ನೀತಿಗೆ ವಿರುದ್ಧ ಇದ್ದ ರೆಹಾನ್ ವಾದ್ರಾ ಚಿತ್ರಗಳನ್ನು ತೆಗೆದುಹಾಕಿದ್ದೇವೆ: ಸೊಸೈಟಿ
ನವದೆಹಲಿ: ನಮ್ಮ ನೀತಿಗಳಿಗೆ ಹೊಂದಾಣಿಕೆಯಾಗದ ಕಾರಣ ರೆಹಾನ್ ವಾದ್ರಾ ಅವರ ಕೆಲವು ಚಿತ್ರಗಳನ್ನು ಪ್ರದರ್ಶನದಿಂದ ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದೇವೆ ಎಂದು ಬಿಕಾನೇರ್ ಹೌಸ್ ಸೊಸೈಟಿ ಗುರುವಾರ ತಿಳಿಸಿದೆ.ಉಳಿದ ಚಿತ್ರಗಳ ಪ್ರದರ್ಶನ ಮುಂದುವರಿದಿದೆ ಎಂದು ಅದು ತಿಳಿಸಿದೆ.ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯ, ಸರ್ವಾಧಿಕಾರಿ ಸರ್ಕಾರ: ಪ್ರಿಯಾಂಕಾ ಗಾಂಧಿ ತಾನು ಕಲೆ ಹಾ
ನವದೆಹಲಿ: ನಮ್ಮ ನೀತಿಗಳಿಗೆ ಹೊಂದಾಣಿಕೆಯಾಗದ ಕಾರಣ ರೆಹಾನ್ ವಾದ್ರಾ ಅವರ ಕೆಲವು ಚಿತ್ರಗಳನ್ನು ಪ್ರದರ್ಶನದಿಂದ ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದೇವೆ ಎಂದು ಬಿಕಾನೇರ್ ಹೌಸ್ ಸೊಸೈಟಿ ಗುರುವಾರ ತಿಳಿಸಿದೆ.ಉಳಿದ ಚಿತ್ರಗಳ ಪ್ರದರ್ಶನ ಮುಂದುವರಿದಿದೆ ಎಂದು ಅದು ತಿಳಿಸಿದೆ.ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯ, ಸರ್ವಾಧಿಕಾರಿ ಸರ್ಕಾರ: ಪ್ರಿಯಾಂಕಾ ಗಾಂಧಿ ತಾನು ಕಲೆ ಹಾಗೂ ಸಂಸ್ಕೃತಿಯ ಪ್ರಚುರಕ್ಕೆ ಇರುವ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಪ್ರದರ್ಶನ ಹಾಗೂ ಇನ್ನಿತರ ಚಟುವಟಿಕೆಗಳ ಬಿಕಾನೇರ್ ಹೌಸ್ ಆಡಳಿತ ಸೊಸೈಟಿಯ ನೀತಿಗೆ ಅನುಗುಣವಾಗಿಯೇ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಬಿಕಾನೇರ್ ಹೌಸ್ನಲ್ಲಿ ಆಯೋಜಿಸಲಾಗಿರುವ ರೆಹಾನ್ ವಾದ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ ಛಾಯಾಚಿತ್ರ ಪ್ರದರ್ಶನದಲ್ಲಿನ ಕೆಲವು ಚಿತ್ರಗಳು ಸೊಸೈಟಿಯ ನೀತಿಗೆ ಅನುಗುಣವಾಗಿಲ್ಲ ಎಂಬುದು ಕಂಡುಬಂದಿದೆ. ಹೀಗಾಗಿ, ಆ ಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ’ ಎಂದು ಅದು ತಿಳಿಸಿದೆ.ಸೊಸೈಟಿಯ ನೀತಿಗೆ ಅನುಗುಣವಾಗಿ ಇದ್ದ ಚಿತ್ರಗಳ ಪ್ರದರ್ಶನ ಮುಂದುವರಿದಿದೆ ಎಂದು ಅದು ಮಾಹಿತಿ ನೀಡಿದೆ.ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಬರ್ಟ್ ವಾದ್ರಾ ಅವರ ಮಗನಾಗಿರುವ ರೆಹಾನ್, ಛಾಯಾಗ್ರಹಕ ಹಾಗೂ ಕಲಾವಿದ. ದೆಹಲಿ ಪ್ರತಿಭಟನೆ ಸಂಬಂಧ ಇದ್ದ ಹಲವು ಚಿತ್ರಗಳನ್ನು ಬಿಕನೇರ್ ಹೌಸ್ ಆಡಳಿತ ಮಂಡಳಿಯು ತೆಗೆದುಹಾಕಿದೆ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಎಡೆ ಮಾಡಿ ಕೊಟ್ಟಿತ್ತು.ನೀವು ಜೆನ್ ಝೀಗಳೇ ಅಲ್ಲ: ಸಿಜೆಪಿ ನಾಯಕರಾದ ಸೌರಭ್, ಅಶುತೋಶ್ಗೆ ದೆಹಲಿ ಹೈಕೋರ್ಟ್‘ನೋ ಐಡಿಯಾ ಇಸ್ ಫೈನಲ್’ ಎಂಬ ಶೀರ್ಷಿಕೆಯ ಈ ಛಾಯಾಚಿತ್ರ ಪ್ರದರ್ಶನದ ಪೂರ್ವವೀಕ್ಷಣೆ ಬುಧವಾರ ನಡೆದಿದ್ದು, ಗುರುವಾರದಿಂದ ಸಾರ್ವಜನಿಕರಿಗೆ ತೆರೆಯಲಿದೆ.ಸಂಜೆ 3.30ಕ್ಕೆ ತನಗೆ ಮಾಹಿತಿ ನೀಡಿದ ಅಧಿಕಾರಿಗಳು, ಸಂಜೆ 5 ಗಂಟೆಯೊಳಗೆ ಛಾಯಾಚಿತ್ರಗಳನ್ನು ತೆಗೆದುಹಾಕದಿದ್ದರೆ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದರು. ಪ್ರದರ್ಶನದ ವಿವರವಾದ ಪ್ರಸ್ತಾವನೆ ಮತ್ತು ವಿನ್ಯಾಸವನ್ನು ಬಿಕಾನೇರ್ ಹೌಸ್ ಆಡಳಿತಕ್ಕೆ ಬಹಳ ಮುಂಚಿತವಾಗಿಯೇ ಸಲ್ಲಿಸಿದ್ದೆ ಎಂದು ರೆಹಾನ್ ಹೇಳಿದ್ದಾರೆ. ಈ ಕ್ರಮವನ್ನು ‘ಹಾಸ್ಯಾಸ್ಪದ’ ಎಂದು ಕರೆದಿರುವ ಪ್ರಿಯಾಂಕಾ ಗಾಂಧಿ, ದೇಶಾದ್ಯಂತ ಯುವಜನರ ಧ್ವನಿಯನ್ನು ಅಡಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಪೊಲೀಸ್ ಅಪರಾಧ ಎಸಗಿದ್ದಾರೆ: CJPಯ ಪ್ರಶ್ನಿಸುವ ಹಕ್ಕಿಗೆ ಅಣ್ಣಾಮಲೈ ಬೆಂಬಲ