ಸೌದಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕ್ರಮ ವಹಿಸಿ: ಅಪ್ಸರ್ ಮನವಿ
ಚಿಕ್ಕಮಗಳೂರು: ‘ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಾಲ್ಕು ಸಾವಿರ ಕನ್ನಡಿಗರು ಮೆಕ್ಕಾದಲ್ಲಿ ಸಿಲುಕಿದ್ದೇವೆ’ ಎಂದು ಯಾತ್ರಾರ್ಥಿ ಚಿಕ್ಕಮಗಳೂರಿನ ಉದ್ಯಮಿ ಅಪ್ಸರ್ ಹಿಂದುಸ್ಥಾನಿ ವಿಡಿಯೊ ಸಂದೇಶ ಕಳುಹಿಸಿದ್ದಾರೆ.‘ಏಳು ದಿನಗಳಿಂದ ವಿಮಾನ ಸೇವೆ ಇಲ್ಲ. ವಾಪಸ್ ತೆರಳಲು ಅ.28ಕ್ಕೆ ವಿ

ಚಿಕ್ಕಮಗಳೂರು: ‘ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಾಲ್ಕು ಸಾವಿರ ಕನ್ನಡಿಗರು ಮೆಕ್ಕಾದಲ್ಲಿ ಸಿಲುಕಿದ್ದೇವೆ’ ಎಂದು ಯಾತ್ರಾರ್ಥಿ ಚಿಕ್ಕಮಗಳೂರಿನ ಉದ್ಯಮಿ ಅಪ್ಸರ್ ಹಿಂದುಸ್ಥಾನಿ ವಿಡಿಯೊ ಸಂದೇಶ ಕಳುಹಿಸಿದ್ದಾರೆ.‘ಏಳು ದಿನಗಳಿಂದ ವಿಮಾನ ಸೇವೆ ಇಲ್ಲ. ವಾಪಸ್ ತೆರಳಲು ಅ.28ಕ್ಕೆ ವಿಮಾನ ಇತ್ತು. ಆದರೆ, ನವೆಂಬರ್ 4ರ ತನಕ ಸೌದಿ ಏರ್ಲೈನ್ಸ್, ಇಂಡಿಗೊ ವಿಮಾನಗಳ ಹಾರಾಟ ಮುಂದೂಡಿಕೆಯಾಗಿವೆ. ಮಧ್ಯಮ ವರ್ಗದ ಜನ ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ’ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.‘ಇಲ್ಲಿನ ಆಂತರಿಕ ಯುದ್ಧದಿಂದ ನಮಗೆ ತೊಂದರೆಯಾಗಿದೆ. ಭಾರತ ಸರ್ಕಾರದ ವಿದೇಶಾಂಗ ಸಚಿವರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಅವರು ತ್ವರಿತ ಕ್ರಮ ಕೈಗೊಂಡು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿಸಬೇಕು. ಕನ್ನಡಿಗರನ್ನು ವಾಪಸ್ ಕರೆತರಲು ಪ್ರಯತ್ನಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
Read the complete story at Prajavani