ಎರಡನೇ ಟಿ20 ಪಂದ್ಯಕ್ಕೂ ಮುನ್ನ ತಾರಾ ಬ್ಯಾಟರ್ ಔಟ್: ಕೊನೆಗೂ ಸೂರ್ಯವಂಶಿಗೆ ಅವಕಾಶ?
ಕ್ರೈಸ್ಟ್ಚರ್ಚ್: ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯುದ್ದಕ್ಕೂ ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ ಅವರಿಗೆ ಕೊನೆಗೂ ಅವಕಾಶ ಸಿಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿರುವ ಇಶಾನ್ ಕಿಶನ್ ಬದಲು ವೈಭವ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿ

ಕ್ರೈಸ್ಟ್ಚರ್ಚ್: ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯುದ್ದಕ್ಕೂ ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ ಅವರಿಗೆ ಕೊನೆಗೂ ಅವಕಾಶ ಸಿಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿರುವ ಇಶಾನ್ ಕಿಶನ್ ಬದಲು ವೈಭವ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೂ ಮೊದಲ ದಿನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರು ಇಶಾನ್ ಕಿಶನ್ ಗಾಯದ ಕುರಿತು ವಿವರಿಸಿದ್ದಾರೆ. ಅದೇ ಕಾರಣಕ್ಕೆ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಬಡ್ತಿ ನೀಡಿ ಕಿಶನ್ ಜಾಗದಲ್ಲಿ ಆಡಿಸಲಾಯಿತು ಎಂದು ವಿವರಿಸಿದ್ದಾರೆ.‘ಇಶಾನ್ ಅವರು ತೊಡೆಸಂದು ನೋವಿಗೆ ಒಳಗಾಗಿದ್ದರಿಂದ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬೇಕಾಯಿತು. ಅವರು ನಾಳೆಯ (ಅಕ್ಟೋಬರ್ 24) ಪಂದ್ಯದಲ್ಲೂ ಆಡುವ ಸಾಧ್ಯತೆ ಕಡಿಮೆ’ ಎಂದು ತಿಳಿಸಿದ್ದಾರೆ.‘ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದ ವೇಳೆ ಬಲ ತೊಡೆಯ ಒಳಭಾಗದ ಸ್ನಾಯುವಿನಲ್ಲಿ (ಅಡಕ್ಟರ್) ಸಣ್ಣ ಪ್ರಮಾಣದ ಗಾಯಕ್ಕೆ ಒಳಗಾಗಿರುವ ಇಶಾನ್ ಕಿಶನ್ ಎರಡನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ’ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.:Ishan Kishan is ruled out of the second T20I against New Zealand due to a low grade right adductor strain, which he sustained during the first T20I of the series.The BCCI Medical Team is monitoring his progress.#TeamIndia | #NZvIND pic.twitter.com/QbZpuVh1hQ— BCCI (@BCCI) October 23, 2026 ಸೂರ್ಯವಂಶಿ ಅವರ ಕ್ರಮಾಂಕದ ಕುರಿತು ಮಾತನಾಡಿದ ಕೋಟಕ್, ‘ಇಶಾನ್ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಭವ್ ಸೂರ್ಯವಂಶಿ ಕಿಶನ್ ಜಾಗದಲ್ಲಿ ಆಡುವ ಸಾಧ್ಯತೆ ಇದೆ. ಅವರು ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು’ ಎಂದಿದ್ದಾರೆ.ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಸ್ಥಿರವಾಗಿ ರನ್ ಗಳಿಸುತ್ತಿರುವುದರಿಂದ ಆರಂಭಿಕ ಸ್ಥಾನದಲ್ಲಿನ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದರು. ಹಾಗಾಗಿ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.