ಉದ್ಯಮಿ ಮಸ್ಕ್ ಉಕ್ರೇನ್ನಲ್ಲಿ ಸ್ಟಾರ್ಲಿಂಕ್ ಪುನಃಸ್ಥಾಪಿಸಿದ್ದಾರೆ: ಟ್ರಂಪ್
ವಾಷಿಂಗ್ಟನ್: ಉದ್ಯಮಿ, SpaceX ಸಿಇಒ ಇಲಾನ್ ಮಾಸ್ಕ್ ಅವರು ಉಕ್ರೇನ್ನಲ್ಲಿ ಉಪಗ್ರಹ ಆಧಾರಿತ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ (Starlink) ಬಳಕೆಗೆ ಅನುಮತಿಯನ್ನು ಪುನಃಸ್ಥಾಪಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ತಿಳಿಸಿದ್ದಾರೆ. ಆದರೆ, ಈ ವಿಚಾರವಾಗಿ ಮಸ್ಕ್ ಜೊತೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲ

ವಾಷಿಂಗ್ಟನ್: ಉದ್ಯಮಿ, SpaceX ಸಿಇಒ ಇಲಾನ್ ಮಾಸ್ಕ್ ಅವರು ಉಕ್ರೇನ್ನಲ್ಲಿ ಉಪಗ್ರಹ ಆಧಾರಿತ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ (Starlink) ಬಳಕೆಗೆ ಅನುಮತಿಯನ್ನು ಪುನಃಸ್ಥಾಪಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ತಿಳಿಸಿದ್ದಾರೆ. ಆದರೆ, ಈ ವಿಚಾರವಾಗಿ ಮಸ್ಕ್ ಜೊತೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಉಕ್ರೇನ್ನಲ್ಲಿ ಸ್ಟಾರ್ಲಿಂಕ್ ಬಳಕೆ ಮೇಲೆ ಇರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಟ್ರಂಪ್ ಅವರು ಮಸ್ಕ್ಗೆ ಕರೆ ಮಾಡಿದ್ದರು ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿತ್ತು.ಟ್ರಂಪ್ – ಮಸ್ಕ್ ಮಾತುಕತೆಯ ಸ್ವಲ್ಪ ಸಮಯದ ನಂತರ, ಸ್ಟಾರ್ಲಿಂಕ್ ವ್ಯವಸ್ಥೆಯು ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ತಿಳಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ಹೆಚ್ಚು ವಿವರಗಳನ್ನು ಬಿಟ್ಟುಕೊಡಲಿಲ್ಲ.‘ನಾನು ಕರೆ ಮಾಡಿದ್ದೀನಾ ಅಥವಾ ಬೇರೆ ಯಾರಾದರೂ ಮಾಡಿ ಮಾತನಾಡಿದ್ದಾರಾ ಎಂಬ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದುಕೊಂಡಿದ್ದೇನೆ. ಒಟ್ಟಾರೆಯಾಗಿ ಹೇಳುವುದಾದರೆ, ಸ್ಟಾರ್ಲಿಂಕ್ ಬಳಕೆ ಅನುಮತಿಯನ್ನು ಪುನಃಸ್ಥಾಪಿಸಲಾಗಿದೆ’ ಎಂದಿದ್ದಾರೆ.ಉಕ್ರೇನ್ನಲ್ಲಿ ಸ್ಟಾರ್ಲಿಂಕ್ ವ್ಯವಸ್ಥೆ ಇನ್ನೂ ಸುಧಾರಿಸಿಲ್ಲ ಎಂದು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಬೆಳಿಗ್ಗೆಯಷ್ಟೇ ಹೇಳಿದ್ದರು. ಈ ವಿಚಾರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿರುವುದಾಗಿಯೂ ತಿಳಿಸಿದ್ದರು.ರಷ್ಯಾದೊಂದಿಗೆ 2022ರಿಂದ ಸಂಘರ್ಷ ನಡೆಸುತ್ತಿರುವ ಉಕ್ರೇನ್, ಸೇನಾ ಸಂವಹನ, ಡ್ರೋನ್ ಕಾರ್ಯಾಚರಣೆಗಳಿಗೆ ಸ್ಟಾರ್ಲಿಂಕ್ ಬಳಸುತ್ತಿದೆ. ಉಪಗ್ರಹ ಸೇವೆಯನ್ನು ನಿರ್ಬಂಧಿಸುವುದರಿಂದ ರಷ್ಯಾ ವಿರುದ್ಧದ ಕಾರ್ಯಾಚರಣೆಗಳಿಗೆ ಹಿನ್ನಡೆಯಾಗಲಿದೆ.