40 ದಿನಗಳ ಬಳಿಕ ಕೆಆರ್ಡಿಐಎಲ್ ಎಂಜಿನಿಯರ್ ಫರ್ವೀಜ್ ಪತ್ತೆ
ಗದಗ: ಸೆಪ್ಟೆಂಬರ್ 14ರಂದು ನಾಪತ್ತೆಯಾಗಿದ್ದ ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ಡಿಐಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫರ್ವೀಜ್ ಧಾರವಾಡ, ಅಕ್ಟೋಬರ್ 22ರಂದು ಮುಂಬೈನಲ್ಲಿ ಪತ್ತೆಯಾಗಿದ್ದಾರೆ.‘ಫರ್ವೀಜ್ನನ್ನು ಪತ್ತೆಮಾಡಿರುವ ಜಿಲ್ಲೆಯ ಪೊಲೀಸರು ಗದಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇಂದು (ಅ.23) ತಡವಾಗಿ ಬರಬಹುದು’

ಗದಗ: ಸೆಪ್ಟೆಂಬರ್ 14ರಂದು ನಾಪತ್ತೆಯಾಗಿದ್ದ ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ಡಿಐಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫರ್ವೀಜ್ ಧಾರವಾಡ, ಅಕ್ಟೋಬರ್ 22ರಂದು ಮುಂಬೈನಲ್ಲಿ ಪತ್ತೆಯಾಗಿದ್ದಾರೆ.‘ಫರ್ವೀಜ್ನನ್ನು ಪತ್ತೆಮಾಡಿರುವ ಜಿಲ್ಲೆಯ ಪೊಲೀಸರು ಗದಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇಂದು (ಅ.23) ತಡವಾಗಿ ಬರಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ‘ಪ್ರಜಾವಾಣಿ’ಗೆ ತಿಳಿಸಿದರು.ಸೆ.13ರಂದು ಬೆಂಗಳೂರಿನಲ್ಲಿ ಸಭೆ ಇರುವುದಾಗಿ ತೆರಳಿದ್ದ ಫರ್ವೀಜ್ ಆನಂತರ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಅವರ ಕುಟುಂಬದವರು ನೀಡಿದ್ದ ದೂರು ಆಧರಿಸಿ, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೆಆರ್ಡಿಐಎಲ್ ಕಚೇರಿಯಲ್ಲಿ ದೊರೆತಿದ್ದ ಪತ್ರದಲ್ಲಿ, ‘ಇಲಾಖೆಯಲ್ಲಿ ಅನುದಾನ ಕೊರತೆ ಉಂಟಾಗಿರುವುದರಿಂದ ಒತ್ತಡ ಹೆಚ್ಚುತ್ತಿದೆ. ಇದರಿಂದ ಮನನೊಂದು ಜೀವನ ಕೊನೆಗೊಳಿಸಿಕೊಳ್ಳುತ್ತಿದ್ದೇನೆ’ ಎಂದು ಫರ್ವೀಜ್ ಬರೆದಿದ್ದರು. ಮನೆಯಲ್ಲಿ ದೊರೆತ ಡೈರಿಯಲ್ಲೂ ಹೀಗೆ ಬರೆಯಲಾಗಿತ್ತು. ಜಿಲ್ಲಾ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತಾದರೂ, ಫರ್ವೀಜ್ ಮೊಬೈಲ್ ಫೋನ್ ಹಾಗೂ ಎಟಿಎಂ ಬಳಸದ ಕಾರಣ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿತ್ತು. ಆಂಧ್ರಪ್ರದೇಶದ ವಿಜಯವಾಡ, ಮಧ್ಯಪ್ರದೇಶದ ಭೂಪಾಲ್ನಲ್ಲಿ ಅವರ ಚಲನವಲನ ಪತ್ತೆಯಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿ, ಹುಡುಕಾಡಿದರೂ ಫರ್ವೀಜ್ ಪತ್ತೆಯಾಗಿರಲಿಲ್ಲ.