ಈಶಾನ್ಯ ಶಿಕ್ಷಕರ ಕ್ಷೇತ್ರ: ಕೊಪ್ಪಳದ 20 ಕೇಂದ್ರಗಳಲ್ಲಿ ಮತದಾನ
ಕೊಪ್ಪಳ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಜಿಲ್ಲೆಯಾದ್ಯಂತ ಆರಂಭವಾಗಿದೆ.ಬೆಳಿಗ್ಗೆ 10 ಗಂಟೆ ಅಂತ್ಯಕ್ಕೆ ಶೇ.12.42ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ತಿಳಿಸಿದ್ದಾರೆ.ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರ ತಾಲ್ಲೂಕುಗಳಲ್ಲಿ
The Bharath News1 min readSource: Prajavani
Read in
ಕೊಪ್ಪಳ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಜಿಲ್ಲೆಯಾದ್ಯಂತ ಆರಂಭವಾಗಿದೆ.ಬೆಳಿಗ್ಗೆ 10 ಗಂಟೆ ಅಂತ್ಯಕ್ಕೆ ಶೇ.12.42ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ತಿಳಿಸಿದ್ದಾರೆ.ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರ ತಾಲ್ಲೂಕುಗಳಲ್ಲಿ ಒಟ್ಟು 20 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.ಒಟ್ಟು 1845 ಪುರುಷ ಮತದಾರರ ಪೈಕಿ 241 ಜನ ಹಾಗೂ ಒಟ್ಟು 869 ಮಹಿಳಾ ಮತದಾರರ ಪೈಕಿ 96 ಜನರು ಮತಚಲಾಯಿಸಿದ್ದಾರೆ.
Read the complete story at Prajavani00