ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಸಿನಿಮಾದ ಪ್ರಚಾರ: ಕಳಕಳಿಯ ಸವಕಳಿ‘ರಾಮಾಯಣ’ ಸಿನಿಮಾದೊಳಗಿನ ಸಣ್ಣಪುಟ್ಟ ವಿಎಫ್ಎಕ್ಸ್ ತಪ್ಪುಗಳನ್ನು ದಯವಿಟ್ಟು ಹುಡುಕಲು ಹೋಗಬೇಡಿ ಎಂದು ನಟ ಯಶ್, ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. ಮುಂದುವರಿದು, ಇಂತಹ ಪ್ರಯತ್ನಗಳು ಮುಂದೆಂದೂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ತಪ್ಪುಗಳಿಲ್ಲದೆ ಆಭಾಸವಾಗದಂತೆ ಸಿನಿಮಾ ಮಾಡುವುದು ನಿರ್ದೇಶಕ ಮತ್ತು ಚಿತ್ರತಂಡದ ಜವಾಬ್ದಾರಿ. ತಪ್ಪುಗ
ಸಿನಿಮಾದ ಪ್ರಚಾರ: ಕಳಕಳಿಯ ಸವಕಳಿ‘ರಾಮಾಯಣ’ ಸಿನಿಮಾದೊಳಗಿನ ಸಣ್ಣಪುಟ್ಟ ವಿಎಫ್ಎಕ್ಸ್ ತಪ್ಪುಗಳನ್ನು ದಯವಿಟ್ಟು ಹುಡುಕಲು ಹೋಗಬೇಡಿ ಎಂದು ನಟ ಯಶ್, ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. ಮುಂದುವರಿದು, ಇಂತಹ ಪ್ರಯತ್ನಗಳು ಮುಂದೆಂದೂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ತಪ್ಪುಗಳಿಲ್ಲದೆ ಆಭಾಸವಾಗದಂತೆ ಸಿನಿಮಾ ಮಾಡುವುದು ನಿರ್ದೇಶಕ ಮತ್ತು ಚಿತ್ರತಂಡದ ಜವಾಬ್ದಾರಿ. ತಪ್ಪುಗಳನ್ನು ಹುಡುಕಬೇಡಿ ಎಂದು ಹೇಳುವುದು ಸರಿಯೆ? ಅದನ್ನು ಪ್ರೇಕ್ಷಕರಿಗೆ ಬಿಡಬೇಕು. ಇಂಥ ಪ್ರಯತ್ನಗಳು ಮುಂದೆ ಆಗಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನೂ ಒಪ್ಪಲಾಗದು. ಯಾರಾದರೂ ಸಿನಿಮಾ ಮಾಡಬಹುದು; ನಿರ್ಮಾಣದ ಕನಸು ಕಾಣಬಹುದು. ಆದರೆ, ಸಿನಿಮಾ ಮೇಲಿನ ಶ್ರದ್ಧೆ, ಹುಚ್ಚು ಕೆಲವರಲ್ಲಷ್ಟೇ ಇರುತ್ತದೆ ಎಂದು ಯಶ್ ಅವರು ಹೇಳುವ ಮೂಲಕ ಅಮೆರಿಕದಲ್ಲಿ ತಮ್ಮ ಉದ್ಯಮದಲ್ಲಿ ಆರಾಮವಾಗಿದ್ದ ‘ರಾಮಾಯಣ’ದ ಸಹ ನಿರ್ಮಾಪಕ ನಮಿತ್ ಮಲ್ಹೋತ್ರ ಅವರನ್ನು ಕಾಪಾಡುವ ಜವಾಬ್ದಾರಿಯನ್ನೂ ಪ್ರೇಕ್ಷಕರಿಗೆ ವಹಿಸಿದ್ದಾರೆ. ಒಂದು ಚಿತ್ರ ಚೆನ್ನಾಗಿಲ್ಲದಿದ್ದರೆ ಅದನ್ನು ನೋಡಲು ನೂರಾರು ರೂಪಾಯಿ ವ್ಯಯಿಸುವ ಪ್ರೇಕ್ಷಕರನ್ನು ಯಾರು ಕಾಪಾಡಬೇಕು?⇒ಜಗದೀಶ್ ಎಚ್.ಬಿ., ಹುಬ್ಬಳ್ಳಿ ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆಆರ್ಎಸ್ಎಸ್ನವರು ಪಥಸಂಚಲನಕ್ಕೆ ಸಂಬಂಧಿಸಿದಂತೆ ನಿಗದಿತ ನಮೂನೆಯಲ್ಲಿಮನವಿ ಸಲ್ಲಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿರುವುದು ಸರಿ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳು ಸಂವಿಧಾನದ ಚೌಕಟ್ಟಿನೊಳಗೆ ನಡೆದುಕೊಳ್ಳಬೇಕೇ ಹೊರತು ಸರ್ಕಾರಕ್ಕೆ ನಿರ್ದೇಶನ ನೀಡುವ ಧೋರಣೆ ತಾಳಬಾರದು. ಸಾಂವಿಧಾನಿಕ ಸಂಸ್ಥೆಗಳಿಗೆ ಸಲ್ಲಬೇಕಾದ ಗೌರವ ನೀಡುವುದನ್ನು ಆರ್ಎಸ್ಎಸ್ ಇನ್ನಾದರೂ ಕಲಿತುಕೊಳ್ಳಬೇಕಿದೆ. ಭದ್ರತೆ ಬಯಸುವ ಸಂಘಟನೆಯು ತಾನು ಪಡೆಯುತ್ತಿರುವ ರಕ್ಷಣೆಗೆ ಜನರ ತೆರಿಗೆ ಹಣವನ್ನು ಬಳಸಲಾಗುತ್ತಿದೆ ಎಂಬುದನ್ನು ಮರೆಯಬಾರದು. ಆತ್ಮಾವಲೋಕನ ಮಾಡಿಕೊಂಡು, ನೆಲದ ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳುವುದನ್ನು ಅದು ರೂಢಿಸಿಕೊಳ್ಳಲಿ. ಯಾರೊಬ್ಬರೂ ಸಂವಿಧಾನಕ್ಕೆ ಅತೀತರಲ್ಲ; ಆರ್ಎಸ್ಎಸ್ ಸೇರಿದಂತೆ ಎಲ್ಲ ಸಂಘಟನೆಗಳು ಕಾನೂನಿನ ಪರಿಮಿತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕಿದೆ.⇒ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರುಬಿಡಿಎ ನಿವೇಶನ: ಅಕ್ರಮ ಕೊನೆಗೊಳ್ಳಲಿಬೆಂಗಳೂರಿನ ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಕ್ಕಾಗಿ ನಿರೀಕ್ಷಿತಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿಲ್ಲ; ಹಾಗಾಗಿ, ಅರ್ಜಿ ಸಲ್ಲಿಸುವ ದಿನಾಂಕವನ್ನು ಅ. 31ರವರೆಗೂ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ನಾಗರಿಕರಿಂದ ಬಿಡಿಎ ನಿವೇಶನಗಳಿಗೆ ಹೆಚ್ಚು ಬೇಡಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೂ, ಅಂತಿಮ ದಿನಾಂಕದ ಹೊತ್ತಿಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ, ನಗರದಲ್ಲಿ ನಿವೇಶನದ ಬೆಲೆ ಗಗನಕ್ಕೇರಿದೆ. ಈಗಾಗಲೇ, ನಿವೇಶನ ಹೊಂದಿರುವವರು ಸಂಬಂಧಿಕರ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಹೂಡಿಕೆಗಾಗಿ ನಿವೇಶನಕೊಳ್ಳಲು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈ ಅಕ್ರಮದ ತಡೆಗೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸೂಕ್ತ ಕಾರ್ಯ ವಿಧಾನ ರೂಪಿಸಬೇಕಿದೆ. ಅನರ್ಹರನ್ನು ಗುರ್ತಿಸಿ ಕಠಿಣ ಕ್ರಮ ಜರುಗಿಸಬೇಕಿದೆ.⇒ಜಿ. ಬೈರೇಗೌಡ ಕೊಡಿಗೇಹಳ್ಳಿ, ಬೆಂಗಳೂರುನಮ್ಮ ಸಡಗರಕ್ಕೆ ಆನೆಗಳಿಗೆ ಹೊರೆಯೇಕೆ?ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ‘ಸೋಮಣ್ಣ’ಆನೆಯು ಬೆದರಿ ದಿಕ್ಕಾಪಾಲಾಗಿ ಓಡಿ ಅಂಬಾರಿಯನ್ನು ಕೆಳಕ್ಕೆ ಬೀಳಿಸಿದ್ದು ವರದಿಆಗಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ದ್ಯೋತಕ. ಅವುಗಳ ಆಚರಣೆಯಿಂದ ಜನರಮನಸ್ಸಿನಲ್ಲಿ ಸಂತೃಪ್ತಿ ಮೂಡುತ್ತದೆ. ಆದರೆ, ಸಾಕಾನೆಗಳಿಗೆ ಹಬ್ಬದ ಆಚರಣೆಯ ಸಂಭ್ರಮದ ಬಗ್ಗೆ ಅರಿವಿರುವುದಿಲ್ಲ. ಜನಜಂಗುಳಿಯ ಗದ್ದಲ, ಪಟಾಕಿ ಸಿಡಿತ, ವಾದ್ಯಗಳ ಮೊರೆತ ಅವುಗಳಿಗೆ ಭಯ ತರಿಸುತ್ತದೆ. ಬೃಹತ್ ದೇಹದ ಈ ಪ್ರಾಣಿಗಳು ಒತ್ತಡಕ್ಕೆ ಒಳಗಾದಾಗ ಕಾಡಿನಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆಯೋ ನಾಡಿನಲ್ಲೂ ಅದೇ ರೀತಿ ಪ್ರತಿಕ್ರಿಯಿಸುತ್ತವೆ. ಇಂತಹ ಅನಾಹುತ ತಪ್ಪಿಸಲೆಂದೇ ಅವುಗಳಿಗೆ ತಿಂಗಳುಗಟ್ಟಲೆ ತರಬೇತಿ ನೀಡಲಾಗುತ್ತದೆ. ಆದರೂ ಅಪಾಯವನ್ನು ಅಲ್ಲಗೆಳೆಯುವಂತಿಲ್ಲ. ತಂತ್ರಜ್ಞಾನ ಅಜೀರ್ಣವಾಗುವಷ್ಟು ಬೆಳೆದಿರುವ ಈ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟಿಕ್ ಆನೆಗಳನ್ನು ಬಳಸಬೇಕಿದೆ.⇒ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ