ಜ್ವರ, ನೆಗಡಿ, ಕೆಮ್ಮು ಬಂದಾಗ ಮನೆಯಲ್ಲೇ ಮಾಡಿಕೊಳ್ಳಿ ಬೆಳ್ಳುಳ್ಳಿ ಮೆಣಸಿನ ರಸಂ
ಸಾಮಾನ್ಯವಾಗಿ ಜ್ವರ, ನೆಗಡಿ ಅಥವಾ ಕೆಮ್ಮು ಬಂದಾಗ ಬಾಯಿ ಸಪ್ಪೆಯಾಗಿ ರುಚಿ ಇಲ್ಲದಂತಾಗುತ್ತದೆ. ಇಂತಹ ಸಮಯದಲ್ಲಿ ನಾಲಿಗೆಗೆ ರುಚಿ ನೀಡುವ, ಆರೋಗ್ಯಕರವಾದ ಬೆಳ್ಳುಳ್ಳಿ ಮೆಣಸಿನ ರಸಂ ಅನ್ನು ಮನೆಯಲ್ಲೇ ಕಡಿಮೆ ಸಮಯದಲ್ಲಿ ಸಿದ್ಧಪಡಿಸಿಕೊಳ್ಳಬಹುದು.ಬೇಕಾಗುವ ಪದಾರ್ಥಗಳು:ಬೆಳ್ಳುಳ್ಳಿ: 10 ರಿಂದ 15 ಎಸಳುಕಾಳುಮೆಣಸು: 1 ಚಮಚಜೀರಿಗೆ: 1 ಚಮಚಟೊಮೆಟೊ: 1ಹುಣಸೆಹಣ್ಣಿನ ರಸ: ಅಗ

ಸಾಮಾನ್ಯವಾಗಿ ಜ್ವರ, ನೆಗಡಿ ಅಥವಾ ಕೆಮ್ಮು ಬಂದಾಗ ಬಾಯಿ ಸಪ್ಪೆಯಾಗಿ ರುಚಿ ಇಲ್ಲದಂತಾಗುತ್ತದೆ. ಇಂತಹ ಸಮಯದಲ್ಲಿ ನಾಲಿಗೆಗೆ ರುಚಿ ನೀಡುವ, ಆರೋಗ್ಯಕರವಾದ ಬೆಳ್ಳುಳ್ಳಿ ಮೆಣಸಿನ ರಸಂ ಅನ್ನು ಮನೆಯಲ್ಲೇ ಕಡಿಮೆ ಸಮಯದಲ್ಲಿ ಸಿದ್ಧಪಡಿಸಿಕೊಳ್ಳಬಹುದು.ಬೇಕಾಗುವ ಪದಾರ್ಥಗಳು:ಬೆಳ್ಳುಳ್ಳಿ: 10 ರಿಂದ 15 ಎಸಳುಕಾಳುಮೆಣಸು: 1 ಚಮಚಜೀರಿಗೆ: 1 ಚಮಚಟೊಮೆಟೊ: 1ಹುಣಸೆಹಣ್ಣಿನ ರಸ: ಅಗತ್ಯಕ್ಕೆ ತಕ್ಕಷ್ಟುಕೊತ್ತಂಬರಿ ಸೊಪ್ಪು: ಸ್ವಲ್ಪಉಪ್ಪು: ರುಚಿಗೆ ತಕ್ಕಷ್ಟುಎಣ್ಣೆ: 1 ಚಮಚರೆಸಿಪಿ: ಸಂಜೆ ಟೀ, ಕಾಫಿ ಜೊತೆ ತಿನ್ನಬಹುದಾದ ಸಾಬುದಾನ ವಡೆ ಹೀಗೆ ಮಾಡಿಕೊಳ್ಳಿರೆಸಿಪಿ: ಬೂದು ಕುಂಬಳಕಾಯಿಂದ ಮನೆಯಲ್ಲೇ ಮಾಡಿ ಮೃದುವಾದ ದೋಸೆ ಮಾಡುವ ವಿಧಾನ: ಮೊದಲು ಕಾಳುಮೆಣಸು ಹಾಗೂ ಜೀರಿಗೆಯನ್ನು ಹಗುರವಾಗಿ ಹುರಿದುಕೊಂಡು, ಅದಕ್ಕೆ ಬೆಳ್ಳುಳ್ಳಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.ಬಳಿಕ ಒಂದು ಪಾತ್ರೆಗೆ ಹುಣಸೆಹಣ್ಣಿನ ರಸ, ಹೆಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ಟೊಮೆಟೊ ಬೆಂದ ನಂತರ, ಸಿದ್ಧಪಡಿಸಿಕೊಂಡ ಮೆಣಸು, ಜೀರಿಗೆ, ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ.ನಂತರ ಮತ್ತೊಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು, ಇಂಗು ಹಾಗೂ ಜಜ್ಜಿದ ಬೆಳ್ಳುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿದು ಒಗ್ಗರಣೆಯನ್ನು ಸಾರಿಗೆ ಸೇರಿಸಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ, ಬಿಸಿಯಾದ ಬೆಳ್ಳುಳ್ಳಿ ಮೆಣಸಿನ ರಸಂ ಸವಿಯಲು ಸಿದ್ಧ. ಇದನ್ನು ಬಿಸಿ ಅನ್ನದ ಜೊತೆ ಸವಿಯಬಹುದು ಅಥವಾ ಸೂಪ್ ಮಾದರಿಯಲ್ಲೂ ಕುಡಿಯಬಹುದು.