ಜೈಲಿನಲ್ಲೇ ಪತ್ನಿ, ಸ್ನೇಹಿತನ ಮನವೊಲಿಸಿದ್ದ ದರ್ಶನ್; ಫಲಕೊಡದ ಸಂಧಾನ ಮತ್ತೆ ಸಂಘರ್ಷ ಆರಂಭ
ಬೆಂಗಳೂರು: ಪತ್ನಿ ವಿಜಯಲಕ್ಷ್ಮಿ(Vijayalakshmi) ಹಾಗೂ ಆಪ್ತ ಗೆಳೆಯ ನಟ ಧನ್ವೀರ್ ಗೌಡ(Dhanveer Gowda) ನಡುವಿನ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಪರಪ್ಪನ ಅಗ್ರಹಾರ ಜೈಲಿನಿಂದಲೇ ನಟ ದರ್ಶನ್ (Darshan) ನಡೆಸಿದ್ದ ಸಂಧಾನ ಯತ್ನ ಸಂಪೂರ್ಣ ವಿಫಲವಾಗಿದೆ. ಇಬ್ಬರ ನಡುವೆ ರಾಜಿ ಮಾಡಿಸಲು ದರ್ಶನ್ ಕೈಗೊಂಡ ಪ್ರಯತ್ನಗಳ ಹೊರತಾಗಿಯೂ, ವಿವಾದ ಮತ್ತೆ ತಾರಕಕ್ಕೇರಿ ಪೊ

ಬೆಂಗಳೂರು: ಪತ್ನಿ ವಿಜಯಲಕ್ಷ್ಮಿ(Vijayalakshmi) ಹಾಗೂ ಆಪ್ತ ಗೆಳೆಯ ನಟ ಧನ್ವೀರ್ ಗೌಡ(Dhanveer Gowda) ನಡುವಿನ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಪರಪ್ಪನ ಅಗ್ರಹಾರ ಜೈಲಿನಿಂದಲೇ ನಟ ದರ್ಶನ್ (Darshan) ನಡೆಸಿದ್ದ ಸಂಧಾನ ಯತ್ನ ಸಂಪೂರ್ಣ ವಿಫಲವಾಗಿದೆ. ಇಬ್ಬರ ನಡುವೆ ರಾಜಿ ಮಾಡಿಸಲು ದರ್ಶನ್ ಕೈಗೊಂಡ ಪ್ರಯತ್ನಗಳ ಹೊರತಾಗಿಯೂ, ವಿವಾದ ಮತ್ತೆ ತಾರಕಕ್ಕೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ-ಪ್ರತ್ಯಾರೋಪಗಳು ಶುರುವಾದ ಬೆನ್ನಲ್ಲೇ, ನಟ ದರ್ಶನ್ ಇತ್ತೀಚೆಗಷ್ಟೇ ಇಬ್ಬರನ್ನೂ ಪ್ರತ್ಯೇಕವಾಗಿ ಜೈಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದರು. ಮನಸ್ತಾಪಗಳನ್ನು ಮರೆತು ಒಗ್ಗಟ್ಟಾಗಿ ಇರಿ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗುವಂತೆ ನನ್ನ ಮೇಲೆ ಈಗಾಗಲೇ ಸಾಕಷ್ಟು ಒತ್ತಡವಿದೆ. ಇಂತಹ ಸಮಯದಲ್ಲಿ ನಿಮ್ಮಿಬ್ಬರ ಕಿತ್ತಾಟದಿಂದ ನನಗೆ ಮತ್ತಷ್ಟು ತೊಂದರೆ ಆಗುವುದು ಬೇಡ ಎಂದು ಇಬ್ಬರಿಗೂ ಬುದ್ಧಿವಾದ ಹೇಳಿ ಸಂಧಾನಕ್ಕೆ ಯತ್ನಿಸಿದ್ದರು. ದರ್ಶನ್ ಅವರ ಈ ಮಾತುಕತೆಯ ನಂತರವೂ ಇಬ್ಬರ ನಡುವಿನ ಶೀತಲ ಸಮರ ನಿಲ್ಲಲಿಲ್ಲ. ವ್ಯವಹಾರಿಕ ವಿಚಾರವಾಗಿ ಮಾತನಾಡಲೆಂದು ವಿಜಯಲಕ್ಷ್ಮಿ ಅವರು ಧನ್ವೀರ್ ನಿವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ವಿಜಯಲಕ್ಷ್ಮಿ ಮನೆಗೆ ತೆರಳಿದ ಸಂದರ್ಭದಲ್ಲಿ ಧನ್ವೀರ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಮನೆಯಲ್ಲಿದ್ದವರ ಜೊತೆ ಮಾತಿನ ಚಕಮಕಿ ನಡೆದಿದೆ. ತಮ್ಮ ಗೈರುಹಾಜರಿಯಲ್ಲಿ ತಮ್ಮ ಮನೆಗೆ ವಿಜಯಲಕ್ಷ್ಮಿ ಬಂದಿದ್ದನ್ನು ತಿಳಿದ ನಟ ಧನ್ವೀರ್ ತೀವ್ರ ಆಕ್ರೋಶಗೊಂಡಿದ್ದಾರೆ. ಆ ಸಿಟ್ಟಿನಲ್ಲೇ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದೀಗ ಇಡೀ ಪ್ರಕರಣ ಇಕ್ಕೆಲಗಳಿಂದಲೂ ದೂರು-ಪ್ರತಿದೂರುಗಳಾಗಿ ಪೊಲೀಸ್ ಮೆಟ್ಟಿಲೇರುವಂತೆ ಮಾಡಿದೆ.