ವಿಡಿಯೊ: ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ ಜಾತ್ರೆ
ಆಧುನಿಕತೆಯ ಭರಾಟೆಯಲ್ಲೂ ಶ್ರಮ ಸಂಸ್ಕೃತಿ ಮತ್ತು ಸ್ವಾವಲಂಬಿ ಬದುಕಿನ ಪರಂಪರೆಯನ್ನು ಉಳಿಸಿಕೊಂಡಿರೋದು ಕೊಪ್ಮಳದ ಜಿಲ್ಲೆಯ ಗ್ರಾಮ ಹನುಮನಹಳ್ಳಿ. ಇಲ್ಲಿನ ಮಾರುತೇಶ್ವರ ದೇವಸ್ಥಾನದ ಜಾತ್ರೆಯ ಖರ್ಚು ವೆಚ್ಚದ ಲೆಕ್ಕ ಮುಗಿದ ಬಳಿಕ ಉಳಿಯುವ ಹಣದಲ್ಲಿ ಮುಕ್ಕಾಲು ಪಾಲನ್ನು ಗ್ರಾಮದ ಪ್ರತಿ ಮನೆಯ ಮಹಿಳೆಯರಿಗೆ ಹಂಚಲಾಗುತ್ತದೆ. ಪ್ರತಿವರ್ಷ ಮಹಿಳೆಯರಿಗೆ ₹8,000ದಿಂದ ₹10,000ದ

ಆಧುನಿಕತೆಯ ಭರಾಟೆಯಲ್ಲೂ ಶ್ರಮ ಸಂಸ್ಕೃತಿ ಮತ್ತು ಸ್ವಾವಲಂಬಿ ಬದುಕಿನ ಪರಂಪರೆಯನ್ನು ಉಳಿಸಿಕೊಂಡಿರೋದು ಕೊಪ್ಮಳದ ಜಿಲ್ಲೆಯ ಗ್ರಾಮ ಹನುಮನಹಳ್ಳಿ. ಇಲ್ಲಿನ ಮಾರುತೇಶ್ವರ ದೇವಸ್ಥಾನದ ಜಾತ್ರೆಯ ಖರ್ಚು ವೆಚ್ಚದ ಲೆಕ್ಕ ಮುಗಿದ ಬಳಿಕ ಉಳಿಯುವ ಹಣದಲ್ಲಿ ಮುಕ್ಕಾಲು ಪಾಲನ್ನು ಗ್ರಾಮದ ಪ್ರತಿ ಮನೆಯ ಮಹಿಳೆಯರಿಗೆ ಹಂಚಲಾಗುತ್ತದೆ. ಪ್ರತಿವರ್ಷ ಮಹಿಳೆಯರಿಗೆ ₹8,000ದಿಂದ ₹10,000ದವರೆಗೆ ಸಿಗುವ ಈ ಹಣವನ್ನು ಬಹುತೇಕರು ಕುರಿ ಸಾಕಾಣಿಕೆಗೆ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಜಾತ್ರೆಯ ಹಣದಿಂದ ಮಹಿಳೆಯರ ಬದುಕಿಗೆ ಆಸರೆಯಾಗಿರುವ ಈ ಗ್ರಾಮದ ವಿಶಿಷ್ಟ ಪರಂಪರೆ ನಿಜಕ್ಕೂ ಮಾದರಿ.
Read the complete story at Prajavani