29 ರನ್ ಹೊಡೆದ್ರೂ ಹಿಟ್ಮ್ಯಾನ್ ವಿಶ್ವದಾಖಲೆ ಮುರಿದ ಅಭಿಷೇಕ್ ಶರ್ಮಾ
ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಮೊದಲ ಟಿ20 ಪಂದ್ಯವು ಇಂದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಸಿಕ್ಸರ್ ಬೌಂಡರಿಗಳ ಸುರಿಮಳೆಯ ಆಟದಲ್ಲಿ ಭಾರತ ಗೆದ್ದು ಇತಿಹಾಸ ಸೃಷ್ಟಿಸಿತು. ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ಸೃಷ್ಟಿಯಾಯಿತು. ಹೌದು. ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (Abhishek Sharma) 12 ಎಸ

ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಮೊದಲ ಟಿ20 ಪಂದ್ಯವು ಇಂದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಸಿಕ್ಸರ್ ಬೌಂಡರಿಗಳ ಸುರಿಮಳೆಯ ಆಟದಲ್ಲಿ ಭಾರತ ಗೆದ್ದು ಇತಿಹಾಸ ಸೃಷ್ಟಿಸಿತು. ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ಸೃಷ್ಟಿಯಾಯಿತು. ಹೌದು. ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (Abhishek Sharma) 12 ಎಸೆತಗಳಲ್ಲಿ ಸ್ಫೋಟಕ 29 ರನ್ ಬಾರಿಸಿ ಔಟಾದರು. ಆದಾಗ್ಯೂ ಅಭಿಷೇಕ್ ಶರ್ಮಾ ಅವರಿಂದ ವಿಶೇಷ ದಾಖಲೆ ಸೃಷ್ಟಿಯಾಯಿತು. 12 ಎಸೆತಗಳಲ್ಲಿ ಅಭಿ 2 ಬೌಂಡರಿ, 3 ಸಿಕ್ಸರ್ಗಳನ್ನು ಸಿಡಿಸಿದ್ರು. ಈ ಮೂಲಕ ಪವರ್ ಪ್ಲೇ ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ನಂ.1 ಆಟಗಾರನಾಗಿ ಹೊರಹೊಮ್ಮಿದರು. ಇದಕ್ಕೂ ಮುನ್ನ ಈ ದಾಖಲೆ ಟೀಂ ಇಂಡಿಯಾ ಮಾಜಿ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಹೆಸರಲ್ಲಿತ್ತು. ರೋಹಿತ್ ಶರ್ಮಾ (Rohit Sharma) ಪವರ್ಪ್ಲೇನಲ್ಲಿ ಒಟ್ಟು 98 ಸಿಕ್ಸರ್ ಸಿಡಿಸಿದ್ದರು. ಅಭಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸ್ ಬಾರಿಸುವ ಮೂಲಕ 99 ಸಿಕ್ಸರ್ ಪೂರೈಸಿ, ದಾಖಲೆ ಮುರಿದರು. ಪವರ್ ಪ್ಲೇನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಟಾಪ್ – 5 ಬ್ಯಾಟರ್ಸ್ ಅಭಿಷೇಕ್ ಶರ್ಮಾ – 99 ರೋಹಿತ್ ಶರ್ಮಾ – 98 ಮಾರ್ಟಿನ್ ಗುಪ್ಟಿಲ್ – 97 ಮುಹಮ್ಮದ್ ವಸೀಮ್ – 95 ಪೌಲ್ ಸ್ಟ್ರಿಲ್ಲಿಂಗ್ – 94