ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ–ಬೆಳ್ಳಿ ದರ ಕುಸಿತ, ಇಲ್ಲಿದೆ ಮಾಹಿತಿ
ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರವು ಗುರುವಾರ ಕಡಿಮೆ ಆಗಿದೆ. ಚಿನ್ನದ ಬೆಲೆಯು ಮೂರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ.ಈ ವರ್ಷದ ಆರಂಭದಲ್ಲಿ ಇದ್ದ ದಾಖಲೆಯ ಮಟ್ಟಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯು ಈಗ ಸರಿಸುಮಾರು ಶೇ 50ರಷ್ಟು ಕಡಿಮೆ ಆಗಿದೆ.ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹1,000 ಕಡಿಮೆ

ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರವು ಗುರುವಾರ ಕಡಿಮೆ ಆಗಿದೆ. ಚಿನ್ನದ ಬೆಲೆಯು ಮೂರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ.ಈ ವರ್ಷದ ಆರಂಭದಲ್ಲಿ ಇದ್ದ ದಾಖಲೆಯ ಮಟ್ಟಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯು ಈಗ ಸರಿಸುಮಾರು ಶೇ 50ರಷ್ಟು ಕಡಿಮೆ ಆಗಿದೆ.ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹1,000 ಕಡಿಮೆ ಆಗಿದ್ದು ₹1.48 ಲಕ್ಷಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಸಂಘಟನೆ ತಿಳಿಸಿದೆ. ಜುಲೈ 30 ಹೊತ್ತಿಗೆ ಚಿನ್ನದ ಬೆಲೆಯು ಇದೇ ಮಟ್ಟದಲ್ಲಿ ಇತ್ತು.ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹5,900ರಷ್ಟು ಕಡಿಮೆ ಆಗಿದ್ದು ₹2,07,500ಕ್ಕೆ ತಲುಪಿದೆ. ಈ ವರ್ಷದ ಜನವರಿ 29ರಂದು ಬೆಳ್ಳಿಯ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹4,04,500ಕ್ಕೆ ತಲುಪಿತ್ತು. ಆ ಬೆಲೆಗೆ ಹೋಲಿಸಿದರೆ ಈಗ ಬೆಳ್ಳಿಯ ಬೆಲೆ ಶೇ 48.7ರಷ್ಟು ಕುಸಿದಿದೆ.261023-51-1473033809
Read the complete story at Prajavani