‘ಮನುಷ್ಯನ ಸರ್ವತೋಮುಖ ಸಾಧನೆಗೆ ಸದೃಢ ಆರೋಗ್ಯ ಮುಖ್ಯ’
ಮೂಡಲಗಿ: ‘ಮನುಷ್ಯನ ಸರ್ವತೋಮುಖ ಸಾಧನೆಗೆ ಸದೃಢ ಆರೋಗ್ಯ ಮುಖ್ಯವಾಗಿದೆ’ ಎಂದು ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಅರಭಾವಿ ಮಠದ ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ನಡೆದ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲ

ಮೂಡಲಗಿ: ‘ಮನುಷ್ಯನ ಸರ್ವತೋಮುಖ ಸಾಧನೆಗೆ ಸದೃಢ ಆರೋಗ್ಯ ಮುಖ್ಯವಾಗಿದೆ’ ಎಂದು ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಅರಭಾವಿ ಮಠದ ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ನಡೆದ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಜನ, ಸಂಘ, ಸಂಸ್ಥೆಗಳು ಒಲವು ತೋರಬೇಕು ಎಂದರು.ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡೆ ನಿರ್ದೇಶಕ ಜಗದೀಶ ಗಸ್ತಿ, ಅರಭಾವಿಮಠದ ಕಾಲೇಜು ಕಬಡ್ಡಿ ಆಯ್ಕೆ ಪ್ರಕ್ರಿಯೆಗೆ ಉತ್ತಮ ಸಿದ್ದತೆ ಮಾಡಿಕೊಂಡಿದೆ. ಕಬಡ್ಡಿ ತಂಡದಲ್ಲಿ ಆಯ್ಕೆಯಾಗುವ ಆಟಗಾರರು ಅಂತರ್ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವವಿದ್ಯಾಲಯಕ್ಕೆ ಹೆಸರು ತರಬೇಕು ಎಂದರು.ಪ್ರಾಚಾರ್ಯ ಎನ್.ಎನ್.ಬಂಬಲವಾಡಿ ಮಾತನಾಡಿದರು. ಪದವಿ ಕಾಲೇಜು ಪ್ರಾಚಾರ್ಯ ಮಹಾನಂದಾ ಪಾಟೀಲ, ನೀರಾವರಿ ಮಹಾಮಂಡಳದ ಹಿಡಕಲ್ ಡ್ಯಾಂ ಅಧ್ಯಕ್ಷ ಅಶೋಕ ಕಂಡರಟ್ಟಿ, ಬಸವರಾಜ ಜಕ್ಕಾನಟ್ಟಿ, ಯಲ್ಲಪ್ಪ ಅರಭಾವಿ, ದುಂಡಪ್ಪ ವಗ್ಗನವರ, ಎ.ಐ. ಸಂಕನ್ನವರ, ಯಲ್ಲಪ್ಪ ಎಂ, ದೇವರಾಜ ಎಂ. ಇದ್ದರು. ಉಪನ್ಯಾಸಕಿ ರಜಿಯಾಬೇಗಂ ದೇವಳ್ಳಿ ನಿರೂಪಿಸಿದರು.261023-21-973446162