ಗದಗ: ಲಿಂಗಾಯತ ಮಠಗಳ ಉಳಿವಿಗೆ ಶ್ರಮಿಸಿ
ಗದಗ: ‘ಲಿಂಗಾಯತ ತತ್ವ ಪ್ರಸಾರ ಮಾಡುತ್ತಿರುವ ಮಠಗಳು, ಸ್ವಾಮೀಜಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮವರಿಂದಲೇ ನಮಗೆ ವಿರೋಧವಿದೆ. ಇಂತಹ ಸಂದರ್ಭದಲ್ಲಿ ಭಕ್ತರು, ಮಠಗಳ ಪರ ನಿಲ್ಲಬೇಕು’ ಎಂದು ಚಿತ್ತರಗಿ–ಇಳಕಲ್ನ ವಿಜಯ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ತೋಂಟದ ಸಿ

ಗದಗ: ‘ಲಿಂಗಾಯತ ತತ್ವ ಪ್ರಸಾರ ಮಾಡುತ್ತಿರುವ ಮಠಗಳು, ಸ್ವಾಮೀಜಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮವರಿಂದಲೇ ನಮಗೆ ವಿರೋಧವಿದೆ. ಇಂತಹ ಸಂದರ್ಭದಲ್ಲಿ ಭಕ್ತರು, ಮಠಗಳ ಪರ ನಿಲ್ಲಬೇಕು’ ಎಂದು ಚಿತ್ತರಗಿ–ಇಳಕಲ್ನ ವಿಜಯ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಎಂಟನೇ ಪುಣ್ಯಸ್ಮರಣೆ-ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಬಸವತತ್ವ ವಿರೋಧಿಸುತ್ತಿರುವವರ ಹಿಂದೆ ದೊಡ್ಡ ಶಕ್ತಿ ಇದೆ. ಬಸವತತ್ವ ಪ್ರಸಾರ ಅಗಬಾರದೆಂಬ ಹುನ್ನಾರವಿದೆ. ತತ್ವ ಪ್ರಚಾರಕರ ತೇಜೋವಧೆ ನಡೆದಿದೆ. ಲಿಂಗಾಯತ ಸಮಾಜದ ಮೇಲೆ ಮಠಾಧೀಶರ ಪ್ರಭಾವ ಇರಬಾರದೆಂದು ಷಡ್ಯಂತ್ರ ರೂಪಿಸಲಾಗುತ್ತಿದೆ. ಇದಕ್ಕಾಗಿ, ಬಸವತತ್ವ ಪ್ರಸಾರಕರ ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ’ ಎಂದರು.‘ಸುಳ್ಳು ಸುದ್ದಿಗಳಿಂದಾಗಿ ಸಮಾಜದವರು ಮಠಗಳಿಂದ ದೂರ ಸರಿಯುತ್ತಿದ್ದಾರೆ. ಸತ್ಯಾಸತ್ಯತೆ ವಿಚಾರಿಸಬೇಕು. ಬೇರೊಬ್ಬರ ಮಾತು ಕೇಳದೆ, ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು. ಸಮಾಜದವರು ಸುಶಿಕ್ಷಿತರಾಗಿ, ಮುಖ್ಯವಾಹಿನಿಗೆ ಬರಲು ಮಠಗಳೇ ಕಾರಣ ಎಂಬುದನ್ನು ಮರೆಯಬಾರದು. ಮಠಗಳ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಬೇಕು’ ಎಂದರು.ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಮಾತನಾಡಿ, ‘ಲಿಂಗಾಯತ ಸಮಾಜ, ಮಠಗಳು, ಸ್ವಾಮೀಜಿಗಳನ್ನು ಅವಹೇಳನ ಮಾಡುವ ಪ್ರಯತ್ನ ನಡೆದಿದೆ. ಲಿಂಗಾಯತ ಸಮಾಜದ ಕೆಲ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳೇ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಬಸವತತ್ವ ಪಾಲಿಸುವವರು ಇನ್ನಷ್ಟು ಸಂಘಟಿತರಾಗಿ, ಇಂತಹವರನ್ನು ಎದುರಿಸಬೇಕು’ ಎಂದರು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎನ್.ಜಿ. ಮಹಾದೇವಪ್ಪ ರಚಿಸಿದ ‘ವಚನಗಳಲ್ಲಿ ಅನುಭಾವ’, ಪ್ರದೀಪಕುಮಾರ ಹೆಬ್ರಿ–‘ಬೆಳಗ ಮಹಾಬೆಳಗು’, ಪ್ರೊ. ಆರ್.ಎಸ್. ಲೆಕ್ಕದ–‘ಷೇಕ್ಸ್ಪಿಯರ್ ಮತ್ತು ಕಂದಗಲ್ಲ ಹನುಮಂತರಾಯ ತೌಲನಿಕ ಅಧ್ಯಯನ’, ಶ್ರೀಕಂಠ ಚೌಕಿಮಠ–‘ಶಾಂತಗಿರಿ ಅಯ್ಯಪ್ಪಯ್ಯ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಭೂಮರಡ್ಡಿ ವೃತ್ತದ ಬಳಿ ನಿರ್ಮಿಸಿದ ತೋಂಟದಾರ್ಯ ವಿದ್ಯಾಪೀಠದ ಸುವರ್ಣಸೌಧವನ್ನು ಉದ್ಘಾಟಿಸಲಾಯಿತು.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಶಾಂತಲಿಂಗ ಸ್ವಾಮೀಜಿ, ಪ್ರಭು ಸ್ವಾಮೀಜಿ, ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಶರಣಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜು, ಶಿವಮಹಾಂತ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಯಶವಂತ ದೇವರು, ಬಸವರಾಜ ವೆಂಕಟಾಪುರ, ಐ.ಜಿ. ಸನದಿ, ಮಹಾಂತೇಶ ಹೊಸಮಠ, ಎನ್.ಜಿ. ಮಹದೇವಪ್ಪ, ಎಸ್.ಎಸ್. ಪಾಟೀಲಇದ್ದರು. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಾರಂಗಮಠ, ಶ್ರೀಶೈಲನಡೆ, ನುಡಿ, ಬದುಕು, ಜ್ಞಾನ ಕಲಿಸಿದ ಶ್ರೀಗಳು 21ನೇ ಶತಮಾನದ ವಿವೇಕಾನಂದರು ಆಗಿದ್ದರು. ಚಳವಳಿಗೆ ಸಹಕರಿಸುವುದರ ಜೊತೆಗೆ ತಾರ್ಕಿಕ ಅಂತ್ಯದವರೆಗೆ ಒಯ್ಯುತ್ತಿದ್ದರು.