ಟಿಬೆಟ್ನಲ್ಲಿ ಭೂಕಂಪ: 16 ಮಂದಿ ಸಾವು, ಡ್ರೋನ್ಗಳ ಮೂಲಕ ಚೀನಾ ಶೋಧಕಾರ್ಯ
ಬೀಜಿಂಗ್: ಟಿಬೆಟ್ನ ಪರ್ವತ ಪ್ರದೇಶದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಕನಿಷ್ಠ 16 ಮಂದಿ ಮೃತಪಟ್ಟಿದ್ದು, 76 ಮಂದಿ ಗಾಯಗೊಂಡಿದ್ದಾರೆ. ಬದುಕುಳಿದವರಿಗಾಗಿ ಉಪಗ್ರಹಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ಚೀನಾ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುರುವಾರ ರಾತ್ರಿ 10.33ಕ್ಕೆ ಸಂಭವಿಸಿದ ಭೂಮಿಯ ಮೇಲ್ಮೈಯಿಂದ 10 ಕಿ.ಮೀ.ಗಿಂತ
ಬೀಜಿಂಗ್: ಟಿಬೆಟ್ನ ಪರ್ವತ ಪ್ರದೇಶದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಕನಿಷ್ಠ 16 ಮಂದಿ ಮೃತಪಟ್ಟಿದ್ದು, 76 ಮಂದಿ ಗಾಯಗೊಂಡಿದ್ದಾರೆ. ಬದುಕುಳಿದವರಿಗಾಗಿ ಉಪಗ್ರಹಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ಚೀನಾ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುರುವಾರ ರಾತ್ರಿ 10.33ಕ್ಕೆ ಸಂಭವಿಸಿದ ಭೂಮಿಯ ಮೇಲ್ಮೈಯಿಂದ 10 ಕಿ.ಮೀ.ಗಿಂತ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ನಾಗ್ಕು ನಗರದ ದೂರದ ಬಾಕೆನ್ ಕೌಂಟಿಯಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ.ವಿದೇಶಿ ದೇಣಿಗೆ: ಆರ್ಎಸ್ಎಸ್ಗೆ ಮಾತ್ರ ವಿನಾಯಿತಿ ಏಕೆ?ಈವರೆಗೆ 12,489 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಹಾಗೂ ಸಂತ್ರಸ್ತರ ಪುನರ್ವಸತಿ ಕಾರ್ಯಗಳು ಮುಂದುವರಿದಿವೆ ಎಂದು ಪ್ರಾದೇಶಿಕ ರಾಜಧಾನಿ ಲಾಸಾದಿಂದ ಸರ್ಕಾರಿ ಸ್ವಾಮ್ಯದ ‘ಕ್ಸಿನ್ಹುವಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಚೀನಾ ಉಪಗ್ರಹಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ನಿಯೋಜಿಸಿದೆ. ಇವುಗಳ ಮೂಲಕ ತುರ್ತು ಸಂವಹನ ವ್ಯವಸ್ಥೆಗೆ ನೆರವು ನೀಡುವುದರ ಜೊತೆಗೆ ಭೂಕಂಪ ಪೀಡಿತ ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯಲಾಗುತ್ತಿದೆ ಎಂದು ಚೀನಾ ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಾರ್ಪೊರೇಷನ್ (ಸಿಎಎಸ್ಸಿ) ಶುಕ್ರವಾರ ತಿಳಿಸಿದೆ.ಚೀನಾ 5 ಕೋಟಿ ಯುವಾನ್ (ಸುಮಾರು 75 ಲಕ್ಷ ಅಮೆರಿಕನ್ ಡಾಲರ್) ತುರ್ತು ವಿಪತ್ತು ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ. ಪುನಶ್ಚೇತನ ಕಾರ್ಯಗಳಿಗಾಗಿ ಹೆಚ್ಚುವರಿಯಾಗಿ 3 ಕೋಟಿ ಯುವಾನ್ ಮೀಸಲಿಟ್ಟಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.ಭೂಕಂಪದಿಂದ 330ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಅಥವಾ ಹಾನಿಗೊಳಗಾಗಿವೆ. ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಅಂದಾಜಿಸುತ್ತಿದ್ದಾರೆ. ಭಾರತ–ಚೀನಾ ಸೇನೆ ಮುಖಾಮುಖಿ: ವಿವರಣೆ ನೀಡಲು ಮೋದಿಗೆ ಕಾಂಗ್ರೆಸ್ ಆಗ್ರಹವಿವಿಧ ಹಂತಗಳ ಅಧಿಕಾರಿಗಳು ಕಳುಹಿಸಿರುವ ಪರಿಹಾರ ಸಾಮಗ್ರಿಗಳು ಸಂತ್ರಸ್ತ ಪ್ರದೇಶವನ್ನು ತಲುಪಿವೆ. ಇವುಗಳಲ್ಲಿ 1 ಸಾವಿರ ಪೂರ್ವನಿರ್ಮಿತ ಮನೆಗಳ ಸೆಟ್ಗಳು, 3,239 ಟೆಂಟ್ಗಳು, 2,821 ಮಡಚಬಹುದಾದ ಹಾಸಿಗೆಗಳು ಮತ್ತು 4,280 ಹೊದಿಕೆಗಳು ಸೇರಿದಂತೆ ಇತರ ಅಗತ್ಯ ವಸ್ತುಗಳು ಸೇರಿವೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.ಭೂಕಂಪದ ಕೇಂದ್ರದ ಸುತ್ತಮುತ್ತಲಿನ ಪ್ರದೇಶವು ಸಮುದ್ರ ಮಟ್ಟದಿಂದ ಸರಾಸರಿ 4,800 ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿದೆ.ಮುಂದಿನ ಮೂರು ದಿನಗಳಲ್ಲಿ ತಾಪಮಾನ ಮೈನಸ್ 9 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆಯಿದೆ. ಭೂಕಂಪದ ಕೇಂದ್ರದ ಸಮೀಪದಲ್ಲಿರುವ ಮೂರು ಪಟ್ಟಣಗಳಲ್ಲಿ ಶನಿವಾರ ಅಲ್ಲಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ದೊಡ್ಡಬಳ್ಳಾಪುರ: ತೂಬಗೆರೆ ಸಮೀಪ ಲಘು ಭೂಕಂಪ