ಹೊಸಪೇಟೆ: ದಲಿತ ಸಚಿವರಿಗೆ ಅವಮಾನ; ಸಮಾನತೆ ವೇದಿಕೆ ಖಂಡನೆ
ಹೊಸಪೇಟೆ (ವಿಜಯನಗರ): ಮೈಸೂರು ದಸರಾ ಜಂಬೂ ಸವಾರಿ ಕಾರ್ಯಕ್ರಮದ ವೇಳೆ ಸಚಿವರಾದ ಕೆ.ಎಸ್.ಬಸವಂತಪ್ಪ, ಶಿವರಾಜ್ ತಂಗಡಗಿ ಮತ್ತು ನರೇಂದ್ರಸ್ವಾಮಿ ಅವರನ್ನು ತಡೆದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಸಮಾನತೆ ವೇದಿಕೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.ವೇದಿಕೆಯ ಸಂಚಾಲಕರಾದ ಎನ್.ವೆಂಕಟೇಶ್ (ಸ್ಲಂ ವೆ

ಹೊಸಪೇಟೆ (ವಿಜಯನಗರ): ಮೈಸೂರು ದಸರಾ ಜಂಬೂ ಸವಾರಿ ಕಾರ್ಯಕ್ರಮದ ವೇಳೆ ಸಚಿವರಾದ ಕೆ.ಎಸ್.ಬಸವಂತಪ್ಪ, ಶಿವರಾಜ್ ತಂಗಡಗಿ ಮತ್ತು ನರೇಂದ್ರಸ್ವಾಮಿ ಅವರನ್ನು ತಡೆದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಸಮಾನತೆ ವೇದಿಕೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.ವೇದಿಕೆಯ ಸಂಚಾಲಕರಾದ ಎನ್.ವೆಂಕಟೇಶ್ (ಸ್ಲಂ ವೆಂಕಿ) ಮತ್ತು ಸಿ.ಆರ್.ಭರತ್ ಕುಮಾರ್ ಅವರ ನೇತೃತ್ವದಲ್ಲಿ ಇಲ್ಲಿನ ತಹಶೀಲ್ಧಾರ್ ಕಚೇರಿ ಬಳಿ ಮೈಸೂರಿನ ಘಟನೆಯನ್ನು ಖಂಡಿಸಿದ ಪ್ರತಿಭಟನಕಾರರು, ದಲಿತ ಸಚಿವರನ್ನು ಜಾತಿ ಆಧಾರದಲ್ಲಿ ತಡೆದಿರುವುದು ಸಾಬೀತಾದರೆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ, ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಮುಖ್ಯಮಂತ್ರಿ ಅವರು ದಲಿತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.ಈ ಘಟನೆಯ ಕುರಿತು ನ್ಯಾಯಸಮ್ಮತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಬೇಕಾಗುತ್ತದೆ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯವು ತನ್ನ ರಾಜಕೀಯ ನಿಲುವನ್ನು ಪ್ರಜಾಸತ್ತಾತ್ಮಕವಾಗಿ ವ್ಯಕ್ತಪಡಿಸಲಿದೆ ಎಂದು ಸಹ ಎಚ್ಚರಿಸಲಾಯಿತು. ಕೊನೆಗೆ ತಹಶೀಲ್ದಾರ್ ಅಮರನಾಥ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಎಚ್.ಶೇಷು, ವೈ ರಾಮಚಂದ್ರ ಬಾಬು, ಗೋವಿಂದರಾಜ್, ರಾಜು, ಕರಿಯಪ್ಪ, ಜೆ.ಬಿ ರಾಘವೇಂದ್ರ, ಕೊಲ್ಲಾಪುರಿ, ಹನುಮಂತ, ಉಮೇಶ್, ಶೇಕ್ ಮೆಹಬೂಬ್ ಬಾಷಾ, ಓಬಳೇಶ್, ಇಂತಿಯಾಜ್, ತಾಜುದ್ದೀನ್, ಅಲೆನ್ ಸುಹೇಲ್ ಎರಿಸ್ವಾಮಿ, ಈ. ಅನಿಲ್, ತಾಯಣ್ಣ ಇದ್ದರು.ಅಂಬೇಡ್ಕರ್ ಸಂಘದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಕೆಮೈಸೂರಿನಲ್ಲಿ ಮೂವರು ಸಚಿವರಿಗೆ ಆಗಿರುವ ಅವಮಾನವನ್ನು ಜಿಲ್ಲಾ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಖಂಡಿಸಿದ್ದು, ಪೊಲೀಸ್ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.ಸಂಘದ ಅಧ್ಯಕ್ಷ ಟಿ.ವಾಸುದೇವ್ ಮತ್ತು ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪರಿಶಿಷ್ಟ ಜನಪ್ರತಿನಿಧಿಗಳು ಹಾಗೂ ನಾಯಕರಿಗೆ ಸೂಕ್ತ ಗೌರವ ಮತ್ತು ಭದ್ರತೆ ಸಿಗುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.261023-25-2109483567