ಮೈಸೂರು ದಸರಾ ಮಹೋತ್ಸವದಲ್ಲಿ ಪ್ರತಿಭಾಂಜಲಿ ಡೇವಿಡ್ ತಂಡದಿಂದ ಸುಗಮ ಸಂಗೀತ
ಮಂಡ್ಯ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಮಂಡ್ಯದ ಗಾಯಕ ಪ್ರತಿಭಾಂಜಲಿ ಡೇವಿಡ್ ಮತ್ತು ತಂಡದವರು ಪ್ರಸ್ತುತಪಡಿಸಿದ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.ಕಾರ್ಯಕ್ರಮದ ಆರಂಭದಲ್ಲಿ ಸಂತ ಶಿಶುನಾಳ ಶರೀಫರ ಜನಪ್ರಿಯ ಗೀತೆ ‘ಕೋಡಗನ ಕೋಳಿ ನುಂಗಿತ್ತ’ ಹಾಡನ್ನು ಪ್ರಸ್ತುತಪಡಿಸಿ ಸಂಗೀತ ಸಂಜೆಗೆ ಚಾಲನೆ ನೀಡಲಾಯಿತು. ಬಳಿಕ ವರ್ಷಾ ಹೂಗಾರ್ ಅವರ ಕಂ

ಮಂಡ್ಯ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಮಂಡ್ಯದ ಗಾಯಕ ಪ್ರತಿಭಾಂಜಲಿ ಡೇವಿಡ್ ಮತ್ತು ತಂಡದವರು ಪ್ರಸ್ತುತಪಡಿಸಿದ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.ಕಾರ್ಯಕ್ರಮದ ಆರಂಭದಲ್ಲಿ ಸಂತ ಶಿಶುನಾಳ ಶರೀಫರ ಜನಪ್ರಿಯ ಗೀತೆ ‘ಕೋಡಗನ ಕೋಳಿ ನುಂಗಿತ್ತ’ ಹಾಡನ್ನು ಪ್ರಸ್ತುತಪಡಿಸಿ ಸಂಗೀತ ಸಂಜೆಗೆ ಚಾಲನೆ ನೀಡಲಾಯಿತು. ಬಳಿಕ ವರ್ಷಾ ಹೂಗಾರ್ ಅವರ ಕಂಠಸಿರಿಯಲ್ಲಿ ಮೂಡಿಬಂದ ‘ಮುಗಿಲ ಮಾರಿಗೆ ರಾಗ ರತಿಯ ಸಂಜೆ ಆಗಿತ್ತ’ ಗೀತೆ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು.ಡೇವಿಡ್ ಹಾಗೂ ಹಂಸ ಅವರ ಧ್ವನಿಯಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರ ‘ಒಂದಿರುಳು ಕನಸಿನಲ್ಲಿ ನನ್ನವಳ ಕೇಳಿದೆನು’, ಜಿ.ಎಸ್. ಶಿವರುದ್ರಪ್ಪ ಅವರ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಮತ್ತು ‘ಎದೆ ತುಂಬಿ ಹಾಡುವೆನು ಅಂದು ನಾನು’, ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ‘ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಗೀತೆಗಳನ್ನು ಗಾಯಕರು ಭಾವಪೂರ್ಣವಾಗಿ ಹಾಡಿ ರಂಜಿಸಿದರು.ಸಂತ ಶಿಶುನಾಳ ಶರೀಫರ ‘ಸೋರುತಿಹುದು ಮನೆಯ ಮಾಳಿಗೆ’ ಹಾಗೂ ವರಕವಿ ಬೇಂದ್ರೆ ಅವರ ‘ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ’ ಗೀತೆಗಳೂ ಸಂಗೀತ ಸಂಜೆಯ ಮೆರುಗು ಹೆಚ್ಚಿಸಿದವು.261023-40-1115235274