ರಾಹುಲ್ ದೇಶದ್ರೋಹಿ; ‘ಸರ್ಕಾರ ಬದಲಾವಣೆ’ ಸಂಚು ರೂಪಿಸಿದ್ದೇ ಕಾಂಗ್ರೆಸ್: ಬಿಜೆಪಿ
ನವದೆಹಲಿ: ‘ಅರಾಜಕತೆ ಸೃಷ್ಟಿಸುವ ಮತ್ತು ದೇಶದ್ರೋಹ’ದ ಮಾದರಿಯೊಂದನ್ನು ದೇಶದ ಮುಂದಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ದೇಶದ್ರೋಹಿ’ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.‘ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಫ್ರಾನ್ಸ್ನಲ್ಲಿನ ಗಲಭೆಗಳಿಗೆ ನಂಟಿದೆ’ ಎಂಬ ಮಾಧ್ಯಮವೊಂದರ ವರದಿ ಉಲ್ಲೇಖಿಸಿರುವ ಬಿಜೆಪಿ, ‘ಈ ವರದಿಯು ಅರಾಜಕತೆ ಉಂಟು ಮಾಡುವ ಮತ

ನವದೆಹಲಿ: ‘ಅರಾಜಕತೆ ಸೃಷ್ಟಿಸುವ ಮತ್ತು ದೇಶದ್ರೋಹ’ದ ಮಾದರಿಯೊಂದನ್ನು ದೇಶದ ಮುಂದಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ದೇಶದ್ರೋಹಿ’ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.‘ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಫ್ರಾನ್ಸ್ನಲ್ಲಿನ ಗಲಭೆಗಳಿಗೆ ನಂಟಿದೆ’ ಎಂಬ ಮಾಧ್ಯಮವೊಂದರ ವರದಿ ಉಲ್ಲೇಖಿಸಿರುವ ಬಿಜೆಪಿ, ‘ಈ ವರದಿಯು ಅರಾಜಕತೆ ಉಂಟು ಮಾಡುವ ಮತ್ತು ಸರ್ಕಾರ ಬದಲಾಯಿಸುವ ಕಾಂಗ್ರೆಸ್ನ ಸಂಚನ್ನು ಬಹಿರಂಗಪಡಿಸಿದೆ’ ಎಂದು ಹೇಳಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ,‘ಭಾರತದಲ್ಲಿನ ಪ್ರತಿಭಟನೆಗಳು, ಫ್ರಾನ್ಸ್ನಲ್ಲಿ ನಡೆಯುತ್ತಿರುವ ಗಲಭೆಗಳಿಗೂ ಹಾಗೂ ವಿದೇಶಿ ಸಂಸ್ಥೆಗಳ ನಡುವಿನ ನಂಟು ಕುರಿತು ಮಾಧ್ಯಮ ವರದಿಯು ವಿವರಿಸಿದೆ. ಅರಾಜಕತೆ ಸೃಷ್ಟಿಸುವ ಹಾಗೂ ಸರ್ಕಾರ ಬದಲಾವಣೆಗಾಗಿ ಪ್ರತಿಭಟಿಸುವ ದೇಶದ್ರೋಹಿಗಳ ನಾಯಕ ಯಾರು ಎಂದು ಪ್ರಶ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದ ಅವರು, ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೇ ದೇಶದ್ರೋಹಿ’ ಎಂದು ಆರೋಪಿಸಿದರು.‘ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಮತ್ತು ಫ್ರಾನ್ಸ್ನಲ್ಲಿನ ಗಲಭೆಗಳಿಗೆ ನಂಟಿದೆ ಎಂಬುದನ್ನು ತಾನು ಕೈಗೊಂಡ ತನಿಖೆ ಬಹಿರಂಗಪಡಿಸಿದೆ’ ಎಂದು ಫಾಕ್ಸ್ ನ್ಯೂಸ್ ಸುದ್ದಿಸಂಸ್ಥೆ ಹೇಳಿಕೊಂಡಿದೆ. ಇದನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ಈ ವರದಿಗಳನ್ನು ಪ್ರಸ್ತಾಪಿಸಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.‘ಫ್ರಾನ್ಸ್ ಸೇರಿ ಒಂಬತ್ತು ದೇಶಗಳಲ್ಲಿ ಚುನಾಯಿತ ಸರ್ಕಾರಗಳನ್ನು ಕಿತ್ತೊಗೆಯಲು ಕೆಲ ಸಂಘಟನೆಗಳು ತಂತ್ರ ರೂಪಿಸಿವೆ ಎಂಬುದನ್ನು ಫಾಕ್ಸ್ ನ್ಯೂಸ್ ತನಿಖೆ ಹೇಳುತ್ತದೆ. ಎಡಪಂಥೀಯ ಹಾಗೂ ಇಸ್ಲಾಮಿಕ್ ಸಂಘಟನೆಗಳು (ರೆಡ್–ಗ್ರೀನ್ ಇಕೊ ಸಿಸ್ಟಮ್) ನಡೆಸುತ್ತಿರುವ ಪ್ರತಿಭಟನೆ ಇದು’ ಎಂದು ಅವರು ಹೇಳಿದರು.ಗೌರವ್ ಭಾಟಿಯಾ ಬಿಜೆಪಿ ವಕ್ತಾರಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೇಜವಾಬ್ದಾರಿ ಮತ್ತು ಅಪ್ರಬುದ್ಧವಾಗಿರುವುದು ಭಾರತದ ದುರದೃಷ್ಟ. ಅವರನ್ನು ದೇಶದ್ರೋಹಿ ಅಥವಾ ಮೀರ್ ಜಾಫರ್ ಎಂದು ಕರೆದರೆ ತಪ್ಪಾಗದುಪ್ರದೀಪ್ ಭಂಡಾರಿ ಬಿಜೆಪಿ ವಕ್ತಾರಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಪ್ರಜಾಪ್ರಭುತ್ವ ವಿರೋಧಿ ವಿದೇಶಿ ಶಕ್ತಿಗಳ ಕೈಗೊಂಬೆಗಳು. ಅರಾಜಕತೆ ಸೃಷ್ಟಿಗಾಗಿ ನವೆಂಬರ್ 1ರಂದು ನಡೆಸಲಿರುವ ಪ್ರತಿಭಟನೆಗೆ ನಿರ್ದೇಶನ ಪಡೆಯಲು ರಾಹುಲ್ ಗಾಂಧಿ ವಿಯೆಟ್ನಾಂಗೆ ಹೋಗಿದ್ದಾರೆಯೇ?ಕಾಂಗ್ರೆಸ್ ಸಂಚು ಬಯಲು‘ದೇಶದ ಚುನಾಯಿತ ಸರ್ಕಾರ ಬದಲಾಯಿಸಲು ಕಾಂಗ್ರೆಸ್ ರೂಪಿಸಿದ್ದ ಸಂಚು ಜಾಗತಿಕ ಮಟ್ಟದಲ್ಲಿ ನಡೆದ ತನಿಖೆಯಿಂದ ಬಹಿರಂಗಗೊಂಡಿದೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. ‘ಪ್ರೊಗ್ರೆಸಿವ್ ಇಂಟರ್ನ್ಯಾಷನಲ್(ಪಿಐ) ಎಂಬ ಕಮ್ಯುನಿಸ್ಟ್ ಸಂಘಟನೆಯು ಫ್ರಾನ್ಸ್ ಅಲ್ಬೇನಿಯಾ ಹಾಗೂ ಭಾರತದಲ್ಲಿ ಪ್ರತಿಭಟನೆ ನಡೆಸಿದವರ ನಡುವೆ ಸಂದೇಶಗಳ ವಿನಿಮಯಕ್ಕೆ ಹೇಗೆ ಸಮನ್ವಯ ಸಾಧಿಸುತ್ತಿತ್ತು ಎಂಬುದನ್ನು ತನಿಖಾ ವರದಿಯಲ್ಲಿ ವಿವರಿಸಲಾಗಿದೆ’ ಎಂದು ಹೇಳಿದ್ದಾರೆ. ‘ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರೊಗ್ರೆಸಿವ್ ಇಂಟರ್ನ್ಯಾಷನಲ್ ಪ್ರತಿನಿಧಿಗಳನ್ನು ತಮ್ಮ ನಿವಾಸ 10 ಜನಪಥ್ನಲ್ಲಿ 2025ರ ಏಪ್ರಿಲ್ 10ರಂದು ಭೇಟಿ ಮಾಡಿದ್ದರು’ ಎಂದೂ ಭಂಡಾರಿ ಆರೋಪಿಸಿದ್ದಾರೆ. ಗಮನ ಬೇರೆಡೆ ಸೆಳೆವ ತಂತ್ರ ಫಲಿಸದು: ಕಾಂಗ್ರೆಸ್ ವಿರೋಧ ಪಕ್ಷಗಳು ಸರ್ಕಾರ ಬದಲಾವಣೆಗಾಗಿ ಸಂಚು ರೂಪಿಸುವೆ’ ಎಂಬ ಬಿಜೆಪಿ ಆರೋಪಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತಾಶೆಯಿಂದ ವಿಚಲಿತಗೊಂಡಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಸುಳ್ಳುಗಳನ್ನು ಹಬ್ಬಿಸಲು ನಡೆಸುವ ಅದರ ಪ್ರಯತ್ನ ಫಲಿಸದು’ ಎಂದು ಗುರುವಾರ ತಿರುಗೇಟು ನೀಡಿದೆ. ‘ಮತ ಕಳ್ಳತನ ಎಂಬುದು ವಾಸ್ತವ. ಇದು ಈಗಾಗಲೇ ಸಾಬೀತಾಗಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ. ‘ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕೇಂದ್ರ ಸರ್ಕಾರ ಎಷ್ಟೇ ದಮನ ಮಾಡಿದರೂ ಪ್ರತಿಭಟನೆಗಳು ನಿಲ್ಲುವುದಿಲ್ಲ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಖವಾಡ ಕಳಚಿದ್ದು ದೇಶದ ಜನರು ಈ ಇಬ್ಬರನ್ನೇ ಉತ್ತರದಾಯಿಯಾಗಿ ಮಾಡಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಕಾನೂನಿಗೆ ವಿರುದ್ಧವಾಗಿ ಮತದಾರರ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತರು ಇಸಿಐಎನ್ಇಟಿ ಪೋರ್ಟಲ್ಅನ್ನು ಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ‘10 ಕೋಟಿಗೂ ಅಧಿಕ ಜನರು ತಮ್ಮ ಮತ ಚಲಾವಣೆ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗದ ದತ್ತಾಂಶಗಳೇ ಹೇಳುತ್ತವೆ’ ಎಂದೂ ಹೇಳಿದ್ದಾರೆ.