ಮೆಲಾನಿಯಾ ಟ್ರಂಪ್ ಮಧ್ಯಸ್ಥಿಕೆ – ಯುದ್ಧಪೀಡಿತ ಉಕ್ರೇನ್ ನಗರದಲ್ಲಿ ಸ್ಥಳೀಯ ಕದನ ವಿರಾಮ
ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಕಾಳಗ(Russia-Ukraine) ಮುಂದುವರಿದಿರುವ ನಡುವೆಯೇ, ದಕ್ಷಿಣ ಉಕ್ರೇನ್ನ ಮುಂಚೂಣಿ ಯುದ್ಧ ನಗರವಾದ ಒಲೆಶ್ಕಿಯಲ್ಲಿ (Oleshky) ಸ್ಥಳೀಯ ಮಟ್ಟದ ಕದನ ವಿರಾಮ ಏರ್ಪಡಿಸುವಲ್ಲಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್(Melania Trump) ಯಶಸ್ವಿಯಾಗಿದ್ದಾರೆ. ಈ ಕದನ ವಿರಾಮ ಒಪ್ಪಂದವು ಅಕ್ಟೋಬರ್ 29ರಿಂದ ಜಾರಿಗೆ ಬರ

ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಕಾಳಗ(Russia-Ukraine) ಮುಂದುವರಿದಿರುವ ನಡುವೆಯೇ, ದಕ್ಷಿಣ ಉಕ್ರೇನ್ನ ಮುಂಚೂಣಿ ಯುದ್ಧ ನಗರವಾದ ಒಲೆಶ್ಕಿಯಲ್ಲಿ (Oleshky) ಸ್ಥಳೀಯ ಮಟ್ಟದ ಕದನ ವಿರಾಮ ಏರ್ಪಡಿಸುವಲ್ಲಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್(Melania Trump) ಯಶಸ್ವಿಯಾಗಿದ್ದಾರೆ. ಈ ಕದನ ವಿರಾಮ ಒಪ್ಪಂದವು ಅಕ್ಟೋಬರ್ 29ರಿಂದ ಜಾರಿಗೆ ಬರಲಿದೆ. ಮುಂಚೂಣಿ ಗಡಿ ನಗರವಾಗಿರುವ ಒಲೆಶ್ಕಿಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಅಲ್ಲಿ ಉಳಿದುಕೊಂಡಿರುವ ನಾಗರಿಕರಲ್ಲಿ ಬಹುತೇಕರು ವೃದ್ಧರಾಗಿದ್ದು, ಅವರಿಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ, ಔಷಧ, ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಾನವೀಯ ನೆರವು ಪೂರೈಸಲು ಹಾಗೂ ಸುರಕ್ಷಿತ ಕಾರಿಡಾರ್ ಮೂಲಕ ನಾಗರಿಕರನ್ನು ಸ್ಥಳಾಂತರಿಸಲು ಈ ತಾತ್ಕಾಲಿಕ ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ. ಒಲೆಶ್ಕಿಯ ಜನರು ಸೀಮಿತ ವಿದ್ಯುತ್ ಸೌಲಭ್ಯ ಹೊಂದಿದ್ದು, ನೆಲಬಾಂಬ್ಗಳು ಹಾಗೂ ನಿರಂತರ ಸೇನಾ ದಾಳಿಗಳ ನಡುವೆ ಬದುಕುತ್ತಿದ್ದಾರೆ. ನನ್ನ ಮಧ್ಯಸ್ಥಿಕೆಯಿಲ್ಲದೆ ಅಲ್ಲಿಗೆ ನೆರವು ಕಳುಹಿಸುವುದು ಅಥವಾ ವೃದ್ಧರನ್ನು ಸ್ಥಳಾಂತರಿಸುವುದು ಅಸಾಧ್ಯವಾಗಿತ್ತು ಎಂದು ಮೆಲಾನಿಯಾ ಟ್ರಂಪ್ ಹೇಳಿದ್ದಾರೆ. ಮೆಲಾನಿಯಾ ಟ್ರಂಪ್ ಹಾಗೂ ಅವರ ಪ್ರತಿನಿಧಿಗಳು ‘ವಿಶೇಷ ಸಂಧಾನಕಾರರ’ ಪಾತ್ರ ವಹಿಸಿ, ರಷ್ಯಾ ಮತ್ತು ಉಕ್ರೇನ್ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಕದನ ವಿರಾಮದ ನಿಯಮಾವಳಿಗಳನ್ನು ಅಂತಿಮಗೊಳಿಸಿದ್ದಾರೆ. ಉಭಯ ದೇಶಗಳ ಸೈನಿಕೇತರ (ನಾಗರಿಕ) ಅಧಿಕಾರಿಗಳು ಒಟ್ಟಾಗಿ ಮನೆ ಮನೆಗೆ ಭೇಟಿ ನೀಡಿ ಜನರ ಅವಶ್ಯಕತೆಗಳನ್ನು ಪತ್ತೆಹಚ್ಚಲಿದ್ದಾರೆ. ಅಲ್ಲಿಂದ ಹೊರಬರಲು ಬಯಸುವ ನಿವಾಸಿಗಳಿಗೆ ಅವರ ಆಯ್ಕೆಗೆ ತಕ್ಕಂತೆ ರಷ್ಯಾ ಅಥವಾ ಉಕ್ರೇನ್ಗೆ ತೆರಳಲು ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲು ಮತ್ತು ಜನರ ಇಚ್ಛೆಗೆ ಗೌರವ ನೀಡಲಾಗುತ್ತಿದೆಯೇ ಎಂಬುದನ್ನು ದಾಖಲಿಸಲು ತಟಸ್ಥ ಅಮೆರಿಕನ್ ಮಾಧ್ಯಮ ಸಂಸ್ಥೆಯೊಂದು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಿದೆ. ಖೇರ್ಸಾನ್ ಸಮೀಪದ ಡ್ನಿಪ್ರೊ ನದಿ ತೀರದಲ್ಲಿರುವ ಒಲೆಶ್ಕಿ ನಗರದಲ್ಲಿ ಯುದ್ಧಕ್ಕೂ ಮೊದಲು ಸುಮಾರು 24,000 ಜನರಿದ್ದರು. ಆದರೆ ಕಾಖೋವ್ಕಾ ಅಣೆಕಟ್ಟು ಧ್ವಂಸಗೊಂಡು ನಗರದ ಶೇ.ಡ 90ರಷ್ಟು ಪ್ರದೇಶ ಮುಳುಗಡೆಯಾದ ನಂತರ ಹಾಗೂ ನಿರಂತರ ಯುದ್ಧದ ಪರಿಣಾಮ ಬಹುತೇಕರು ವಲಸೆ ಹೋಗಿದ್ದಾರೆ. ಪ್ರಸ್ತುತ ಅಲ್ಲಿ ಕೇವಲ 1,700 ರಿಂದ 2,000 ಜನರು ಮಾತ್ರ ಉಳಿದುಕೊಂಡಿದ್ದು, ಅದರಲ್ಲಿ ಬಹುತೇಕರು ವೃದ್ಧರು ಮತ್ತು ಸುಮಾರು 50 ಮಕ್ಕಳು ಸೇರಿದ್ದಾರೆ.