ರಾಹುಲ್ ಗಾಂಧಿ ಭಾರತ ವಿರೋಧಿ ಟೂಲ್ಕಿಟ್ ಗ್ಯಾಂಗ್ನ ಬೆಂಬಲ ಯಾಚಿಸುತ್ತಿದ್ದಾರೆ: ಬಿಜೆಪಿ ಮುಖಂಡ ಗೌರವ್ ಭಾಟಿಯಾ
– ರಾಹುಲ್ ಗಾಂಧಿಗೆ ಫ್ರಾನ್ಸ್ ಗ್ರೂಪ್ ಬೆಂಬಲ ಸೂಚಿಸ್ತಿರೋದು ಯಾಕೆ..? ನವದೆಹಲಿ: ರಾಹುಲ್ ಗಾಂಧಿ (Rahul Gandhi) ಭಾರತ ವಿರೋಧಿ ಟೂಲ್ಕಿಚ್ ಗ್ಯಾಂಗ್ ಬೆಂಬಲ ಯಾಚಿಸುತ್ತಿದ್ದಾರೆ. ಪ್ರತಿಭಟನೆಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಕಿಡಿ ಕಾರಿದ್ದಾರೆ. ಸುದ್ದಿಗೋಷ

– ರಾಹುಲ್ ಗಾಂಧಿಗೆ ಫ್ರಾನ್ಸ್ ಗ್ರೂಪ್ ಬೆಂಬಲ ಸೂಚಿಸ್ತಿರೋದು ಯಾಕೆ..? ನವದೆಹಲಿ: ರಾಹುಲ್ ಗಾಂಧಿ (Rahul Gandhi) ಭಾರತ ವಿರೋಧಿ ಟೂಲ್ಕಿಚ್ ಗ್ಯಾಂಗ್ ಬೆಂಬಲ ಯಾಚಿಸುತ್ತಿದ್ದಾರೆ. ಪ್ರತಿಭಟನೆಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಕಿಡಿ ಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʻರಾಹುಲ್ ಗದ್ದರ್ʼ (ದ್ರೋಹಿ ಎಂದರ್ಥ) ಎಂದು ಪದೇ ಪದೇ ಉಲ್ಲೇಖಿಸಿದರಲ್ಲದೇ, ರಾಹುಲ್ ಗಾಂಧಿಗೆ ಫ್ರಾನ್ಸ್ ಗ್ರೂಪ್ ಬೆಂಬಲ ಸೂಚಿಸ್ತಿರೋದು ಯಾಕೆ..? ವಿಪಕ್ಷಗಳು ಭಾರತ ವಿರೋಧಿ ನಿಲುವು ಹೇಗೆ ತೆಗೆದುಕೊಳ್ಳುತ್ತದೆ? ಅಂತಲೂ ಪ್ರಶ್ನೆ ಮಾಡಿದ್ದಾರೆ. VIDEO | Delhi: Addressing a press conference, BJP spokesperson Gaurav Bhatia, says, “Leader of Opposition Rahul Gandhi is presenting a model of betrayal before the country. Today, a report has appeared in a highly reputed newspaper, detailing how these alleged links of betrayal are connected to foreign agencies. Therefore, it would not be wrong to ask, ‘Who is the leader of these traitors?’ I am saying this with deep pain and anguish. It is India’s misfortune that the country’s Leader of Opposition is irresponsible and immature. And if I present the evidence before you, it would not be wrong to call him a traitor or Mir Jafar. An investigation by Fox News digital shows how, in France and several other countries, organisations have created an ecosystem across nine countries that attempts to overthrow duly elected governments… constitutional governments chosen by the people. It is a ‘red-green ecosystem of protest.’ According to the Fox News report, red represents communist groups, while green represents Islamist groups. If we look at this report, it states, ‘Global chaos grows to 101 groups.’ Global chaos, anarchy and disorder… these 101 organisations are operating across nine countries.” #BJP #RahulGandhi #Congress (Full video available on PTI Videos – https://t.co/bIyFWTfmBd) — Press Trust of India (@PTI_News) October 22, 2026 ಕಾಂಗ್ರೆಸ್ ನಾಯಕತ್ವವು ಅಂತಾರಾಷ್ಟ್ರೀಯ ಗುಂಪುಗಳೊಂದಿಗೆ ತೊಡಗಿಸಿಕೊಂಡಿದ್ದು, ಅವರ ಚಟುವಟಿಕೆಗಳು, ಹಣಕಾಸು ಮತ್ತು ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಹೇಳಿದ್ದಾರೆ. ಈ ಮಧ್ಯೆ 9 ದೇಶಗಳಲ್ಲಿ ಈ ರೀತಿ ಪ್ರತಿಭಟನೆ ಸಂಯೋಜಿಸುವಲ್ಲಿ ಭಾಗಿಯಾಗಿರುವ 101 ಸಂಸ್ಥೆಗಳನ್ನು ಪತ್ತೆಯಾಗಿರುವುದು ಕಂಡುಬಂದಿದೆ. ಇಂದು ಪತ್ರಿಕೆಯೊಂದರಲ್ಲಿ ವಿಶ್ವಾಸಘಾತುಕತನದ ಎಳೆಗಳು ವಿದೇಶಿ ಸಂಸ್ಥೆಗಳೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತಿವೆ ಕುರಿತು ಸವಿಸ್ತಾರವಾಗಿ ವರದಿ ಪ್ರಕಟಿಸಲಾಗಿದೆ. ಈ ದೇಶದ್ರೋಹಿ ಕಮಾಂಡರ್-ಇನ್-ಚೀಫ್ ಯಾರು? ಈ ದೇಶದ್ರೋಹಿ ನಾಯಕ ಯಾರು? ಹಾಗಾದರೆ ಅದು ತಪ್ಪಾಗುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಬೇನಿಯಾದಲ್ಲಿ ನಡೆದ ಪ್ರತಿಭಟನೆಗಳ ಕುರಿತು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ಅನ್ನೂ ಭಾಟಿಯಾ ಉಲ್ಲೇಖಿಸಿದರು. ಈ ಪೋಸ್ಟ್ ಅನ್ನು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧದ ಕ್ರಮಗಳಿಗೆ ಬೆಂಬಲ ಎಂದು ಅರ್ಥೈಸಬಹುದು. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿ ಈ ಘಟನೆಗಳು ನಡೆದಿವೆ. ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು. ಆದರೆ ನಾಶಪಡಿಸುವುದು, ಸಂಸ್ಥೆಗಳನ್ನು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು ಮತ್ತು ಹಿಂಸಾತ್ಮಕ ಪ್ರತಿಭಟನೆಗಳನ್ನ ನಡೆಸುವುದು ಮೂಲಭೂತ ಹಕ್ಕುಗಳಲ್ಲ ಹೇಳಿದ್ದಾರೆ. ಇದೇ ವೇಳೆ ಪ್ರಗತಿಪರ ಅಂತರರಾಷ್ಟ್ರೀಯ ಸಂಘಟನೆ (Progressive International) ಜೊತೆಗಿನ ಸಭೆಯಲ್ಲಿ ಏನು ಚರ್ಚಿಸಲಾಯಿತು? ಯಾವುದೇ ಒಪ್ಪಂದಕ್ಕೆ ಬರಲಾಗಿತ್ತೇ ಎಂಬುದನ್ನು ಬಹಿರಂಗಪಡಿಸುವಂತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಸಂಘಟನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಮತ್ತು ವಿದೇಶಿ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಅವುಗಳಿಗೆ ಯಾವುದೇ ಸಂಪರ್ಕವಿದೆಯೇ ಎಂಬುದನ್ನೂ ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.