ಅನುವಾದದ ಕೊರತೆ; ಕನ್ನಡಕ್ಕೆ ಸಿಗದ ನೋಬೆಲ್ ಪ್ರಶಸ್ತಿ: ಬಂಜಗೆರೆ ಜಯಪ್ರಕಾಶ್
ವಿಜಯಪುರ: ‘ಕನ್ನಡ ನೆಲದಲ್ಲಿ ನೋಬೆಲ್ ಪ್ರಶಸ್ತಿ ಪಡೆಯುವ ದಿಗ್ಗಜರಿದ್ದಾರೆ, ಕುವೆಂಪು ಮೊದಲಾದ ಮಹನೀಯರ ಸಾಹಿತ್ಯಿಕ ಚಟುವಟಿಕೆಗಳನ್ನು ಇಂಗ್ಲಿಷ್, ಸ್ಪ್ಯಾನಿಷ್ ಮೊದಲಾದ ಭಾಷೆಗಳಿಗೆ ತರ್ಜುಮೆಯಾಗದ ಕಾರಣ ನೋಬೆಲ್ನಂತಹ ಶ್ರೇಷ್ಠ ಪ್ರಶಸ್ತಿಗಳು ಕನ್ನಡಕ್ಕೆ ಬರಲಿಲ್ಲ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ

ವಿಜಯಪುರ: ‘ಕನ್ನಡ ನೆಲದಲ್ಲಿ ನೋಬೆಲ್ ಪ್ರಶಸ್ತಿ ಪಡೆಯುವ ದಿಗ್ಗಜರಿದ್ದಾರೆ, ಕುವೆಂಪು ಮೊದಲಾದ ಮಹನೀಯರ ಸಾಹಿತ್ಯಿಕ ಚಟುವಟಿಕೆಗಳನ್ನು ಇಂಗ್ಲಿಷ್, ಸ್ಪ್ಯಾನಿಷ್ ಮೊದಲಾದ ಭಾಷೆಗಳಿಗೆ ತರ್ಜುಮೆಯಾಗದ ಕಾರಣ ನೋಬೆಲ್ನಂತಹ ಶ್ರೇಷ್ಠ ಪ್ರಶಸ್ತಿಗಳು ಕನ್ನಡಕ್ಕೆ ಬರಲಿಲ್ಲ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ನೀಡಲಾದ 2026ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಅನುವಾದ ಸ್ವಂತಿಕೆಗಿಂತ ಐದು ಪಟ್ಟು ಹೆಚ್ಚು ಶ್ರಮವುಳ್ಳದು, ಮೂಲ ಕವಿಯ ಆಶಯ ಅನುಸರಿಸಿ, ಕನ್ನಡದ ಜಾಯಮಾನಕ್ಕೆ ಒಗ್ಗಿಸಿ ಬರೆಯುವುದು ಸಾಮಾನ್ಯವಾದ ಕಾರ್ಯವಲ್ಲ. ಸಹೋದರ ನೆಲದ ಭಾಷೆಯ ಬಾಂಧವ್ಯ ಹೆಚ್ಚಿಸುವಲ್ಲಿ ಅನುವಾದ ವಹಿಸುವ ಪಾತ್ರ ಅನನ್ಯ’ ಎಂದರು.ಹಿರಿಯ ಸಾಹಿತಿ ಡಿ.ಎಸ್.ಚೌಗಲೆ ಮಾತನಾಡಿ, ‘ಗುಹಾಂತರದಲ್ಲಿ ಕಂಡುಬರುವ ಚಿತ್ರಗಳಲ್ಲಿ ಮಾನವ ಜೀವನದಲ್ಲಿ ಪುರಾತನ ಕಾಲದಿಂದಲೂ ಸೃಜನಶೀಲತೆಯ ಸ್ಪರ್ಶವಿದೆ ಎಂಬುದು ನಿರೂಪಿತವಾಗುತ್ತದೆ, ನೃತ್ಯ, ರೆಕ್ಕೆ ಪುಕ್ಕಗಳ ಪ್ರಸಾದನ, ಮುಖವಾಡ ಹೀಗೆ ಸೃಜನಶೀಲತೆ ಈ ಚಟುವಟಿಕೆಗಳ ಭಾವ, ಸ್ವಭಾವ ಜಾಗತಿಕವಾಗಿ ಒಂದೇ ಇರುವುದು ಕಂಡು ಬರುತ್ತದೆ’ ಎಂದು ತಿಳಿಸಿದರು.‘ಭಾಷಿಕ ಸಂಬಂಧಗಳು ನಿನ್ನೆ ಮೊನ್ನೆಯದಲ್ಲ, ಗುಹಾಂತರ ಕಾಲದಿಂದಲೂ ಭಾಷಿಕ ಸಂಬಂಧಗಳು ವ್ಯಾಪಿಸಿವೆ. ಮರಾಠಿಯ ಮೊದಲ ನಾಟಕ ಉದಯಿಸಲು ಕನ್ನಡ ನೆಲದ ಯಕ್ಷಗಾನವೇ ಕಾರಣವಾದರೆ, ಮರಾಠಿ ಸಂಗೀತ ನೃತ್ಯ ಉದಯಕ್ಕೆ ಶ್ರೀಕೃಷ್ಣ ಪಾರಿಜಾತ ಕಾರಣ’ ಎಂದರು.ಸೂರ್ಯಕಾಂತ ಸುಜ್ಯಾತ್, ಮಲರ್ ವಿಳಿ ಕೆ, ಬಂಜಗೆರೆ ಜಯಪ್ರಕಾಶ್, ಪ್ರೊ.ಸಿ.ನಾಗಣ್ಣ, ಕೇಶವ ಶರ್ಮ ಕೆ ಅವರಿಗೆ 2026ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.2025ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಕೆ. ಶ್ರೀನಾಥ್, ಪ್ರಮೋದ ಮುತಾಲಿಕ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕನಕರಾಜ್ ಆರನಕಟ್ಟೆ, ಅಶೋಕ ಕುಮಾರ್ ಎಂ, ಚಂದ್ರಶೇಖರ ಮದಭಾವಿ ಅವರಿಗೆ ಪ್ರದಾನ ಮಾಡಲಾಯಿತು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚೆನ್ನಪ್ಪ ಕಟ್ಟಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಪ್ರೊ.ಎಂ.ಎಸ್. ಶೇಖರ್, ಪ್ರೊ.ಬಿ.ಎಲ್. ರಾಜು, ಪ್ರೊ.ನಾರಾಯಣಘಟ್ಟ, ಪ್ರೊ.ಷಾಕೀರಾ ಖಾನಂ, ಭಾರತಿದೇವಿ, ಎಸ್. ಗಂಗಾಧರಯ್ಯ, ಜೆ. ಕರಿಯಪ್ಪ ಮಾಳಿಗೆ, ಡಿ.ಕೆ. ಚಿತ್ತಯ್ಯ ಪೂಜಾರ್, ಪ್ರೊ.ಜಾಜಿ ದೇವೆಂದ್ರಪ್ಪ, ರಿಜಿಸ್ಟ್ರಾರ್ ದತ್ತಪ್ಪ ನಾಗನೂರ ಮೊದಲಾದವರು ಪಾಲ್ಗೊಂಡಿದ್ದರು.‘ಶುಗರ್ ಲಾಬಿ– ಪಾಲಿಟಿಕ್ಸ್ ಪ್ರತಿಧ್ವನಿ’‘ಕೊಲ್ಹಾಪುರದ ಶುಗರ್ ಲಾಬಿಯ ಪಾಲಿಟಿಕ್ಸ್ ಶಾಖ ಬೆಳಗಾವಿ ಮೊದಲಾದ ಜಿಲ್ಲೆಗೆ ಬಂದಿದೆ. ಈ ಕಬ್ಬು ಬೆಳೆಗಾರರ ಸಮಸ್ಯೆ ಗಂಭೀರವಾದ ಸಮಸ್ಯೆ ಮರಾಠಿ ಸಾಹಿತ್ಯದಲ್ಲಿದೆ, ಈ ಪ್ರಕಾರ ಸಾಹಿತ್ಯ ನಮ್ಮ ನೆಲಕ್ಕೂ ಬರಬೇಕು, ಸಕ್ಕರೆ ಕಾರ್ಖಾನೆಗಳು ರೈತರನ್ನು ಚದುರಂಗದಾಟದ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸುವುದು ಮರಾಠಿ ಸಾಹಿತ್ಯದ ಕೃತಿಯಲ್ಲಿ ಅಡಕವಾಗಿದೆ, ರೈತರ ಈ ನಿತ್ಯ ಶೋಷಣೆ ಚರ್ಚೆಯಾಗಬೇಕಿದೆ, ಮಹಾರಾಷ್ಟ್ರ ನೆಲದಲ್ಲಿ ಈ ಪ್ರಕಾರದ ಸಾಹಿತ್ಯ ಪ್ರತಿಧ್ವನಿಸಿದೆ’ ಎಂದು ಡಿ.ಎಸ್. ಚೌಗಲೆ ಹೇಳಿದರು.ಕಟಾವಿಗೆ ಕಾರ್ಮಿಕರನ್ನು ರೋಬೋಟ್ಗಳಂತೆ ಶುಗರ್ ಲಾಬಿ ಬಳಸಿಕೊಳ್ಳುತ್ತಿದೆ, ತುತ್ತಿನ ಚೀಲ ತುಂಬಿಸಿಕೊಳ್ಳುವ ಮಹಿಳೆ, ತಾನು ಗರ್ಭವತಿಯಾದರೆ ಕೆಲಸ ಸಿಗುವುದಿಲ್ಲ ಎಂದು ಗರ್ಭಾಶಯವನ್ನೇ ತೆಗಿಸುವ ಹೀನಾಯ ಪರಿಸ್ಥಿತಿ ಇದೆ, ಈ ನೋವಿನ ದನಿ ನಮ್ಮ ಸಾಹಿತ್ಯದಲ್ಲಿ ಅಡಕವಾಗಬೇಕಿದೆ’ ಎಂದರು.261023-26-867295712