ಹಾವೇರಿ | ಪದವೀಧರರ ಪಶ್ಚಿಮ ಮತಕ್ಷೇತ್ರ: ಚುನಾವಣೆಗೆ ನಾಳೆ ಮತದಾನ
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಅ. 23ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ, 14 ಅಭ್ಯರ್ಥಿಗಳ ‘ಮತ’ ಭವಿಷ್ಯವನ್ನು ಪದವೀಧರ ಮತದಾರರು ನಿರ್ಧರಿಸಲಿದ್ದಾರೆ.ಹಾವೇರಿ ಜಿಲ್ಲೆಯ 24,648 ಪದವೀಧರರು ಮತದಾನಕ್ಕಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಮತದಾರ

ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಅ. 23ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ, 14 ಅಭ್ಯರ್ಥಿಗಳ ‘ಮತ’ ಭವಿಷ್ಯವನ್ನು ಪದವೀಧರ ಮತದಾರರು ನಿರ್ಧರಿಸಲಿದ್ದಾರೆ.ಹಾವೇರಿ ಜಿಲ್ಲೆಯ 24,648 ಪದವೀಧರರು ಮತದಾನಕ್ಕಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದ್ದು, ಭಾವಚಿತ್ರವಿರುವ ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ 29 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅಲ್ಲಿಯೇ ಮತದಾನ ಪ್ರಕ್ರಿಯೆ ನಡೆಯಲಿದೆ.ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡು ಪದವೀಧರರ ಪಶ್ಚಿಮ ಮತಕ್ಷೇತ್ರವಿದೆ. ನಾಲ್ಕು ಜಿಲ್ಲೆಗಳಲ್ಲಿರುವ 97,398 ಪದವೀಧರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಅಕ್ಟೋಬರ್ 27ರಂದು ಧಾರವಾಡದಲ್ಲಿ ಮತಗಳ ಎಣಿಕೆ ಜರುಗಲಿದೆ.ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರು ಇರುವ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪಿಆರ್ಒ, ಎಪಿಆರ್ಒ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ತರಬೇತಿ ನೀಡಲಾಗಿದೆ. ಜಿಲ್ಲೆಯ ಆಯಾ ತಾಲ್ಲೂಕು ತಹಶೀಲ್ದಾರರ ಕಚೇರಿಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ.‘ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಸಲಾಗುತ್ತಿದೆ. ಪ್ರತಿಯೊಂದು ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿ 1 ಹಾಗೂ 2 ಸೇರಿ ನಾಲ್ಕು ಜನ ಅಧಿಕಾರಗಳ ತಂಡ ಇರುತ್ತದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ಲೋಪದೋಷಗಳು ಉಂಟಾಗದಂತೆ ಜಾಗೂರಕತೆಯಿಂದ ಇರಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.ಬಹಿರಂಗ ಪ್ರಚಾರ ಅಂತ್ಯ: ಚುನಾವಣೆಯ ಬಹಿರಂಗ ಪ್ರಚಾರವು ಅ. 21ರಂದು ಅಂತ್ಯಗೊಂಡಿದೆ. ಮನೆ ಮನೆ ಪ್ರಚಾರ ಶುರುವಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ಮುಂದುವರಿಸಿದ್ದಾರೆ.ಮತಗಟ್ಟೆ ಇರುವ ಶಾಲೆ, ಕಾಲೇಜಿಗೆ ರಜೆಹಾವೇರಿ ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆ ಇರುವ ಶಾಲೆ–ಕಾಲೇಜುಗಳಿಗೆ ಅ. 22 ಹಾಗೂ ಅ. 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.ಬ್ಯಾಡಗಿ ತಾಲ್ಲೂಕು ಕಚೇರಿ, ಕಾಗಿನೆಲೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಾನಗಲ್ ತಾಲೂಕು ಕಚೇರಿ, ತಿಳವಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಅಕ್ಕಿ ಆಲೂರು ಗ್ರಾಮ ಪಂಚಾಯಿತಿ ಕಚೇರಿ, ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಹಾವೇರಿ ತಹಶೀಲ್ದಾರ್ ಕಚೇರಿ, ಹಾವೇರಿ ಎಸಿ ಕಚೇರಿ, ನಗರಸಭೆ ಕಚೇರಿ, ಗುತ್ತಲ ನಾಡಕಚೇರಿ, ಕರ್ಜಗಿ ಗ್ರಾಮ ಪಂಚಾಯಿತಿ ಕಚೇರಿ, ಹoಸಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಿರೇಕೆರೂರು ತಾಲ್ಲೂಕು ಕಚೇರಿ, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ, ಹೊಸ ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ, ಸವಣೂರು ತಾಲ್ಲೂ ಕಚೇರಿ, ಹತ್ತಿಮತ್ತೂರ ಗ್ರಾಮ ಪಂಚಾಯಿತಿ ಕಚೇರಿ, ಶಿಗ್ಗಾವಿ ತಾಲ್ಲೂಕು ಕಚೇರಿ, ದುಂಡಶಿ ಗ್ರಾಮ ಪಂಚಾಯಿತಿ ಕಚೇರಿ, ಬಂಕಾಪೂರ ಟಿಎಂಸಿ ಕಚೇರಿ, ರಾಣೆಬೆನ್ನೂರು ಹೊಸಮನಿ ಸಿದ್ದಪ್ಪ ಪಿಯು ಕಾಲೇಜ್, ರಾಣೆಬೆನ್ನೂರು ಶಂಕರ ಮಾದರಿ ಸ್ಕೂಲ್, ರಾಣೆಬೆನ್ನೂರು ತಾಲ್ಲೂಕು ಪಂಚಾಯಿತಿ ಕಚೇರಿ, ರಾಣೆಬೆನ್ನೂರು ತಹಶೀಲ್ದಾರ್ ಕಚೇರಿ, ರಾಣೆಬೆನ್ನೂರು ಮುನ್ಸಿಪಲ್ ಹೈಸ್ಕೂಲ್, ಮೆಡ್ಲೇರಿ ಗ್ರಾಮ ಪಂಚಾಯಿತಿ ಕಚೇರಿ, ಹಲಗೇರಿ ಮಾದರಿ ಸೆಂಟ್ರಲ್ ಸ್ಕೂಲ್, ಕೊಡಿಹಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಲ್ಲಿ ಮತದಾನ ಜರುಗಲಿದ.ಅಭ್ಯರ್ಥಿಗಳುಮೋಹನ ಲಿಂಬಿಕಾಯಿ (ಕಾಂಗ್ರೆಸ್), ಎಸ್.ವಿ. ಸಂಕನೂರು (ಬಿಜೆಪಿ), ನಿಶಾಂತ ಶಂಕರ ಬಂಕಾಪೂರ (ಕೆಆರ್ಎಸ್), ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ (ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ), ತಳವಾರ ಶಿವಕುಮಾರ (ಜನತಾ ಚಳವಳಿ ಭಾರತ), ಅಬ್ದುಲ್ ಮನ್ನಾನ, ಜಿ.ಎಚ್. ಇಮ್ರಾಪೂರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್. ಬಳೆಗಾರ, ಕಾಂತಕುಮಾರ್ ಆರ್., ಜಿಶಾನ ಡಿ. ಸಿರಸಂಗಿ, ಜೀಶಾನ ಅಹ್ಮದಖಾನ ಪಠಾಣ, ಬಸವರಾಜ ಶಂಕ್ರಪ್ಪ ಕೊಟಗಿ, ಸಂತೋಷ ಮನೋಹರ ವೆರ್ಣೆಕರ್ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಅ. 23ರಂದು ಮತದಾನ ಮಾಡುವ ಪದವೀಧರ ಮತದಾರರಿಗೆ ಒಂದು ದಿನ ಪೂರ್ವಾನುಮತಿ ಷರತ್ತಿನೊಂದಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ‘ಮತದಾನದಲ್ಲಿ ಭಾಗವಹಿಸುವ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಅರ್ಹ ಪದವೀಧರು ರಜೆಯನ್ನು ಸದುಪಯೋಗಪಡಿಸಿಕೊಂಡು ಮತದಾನದ ಹಕ್ಕು ಚಲಾಯಿಸಬೇಕು’ ಎಂದು ಕೋರಿದ್ದಾರೆ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅಮೂಲ್ಯವಾದದ್ದು. ಪ್ರತಿಯೊಬ್ಬ ನೋಂದಾಯಿತ ಪದವೀಧರ ಮತದಾರರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಬೇಕು. ಮತದಾನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ261022-22-974852078