CA ಇಂಟರ್ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಇವರೇ ನೋಡಿ ಆಲ್ ಇಂಡಿಯಾ ಟಾಪರ್ಸ್
ನವದೆಹಲಿ: ಸೆಪ್ಟೆಂಬರ್ನಲ್ಲಿ ನಡೆದಿದ್ದ ಚಾರ್ಟರ್ಡ್ ಅಕೌಂಟೆಂಟ್ಸ್ (CA) ಇಂಟರ್ಮೀಡಿಯೇಟ್ ಪರೀಕ್ಷೆಯ ಫಲಿತಾಂಶವನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಗುರುವಾರ (ಅಕ್ಟೋಬರ್ 22) ಪ್ರಕಟಿಸಿದೆ.ಈ ಬಾರಿಯ ಪರೀಕ್ಷೆಯಲ್ಲಿ ಮುಂಬೈನ ನೀಲ್ ರಾಜೇಶ್ ಶಾ ಹಾಗೂ ನಾಸಿಕ್ನ ಚಂದಕ್ ಸಾಕ್ಷಿ ಎಂಬುವವರು ಅಖಿಲ ಭಾರತ ಮಟ್ಟದಲ್ಲಿ ಜಂಟಿಯಾಗಿ ಮ

ನವದೆಹಲಿ: ಸೆಪ್ಟೆಂಬರ್ನಲ್ಲಿ ನಡೆದಿದ್ದ ಚಾರ್ಟರ್ಡ್ ಅಕೌಂಟೆಂಟ್ಸ್ (CA) ಇಂಟರ್ಮೀಡಿಯೇಟ್ ಪರೀಕ್ಷೆಯ ಫಲಿತಾಂಶವನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಗುರುವಾರ (ಅಕ್ಟೋಬರ್ 22) ಪ್ರಕಟಿಸಿದೆ.ಈ ಬಾರಿಯ ಪರೀಕ್ಷೆಯಲ್ಲಿ ಮುಂಬೈನ ನೀಲ್ ರಾಜೇಶ್ ಶಾ ಹಾಗೂ ನಾಸಿಕ್ನ ಚಂದಕ್ ಸಾಕ್ಷಿ ಎಂಬುವವರು ಅಖಿಲ ಭಾರತ ಮಟ್ಟದಲ್ಲಿ ಜಂಟಿಯಾಗಿ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಇಬ್ಬರೂ 600 ಅಂಕಗಳಿಗೆ ತಲಾ 502 ಅಂಕ ಗಳಿಸಿ, ಶೇ 83.67ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.ಚೆನ್ನೈನ ಶೃತಿ ವಿ. 492 ಅಂಕಗಳೊಂದಿಗೆ (ಶೇ 82) ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದರೆ, ಸೂರತ್ನ ಪ್ರೇಮ್ ಅಗರವಾಲ್ 490 ಅಂಕ (ಶೇ. 81.67) ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ICAI ಪ್ರಕಟಣೆಯಲ್ಲಿ ತಿಳಿಸಿದೆ.ಅಭ್ಯರ್ಥಿಗಳು ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ caresults.icai.org ಗೆ ಭೇಟಿ ನೀಡಿ ತಮ್ಮ ರೋಲ್ ನಂಬರ್ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶ ಪರಿಶೀಲಿಸಬಹುದು.ಸಿಎ ಇಂಟರ್ಮೀಡಿಯೇಟ್ ಫಲಿತಾಂಶ ಹೀಗೆ ಪರಿಶೀಲಿಸಿಅಧಿಕೃತ ವೆಬ್ಸೈಟ್ caresults.icai.org ಗೆ ಭೇಟಿ ನೀಡಿ.ಸಿಎ ಇಂಟರ್ಮೀಡಿಯೇಟ್ 2026ರ ಸೆಪ್ಟೆಂಬರ್ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ.ನಿಮ್ಮ ನೋಂದಣಿ ಸಂಖ್ಯೆ ಮತ್ತು ರೋಲ್ ನಂಬರ್ ನಮೂದಿಸಿ.ಅಗತ್ಯ ವಿವರಗಳನ್ನು ಸಲ್ಲಿಸಿ.ಸ್ಟ್ರೀನ್ ಮೇಲೆ ಕಾಣಿಸುವ ಫಲಿತಾಂಶವನ್ನು ಪರಿಶೀಲಿಸಿ.ಅಂತಿಮವಾಗಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ