ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾನ ಆರಂಭ
ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆ ತನಕ ಮತದಾನಕ್ಕೆ ಅವಕಾಶವಿದೆ.ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಈ ಕ್ಷೇತ್ರವು ಒಳಗೊಂಡಿದೆ.
ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆ ತನಕ ಮತದಾನಕ್ಕೆ ಅವಕಾಶವಿದೆ.ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಈ ಕ್ಷೇತ್ರವು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಸುಗಮ ಮತದಾನಕ್ಕಾಗಿ 144 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರತಿ ಮತಗಟ್ಟೆಗೆ ಒಬ್ಬ ಪಿಆರ್ಒ, ಎಪಿಆರ್ಒ, ಪಿಒ 1, ಪಿಒ 2, ಮೈಕ್ರೊ ವೀಕ್ಷಕರು, ಗ್ರೂಪ್ ‘ಡಿ’ ಸಿಬ್ಬಂದಿ ನೇಮಿಸಲಾಗಿದೆ. ಮತದಾನ ಪ್ರಕ್ರಿಯೆ ಮುಕ್ತ, ನಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ 15 ಡಿವೈಎಸ್ಪಿಗಳು, 43 ಸಿಪಿಐಗಳು, 196 ಪಿಎಸ್ಐ–ಎಎಸ್ಐಗಳು, 386 ಹೆಡ್ಕಾನ್ಸ್ಟೆಬಲ್ಗಳು, 385 ಕಾನ್ಸ್ಟೆಬಲ್/ಮಹಿಳಾ ಕಾನ್ಸ್ಟೆಬಲ್ಗಳು ಸೇರಿದಂತೆ ಒಟ್ಟು 1,008 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸೈಬಣ್ಣಾ ಜಮಾದಾರ, ಜನತಾ ದಳ (ಸಂಯುಕ್ತ) ಪಕ್ಷದ ಅಭ್ಯರ್ಥಿ ಪ್ರೊ.ಎಸ್.ಎಲ್.ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ತಂದೆ ನಾಗಣ್ಣ, ತುಳಸಪ್ಪ ದಾಸರ, ಮೆಹಬೂಬ್ ವಂಟೇಲಿ, ರಾಜಕುಮಾರ, ರಾಜು, ಶರಣಬಸಪ್ಪ, ಶಶಿಧರ, ಶಿವಶಂಕರ ಹಾಗೂ ಸುರೇಶ ಸೇರಿದಂತೆ 13 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ.ಕ್ಷೇತ್ರದಲ್ಲಿ 34,784 ಮತದಾರರುಈಶಾನ್ಯ ಶಿಕ್ಷಕರ ಕ್ಷೇತ್ರದಾದ್ಯಂತ 20,040 ಪುರುಷ ಹಾಗೂ 14,744 ಮಹಿಳಾ ಸೇರಿದಂತೆ ಒಟ್ಟು 34,784 ಮತದಾರರು ಮತ ಚಲಾವಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.ಬಳ್ಳಾರಿ ಜಿಲ್ಲೆಯಲ್ಲಿ 1,813 ಪುರುಷ, 1,580 ಮಹಿಳೆ ಸೇರಿ 3,393, ವಿಜಯನಗರ ಜಿಲ್ಲೆಯಲ್ಲಿ 2,190 ಪುರುಷ, 1,136 ಮಹಿಳೆ ಸೇರಿ 3,326, ಬೀದರ್ ಜಿಲ್ಲೆಯಲ್ಲಿ 3,794 ಪುರುಷ, 3,244 ಮಹಿಳೆ ಸೇರಿ 7,038, ಕಲಬುರಗಿ ಜಿಲ್ಲೆಯಲ್ಲಿ 5,672 ಪುರುಷ, 4,980 ಮಹಿಳೆ ಸೇರಿ 10,652, ಯಾದಗಿರಿ ಜಿಲ್ಲೆಯಲ್ಲಿ 1,548 ಪುರುಷ, 711 ಮಹಿಳೆ ಸೇರಿ 2,259, ಕೊಪ್ಪಳ ಜಿಲ್ಲೆಯಲ್ಲಿ 1,845 ಪುರುಷ, 869 ಮಹಿಳೆ ಸೇರಿ 2,714 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,178 ಪುರುಷ, 2,224 ಮಹಿಲೆ ಸೇರಿ 5,402 ಮತದಾರರು ಇದ್ದಾರೆ.ಕಲಬುರಗಿ ಜಿಲ್ಲೆಯಲ್ಲಿ 40, ಬೀದರ್ ಜಿಲ್ಲೆಯಲ್ಲಿ 33, ರಾಯಚೂರು ಜಿಲ್ಲೆಯಲ್ಲಿ 16, ಬಳ್ಳಾರಿ ಜಿಲ್ಲೆಯಲ್ಲಿ ಒಂದು ಹೆಚ್ಚುವರಿ ಸೇರಿದಂತೆ 9, ಕೊಪ್ಪಳ ಜಿಲ್ಲೆಯಲ್ಲಿ 20, ಯಾದಗಿರಿ ಜಿಲ್ಲೆಯಲ್ಲಿ 8, ವಿಜಯನಗರ ಜಿಲ್ಲೆಯಲ್ಲಿ18 ಸೇರಿದಂತೆ ಒಟ್ಟು 144 ಮತಗಟ್ಟೆಗಳನ್ನು ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿದೆ.144 ಮತಗಟ್ಟೆ