SSLC, PUC ಪಬ್ಲಿಕ್ ಪರೀಕ್ಷೆ ಮುಂದೂಡಿಕೆ ಸಾಧ್ಯತೆ
ಬೆಂಗಳೂರು: ಜನಗಣತಿ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ (SSLC) ಮತ್ತು ಪಿಯುಸಿ (PUC) ಪಬ್ಲಿಕ್ ಪರೀಕ್ಷೆ ಮುಂದೂಡಿಕೆ ಸಾಧ್ಯತೆ ಇದೆ. ಜನವರಿಯಿಂದ ಕೇಂದ್ರ ಸರ್ಕಾರದ ಜನಗಣತಿ 2ನೇ ಹಂತ ಪ್ರಾರಂಭವಾಗಲಿದೆ. ಹೀಗಾಗಿ, ಎಸ್ಎಸ್ಎಲ್ಸಿ, ಪಿಯುಸಿ ಪಬ್ಲಿಕ್ ಪರೀಕ್ಷೆ ಮುಂದೂಡಿಕೆಗೆ ಶಾಲಾ ಶಿಕ್ಷಣ ಇಲಾಖೆಗೆ ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ ಪತ್ರ ಬರೆದಿದೆ. ಇದನ

ಬೆಂಗಳೂರು: ಜನಗಣತಿ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ (SSLC) ಮತ್ತು ಪಿಯುಸಿ (PUC) ಪಬ್ಲಿಕ್ ಪರೀಕ್ಷೆ ಮುಂದೂಡಿಕೆ ಸಾಧ್ಯತೆ ಇದೆ. ಜನವರಿಯಿಂದ ಕೇಂದ್ರ ಸರ್ಕಾರದ ಜನಗಣತಿ 2ನೇ ಹಂತ ಪ್ರಾರಂಭವಾಗಲಿದೆ. ಹೀಗಾಗಿ, ಎಸ್ಎಸ್ಎಲ್ಸಿ, ಪಿಯುಸಿ ಪಬ್ಲಿಕ್ ಪರೀಕ್ಷೆ ಮುಂದೂಡಿಕೆಗೆ ಶಾಲಾ ಶಿಕ್ಷಣ ಇಲಾಖೆಗೆ ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ ಪತ್ರ ಬರೆದಿದೆ. ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ಡೇ – ಬ್ಯಾರಕ್ ಬದಲಾವಣೆ ಬಗ್ಗೆ ಇಂದು ಕೋರ್ಟ್ ನಿರ್ಧಾರ ಪರೀಕ್ಷೆ ಮುಂದೂಡುವಂತೆ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಕೇಂದ್ರದ ಎರಡನೇ ಸುತ್ತಿನ ಜನಗಣತಿ ಜನವರಿ 25ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ. ಮಾರ್ಚ್ 1 ರಿಂದ 5 ವರೆಗೆ ಪರಿಷ್ಕರಣಾ ಸುತ್ತು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಪರೀಕ್ಷೆ ಮುಂದೂಡಿಕೆಗೆ ಮನವಿ ಮಾಡಲಾಗಿದೆ. ಈಗಾಗಲೇ ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷೆ ತಾತ್ಕಾಲಿಕ ಪಟ್ಟಿಯನ್ನು ಎಕ್ಸಾಂ ಬೋರ್ಡ್ ಬಿಡುಗಡೆ ಮಾಡಿದೆ. ಹೊಸ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: Asian Para Games: ಆರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬೋರ್ಡ್ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿ ಎಸ್ಎಸ್ಎಲ್ಸಿ ಪರೀಕ್ಷೆ 1- 2027 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಪರೀಕ್ಷೆ. ಎಸ್ಎಸ್ಎಲ್ಸಿ ಪರೀಕ್ಷೆ 2-2027 ಮೇ 24 ರಿಂದ ಮೇ 31ರವರೆಗೆ ಪರೀಕ್ಷೆ. 2ಪಿಯುಸಿ ಪರೀಕ್ಷೆ 1- 2027 ಫೆಬ್ರವರಿ 27 ರಿಂದ ಮಾರ್ಚ್ 17. 2ಪಿಯುಸಿ ಪರೀಕ್ಷೆ 2- 2027 ಮೇ 3 ರಿಂದ ಮೇ 15.