಂದಲೇ ಕೇಳಿಬರುತ್ತಿದೆ. ಆದರೆ ರಾಜಕೀಯ ಒತ್ತಡದ ಆರೋಪವನ್ನು ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ನಿರಾಕರಿಸುತ್ತಾರೆ.ಜನಜಂಗುಳಿಯ ನಡುವೆ ಇದ್ದರೂ ಆನೆ ‘ಸೋಮಣ್ಣ’ ಪುಂಡಾಟದ ವೇಳೆ ಯಾರ ಮೇಲೂ ದಾಳಿ ಮಾಡಿಲ್ಲ. ಇದು ಅಕ್ಷರಶಃ ಅದೃಷ್ಟವೇ ಸರಿ. ಯಾವುದೋ ಶಕ್ತಿ ಅಲ್ಲಿ ನೆರೆದವರನ್ನು ಕಾದಿದೆ. ಯಾವುದೇ ಜೀವ ಹಾನಿ ಆಗಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳುತ್ತಾರೆ.ಆಗಿರುವ ನಷ್ಟಕ್ಕೆ ಸಿಗಲಿದೆ ವಿಮೆ!ವಿಶೇಷವೆಂದರೆ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಮೆ ಮಾಡಿಸಲಾಗುತ್ತದೆ. ಮೆರವಣಿಗೆಯಲ್ಲಿ ಏನಾದರೂ ಆನೆಯಿಂದ ಅವಘಡ ಆದರೆ ಸಂಬಂಧಿಸಿದ ವಿಮಾ ಕಂಪನಿಗಳು ನಷ್ಟ ಭರಿಸುತ್ತವೆ. ಹೀಗಾಗಿ ‘ಸೋಮಣ್ಣ’ನ ಗದ್ದಲದ ವೇಳೆ ನೆಲಕ್ಕೆ ಬಿದ್ದು ಜಖಂಗೊಂಡಿರುವ ಬೆಳ್ಳಿ ಅಂಬಾರಿ, ಕಾರು, ಬೈಕುಗಳಿಗೆ ಆಗಿರುವ ಹಾನಿಯನ್ನು ವಿಮಾ ಕಂಪನಿಯೇ ಭರಿಸಲಿದೆ ಎಂದು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.– ಪ್ರಸನ್ನಕೃಷ್ಣ ಪಟಗಾರ, ವನ್ಯಜೀವಿ ವಿಭಾಗದ ಡಿಸಿಎಫ್, ಶಿವಮೊಗ್ಗತಾಲೀಮಿನ ವೇಳೆ ‘ಸೋಮಣ್ಣ’ ತೋರಿದ ಸಾಮರ್ಥ್ಯದ ಹಿನ್ನೆಲೆಯಲ್ಲಿ ಕಾವಾಡಿ ಹಾಗೂ ಮಾವುತರ ಅಭಿಪ್ರಾಯ ಪಡೆದು ಅಂಬಾರಿ ಹೊರಲು ಆಯ್ಕೆ ಮಾಡಲಾಯಿತು. ಕಾರಣ