ಬಿಗ್ಬಾಸ್ ಮನೆಯಲ್ಲಿ ಸೌಂದರ್ಯ, ತಾಂಡವ್ ರಾಮ್ ಜೋಡಿ ಆಟಕ್ಕೆ ಮನಸೋತ ವೀಕ್ಷಕರು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ 46 ದಿನಗಳು ಕಳೆದಿವೆ. ದಿನದಿಂದ ದಿನಕ್ಕೆ ಟಾಸ್ಕ್ಗಳು ಕಠಿಣವಾಗುತ್ತಿದ್ದು, ಸ್ಪರ್ಧಿಗಳ ನಡುವಿನ ಸ್ಪರ್ಧೆ ಮತ್ತಷ್ಟು ರೋಚಕ ಹಂತ ತಲುಪಿದೆ.ಈ ವಾರ ಬಿಗ್ ಬಾಸ್ ಮನೆಮಂದಿಗೆ ‘ಲೂಟಿಕೋರರು ಮತ್ತು ಕಾವಲುಗಾರರು’ ಎಂಬ ಪರಿಕಲ್ಪನೆಯ ವಿಶೇಷ ಟಾಸ್ಕ್ ನೀಡಿದ್ದಾರೆ. ಪ್ರಸ್ತುತ ಲೂಟಿಕೋರರ ಸ್ಥಾನದಲ್ಲಿರುವ ಸೌಂದರ್ಯ, ತಾಂ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ 46 ದಿನಗಳು ಕಳೆದಿವೆ. ದಿನದಿಂದ ದಿನಕ್ಕೆ ಟಾಸ್ಕ್ಗಳು ಕಠಿಣವಾಗುತ್ತಿದ್ದು, ಸ್ಪರ್ಧಿಗಳ ನಡುವಿನ ಸ್ಪರ್ಧೆ ಮತ್ತಷ್ಟು ರೋಚಕ ಹಂತ ತಲುಪಿದೆ.ಈ ವಾರ ಬಿಗ್ ಬಾಸ್ ಮನೆಮಂದಿಗೆ ‘ಲೂಟಿಕೋರರು ಮತ್ತು ಕಾವಲುಗಾರರು’ ಎಂಬ ಪರಿಕಲ್ಪನೆಯ ವಿಶೇಷ ಟಾಸ್ಕ್ ನೀಡಿದ್ದಾರೆ. ಪ್ರಸ್ತುತ ಲೂಟಿಕೋರರ ಸ್ಥಾನದಲ್ಲಿರುವ ಸೌಂದರ್ಯ, ತಾಂಡವ್, ಆಸಿಯಾ, ಲಕ್ಷ್ಮೀ, ಕುಮಾರಿ ಹಾಗೂ ಸೋನಿಕಾ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಕಾವಲುಗಾರರಾಗಿರುವ ಪ್ರಶಾಂತ್, ಜಗದೀಶ್, ಧನುಷ್, ಕಿರಣ್, ಯಶಸ್ ಹಾಗೂ ಗಾನವಿ ಸುರಕ್ಷಿತ ವಲಯದಲ್ಲಿದ್ದಾರೆ.ಪ್ರೀತಿಸಿದ ಹುಡುಗನನ್ನು ಪರಿಚಯಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ‘ಬಿಗ್ ಬಾಸ್’ ಸ್ಟುಡಿಯೊ ಮುಂದೆ ಜಮಾಯಿಸಿದ ಅಭಿಮಾನಿಗಳು: ಗಿಲ್ಲಿ–ಕಾವ್ಯ ಕಟೌಟ್! View this post on Instagram ಟಾಸ್ಕ್ ನಿಯಮವೇನು?ಈ ಆಟದ ನಿಯಮದಂತೆ, ಮ್ಯೂಸಿಯಂನಲ್ಲಿ ಇರಿಸಲಾಗಿರುವ ಅಮೂಲ್ಯ ವಸ್ತುಗಳನ್ನು ನಾಮಿನೇಟ್ ಆಗಿರುವ ಸ್ಪರ್ಧಿಗಳು (ಲೂಟಿಕೋರರು) ಕದ್ದು ತರಬೇಕು. ಆ ವಸ್ತುಗಳನ್ನು ಕಳ್ಳತನವಾಗದಂತೆ ಕಾಪಾಡುವುದು ಕಾವಲುಗಾರರ ಜವಾಬ್ದಾರಿಯಾಗಿದೆ. ಸ್ಪರ್ಧಿ ಗಗನ್ ಚಿನ್ನಪ್ಪ ಈ ಆಟದ ಉಸ್ತುವಾರಿ ವಹಿಸಿಕೊಂಡಿದ್ದಾರೆ. View this post on Instagram ಸೌಂದರ್ಯ-ತಾಂಡವ್ಗೆ ಮೆಚ್ಚುಗೆಯ ಸುರಿಮಳೆಕಳೆದ ಸಂಚಿಕೆಯಲ್ಲಿ ಲೂಟಿಕೋರರಾದ ಸೌಂದರ್ಯ ಹಾಗೂ ತಾಂಡವ್ ವಸ್ತುಗಳನ್ನು ಕಳವು ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಟಾಸ್ಕ್ಗಳ ಮಧ್ಯೆ ಉತ್ತಮ ಮನರಂಜನೆ ನೀಡುತ್ತಾ, ತಮಾಷೆ ಮಾಡುತ್ತಾ ಈ ಇಬ್ಬರೂ ವೀಕ್ಷಕರ ಮನಗೆದ್ದಿದ್ದಾರೆ. ಅದರಲ್ಲೂ ಸೌಂದರ್ಯ ಅವರ ಹಾಸ್ಯಪ್ರಜ್ಞೆ, ನೃತ್ಯ ಹಾಗೂ ಕಾವಲುಗಾರರನ್ನು ಕೀಟಲೆ ಮಾಡುವ ಶೈಲಿ ಪ್ರೇಕ್ಷಕರಲ್ಲಿ ನಗು ತರಿಸಿದೆ.ಈ ಇಬ್ಬರ ಆಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೊಗೆ ನೆಟ್ಟಿಗರು ಕಮೆಂಟ್ ಮಾಡಿ, ‘ಸೌಂದರ್ಯ ಆಟ ಸೂಪರ್’, ‘ಈ ವಾರದ ಕಿಚ್ಚನ ಚಪ್ಪಾಳೆ ತಾಂಡವ್ ಹಾಗೂ ಸೌಂದರ್ಯಗೆ ಸಿಗಬೇಕು’, ‘ಪ್ರತಿ ವಾರವೂ ವಿಭಿನ್ನ ಆಟದ ಮೂಲಕ ಶೆಟ್ಟಿ ಡಾನ್ ಅಚ್ಚರಿ ಮೂಡಿಸುತ್ತಿದ್ದಾಳೆ’ ಎಂದು ಹೊಗಳಿದ್ದಾರೆ.ಇನ್ನೊಂದೆಡೆ, ಕಾವಲು ಕಾಯಬೇಕಿದ್ದ ಕಿರಣ್ ಹಾಗೂ ಗಾನವಿ ಪರಸ್ಪರ ಜಗಳವಾಡಿಕೊಳ್ಳುತ್ತಿದ್ದ ಸಮಯವನ್ನೇ ಬಂಡವಾಳ ಮಾಡಿಕೊಂಡ ತಾಂಡವ್ ಮತ್ತು ಸೌಂದರ್ಯ, ಮ್ಯೂಸಿಯಂನಲ್ಲಿದ್ದ ಕಿರೀಟ, ವಜ್ರವನ್ನು ಕಳವು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರೋಮೊ ಇದೀಗ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.