ಪಶ್ಚಿಮ ಪದವೀಧರರ ಕ್ಷೇತ್ರ: ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ
ಗದಗ: ಇಲ್ಲಿನ ಗದಗ-ಬೆಟಗೇರಿ ನಗರಸಭೆ ಪಿ.ಯು ಕಾಲೇಜಿನ ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ನೂಕಾಡಿದರು.ಜಿಲ್ಲೆಯವರಲ್ಲದ ಮುಖಂಡರನ್ನು ಮತಕೇಂದ್ರದ ಒಳಗೆ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಗೇಟಿನ ಬಳಿ ಇದ್ದ ಪೊಲೀಸರನ್ನು ತಳ್ಳಿ, ಕೇಂದ್ರದೊಳಗೆ ನುಗ್ಗಿದರು.ಕೇಂದ್ರದ ಆವರಣದಲ್ಲಿ ಎರಡೂ ಪಕ್ಷಗಳ ಕಾರ್ಯಕ
ಗದಗ: ಇಲ್ಲಿನ ಗದಗ-ಬೆಟಗೇರಿ ನಗರಸಭೆ ಪಿ.ಯು ಕಾಲೇಜಿನ ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ನೂಕಾಡಿದರು.ಜಿಲ್ಲೆಯವರಲ್ಲದ ಮುಖಂಡರನ್ನು ಮತಕೇಂದ್ರದ ಒಳಗೆ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಗೇಟಿನ ಬಳಿ ಇದ್ದ ಪೊಲೀಸರನ್ನು ತಳ್ಳಿ, ಕೇಂದ್ರದೊಳಗೆ ನುಗ್ಗಿದರು.ಕೇಂದ್ರದ ಆವರಣದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ಉಂಟಾಯಿತು. ಪರಸ್ಪರ ಕೈ ಮಿಲಾಯಿಸಿದರು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ಗದಗ ಜಿಲ್ಲೆಯಲ್ಲಿ ಶೇ 25ರಷ್ಟು ಮತದಾನಗದಗ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೆ ಶೇ 25.27ರಷ್ಟು ಮತದಾನವಾಗಿದೆ.3,462 ಪುರುಷರು ಹಾಗೂ 1,994 ಮಹಿಳೆಯರು ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 21,594 ಮಂದಿ ಪದವೀಧರ ಮತದಾರರು ಇದ್ದಾರೆ.ನಗರಸಭೆಯಲ್ಲಿ ತೆರೆದಿರುವ ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ನಾಲ್ಕೈದು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪಕ್ಷೇತರ ಅಭ್ಯರ್ಥಿಗಳು ಸಹ ಕೇಂದ್ರಗಳನ್ನು ತೆರೆದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರು ಮತಯಾಚನೆ ಮಾಡಿದರು.