ಕೇರಳಂ ಲೋಕಭವನದಲ್ಲಿ ಸಸ್ಯಾಹಾರ ಮಾತ್ರ: ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಕಿಡಿ
ತಿರುವನಂತಪುರ: ಕೇರಳಂನ ಹೊಸ ರಾಜ್ಯಪಾಲ ಓಂ ಪ್ರಕಾಶ್ ಮಾಥೂರ್ ಅವರು, ಲೋಕಭವನದ ಅಡುಗೆಮನೆಯಲ್ಲಿ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ಮಾಡಿದ್ದಾರೆ ಎನ್ನಲಾದ ಆದೇಶದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೀವ್ರವಾಗಿ ಟೀಕಿಸಿದ್ದಾರೆ.ಇದು ಸಂಘ ಪರಿವಾರದ ಅಸಾಂವಿಧಾನಿಕ ಹಿತಾಸಕ್ತಿಯ ಪ್ರತಿಬಿಂಬವಾಗಿದೆ ಎಂದಿದ್ದಾರೆ.ಇಂದು(ಅ.23

ತಿರುವನಂತಪುರ: ಕೇರಳಂನ ಹೊಸ ರಾಜ್ಯಪಾಲ ಓಂ ಪ್ರಕಾಶ್ ಮಾಥೂರ್ ಅವರು, ಲೋಕಭವನದ ಅಡುಗೆಮನೆಯಲ್ಲಿ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ಮಾಡಿದ್ದಾರೆ ಎನ್ನಲಾದ ಆದೇಶದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೀವ್ರವಾಗಿ ಟೀಕಿಸಿದ್ದಾರೆ.ಇದು ಸಂಘ ಪರಿವಾರದ ಅಸಾಂವಿಧಾನಿಕ ಹಿತಾಸಕ್ತಿಯ ಪ್ರತಿಬಿಂಬವಾಗಿದೆ ಎಂದಿದ್ದಾರೆ.ಇಂದು(ಅ.23) ಕೇರಳಂನ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಮಾಥೂರ್, ಲೋಕಭವನದಲ್ಲಿ ಮಾಂಸಾಹಾರದ ಅಡುಗೆ ಮಾಡುವುದು, ಬಡಿಸುವುದನ್ನು ಮಾಡುವಂತಿಲ್ಲ ಎಂದು ಆದೇಶಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಭವನದ ಮೂಲಗಳು, ಮಾಥೂರ್ ಅವರು ಸಸ್ಯಾಹಾರಿಯಾಗಿರುವುದರಿಂದ ಮಾಂಸಾಹಾರದ ಅಡುಗೆ ಮಾಡದಂತೆ ನಿರ್ದೇಶನ ನೀಡಿದ್ದಾರೆ. ನೌಕರರ ಆಹಾರ ಆಯ್ಕೆಗೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿವೆ.ಲೋಕಭವನದ ಅಡುಗೆಮನೆಯಲ್ಲಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ಆದೇಶಿಸುವ ಮೂಲಕ ರಾಜ್ಯಪಾಲರು ಬಹಳ ಮುಂದೆ ಹೋಗಿದ್ದಾರೆ ಎಂದು ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.ಕೇರಳಂನಲ್ಲಿ ಮಿಶ್ರ ಆಹಾರ ಸಂಸ್ಕೃತಿ ಇದೆ. ಕರಾವಳಿ ರಾಜ್ಯವಾಗಿ ಹೇರಳವಾಗಿ ಮೀನು ದೊರೆಯುತ್ತದೆ. ಸಸ್ಯಾಹಾರ ಅಥವಾ ಮಾಂಸಾಹಾರ ಸೇವನೆ ನಿರ್ಧಾರ ಮಾಡುವ ಹಕ್ಕು ಇಲ್ಲಿನ ಜನರಿಗಿದೆ ಎಂದಿದ್ದಾರೆ.ಆಹಾರ ಹವ್ಯಾಸಕ್ಕೆ ನಿರ್ಬಂಧ ಹೇರುವ ಯಾವುದೇ ಯತ್ನ ಮತ್ತು ಅವರು ಇಂತಹದ್ದೇ ಆಹಾರ ತಿನ್ನಬೇಕೆಂದು ಒತ್ತಾಯಿಸುವ ಸರ್ವಾಧಿಕಾರಿ ಧೋರಣೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.ನಾವು ಏನು ತಿನ್ನಬೇಕು ಮತ್ತು ಹೇಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಜನರ ಹಕ್ಕನ್ನು ರಕ್ಷಿಸುವುದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಕರ್ತವ್ಯವಾಗಿರುತ್ತದೆ. ಅಂತಹವರೇ ಇತರರು ತಮ್ಮದೇ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಹೊಸ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿಕೊಂಡು ವೈಯಕ್ತಿಕ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದ್ದಾರೆ ಎಂದು ವೇಣುಗೋಪಾಲ್ ದೂರಿದರು.