ಪುತ್ರನ ಚಿತ್ರಗಳನ್ನು ಪ್ರದರ್ಶನದಿಂದ ಹೊರಗಿಟ್ಟ ಬಿಕಾನೆರ್ ಹೌಸ್: ಪ್ರಿಯಾಂಕಾ ಕಿಡಿ
ನವದೆಹಲಿ: ರಾಷ್ಟ್ರಧ್ವಜದ ಒಂದು ಚಿತ್ರ ಹಾಗೂ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಛಾಯಾಚಿತ್ರ ಪ್ರದರ್ಶನದಿಂದ ಹೊರಗಿಡುವಂತೆ ಬಿಕಾನೆರ್ ಹೌಸ್ ಆಡಳಿತ ಮಂಡಳಿ ತಮಗೆ ಸೂಚಿಸಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ, ಕಲಾವಿದ ಹಾಗೂ ಛಾಯಾಗ್ರಾಹಕ ರೆಹಾನ್ ವಾದ್ರಾ ಹೇಳಿದ್ದಾರೆ.‘ನೋ ಐಡಿಯಾ ಈಸ್ ಫೈನಲ್’ (No Idea

ನವದೆಹಲಿ: ರಾಷ್ಟ್ರಧ್ವಜದ ಒಂದು ಚಿತ್ರ ಹಾಗೂ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಛಾಯಾಚಿತ್ರ ಪ್ರದರ್ಶನದಿಂದ ಹೊರಗಿಡುವಂತೆ ಬಿಕಾನೆರ್ ಹೌಸ್ ಆಡಳಿತ ಮಂಡಳಿ ತಮಗೆ ಸೂಚಿಸಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ, ಕಲಾವಿದ ಹಾಗೂ ಛಾಯಾಗ್ರಾಹಕ ರೆಹಾನ್ ವಾದ್ರಾ ಹೇಳಿದ್ದಾರೆ.‘ನೋ ಐಡಿಯಾ ಈಸ್ ಫೈನಲ್’ (No Idea is Final) ಶೀರ್ಷಿಕೆಯಡಿ ಆಯೋಜಿಸಿರುವ ಈ ಛಾಯಾಚಿತ್ರ ಪ್ರದರ್ಶನದ ಪೂರ್ವವೀಕ್ಷಣೆ ಬುಧವಾರ ನಡೆಯಿತು. ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಪ್ರದರ್ಶನ ಆರಂಭಕ್ಕೆ ಒಂದು ದಿನ ಮುನ್ನ ಪ್ರತಿಭಟನೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಆಡಳಿತ ಮಂಡಳಿ ಸೂಚಿಸಿತ್ತು ಎಂದು ರೆಹಾನ್ ತಿಳಿಸಿದ್ದಾರೆ.‘ಬುಧವಾರ ಮಧ್ಯಾಹ್ನ 3.30ಕ್ಕೆ ಈ ಕುರಿತು ಮಾಹಿತಿ ನೀಡಲಾಯಿತು. ಸಂಜೆ 5 ಗಂಟೆಯೊಳಗೆ ಚಿತ್ರಗಳನ್ನು ತೆಗೆದುಹಾಕದಿದ್ದರೆ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು. ಇಂತಹ ಚಿತ್ರಗಳನ್ನು ಪ್ರದರ್ಶಿಸಲು ಇದು ಸೂಕ್ತ ಸಮಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು’ ಎಂದು ಅವರು ಹೇಳಿದ್ದಾರೆ.ಛಾಯಾಚಿತ್ರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿಯೇ ಆಡಳಿತ ಮಂಡಳಿಗೆ ಸಲ್ಲಿಸಿದ್ದರೂ, ಕೊನೆಯ ಕ್ಷಣದಲ್ಲಿ ಶೇ 50ರಷ್ಟು ಕಲಾಕೃತಿಗಳನ್ನು ತೆಗೆದುಹಾಕುವಂತೆ ಸೂಚಿಸಿರುವುದು ಸರಿಯಲ್ಲ ಎಂದು ರೆಹಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯುವಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ: ಪ್ರಿಯಾಂಕಾ ಗಾಂಧಿಬಿಕಾನೆರ್ ಹೌಸ್ ಕ್ರಮವನ್ನು ಟೀಕಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ , ದೇಶದಾದ್ಯಂತ ಯುವಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.‘ರೆಹಾನ್ ತೆಗೆದ ಫೋಟೊಗಳಲ್ಲಿ ಯಾರನ್ನೂ ಟೀಕಿಸುವ ಅಥವಾ ಅವಹೇಳನ ಮಾಡುವ ಅಂಶಗಳಿಲ್ಲ. ಅವು ಪ್ರತಿಭಟನೆಗಳ ದೃಶ್ಯಗಳನ್ನು ದಾಖಲಿಸಿರುವ ಛಾಯಾಚಿತ್ರಗಳಷ್ಟೇ’ ಎಂದು ಅವರು ತಿಳಿಸಿದ್ದಾರೆ.‘ಇಂದು ಅವನಿಗೆ ಹೀಗಾಗಿದೆ, ನಾಳೆ ಮತ್ತೊಬ್ಬ ಕಲಾವಿದನಿಗೂ ಹೀಗಾಗಬಹುದು’ ಎಂದು ಅವರು ಹೇಳಿದ್ದಾರೆ.