ಕಿತ್ತೂರು ಉತ್ಸವ: ಮತ್ತೆ ಮರಳಿದ ವೈಭವ, ದಸರಾ ಸಂಭ್ರಮ
ಚನ್ನಮ್ಮನ ಕಿತ್ತೂರು: ವೀರವನಿತೆ ರಾಣಿ ಕಿತ್ತೂರು ಚನ್ನಮ್ಮನ 202ನೇ ವಿಜಯೋತ್ಸವ ಅಂಗವಾಗಿ ಅ. 23ರಿಂದ 25 ರವರೆಗೆ ರಾಣಿ ಚನ್ನಮ್ಮನ ಕರ್ಮಭೂಮಿಯಲ್ಲಿ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ಕ್ಕೆ ಇಡೀ ಪಟ್ಟಣವು ಕಳೆಗಟ್ಟಿದೆ. ನಾಡಹಬ್ಬ ದಸರಾ ಮತ್ತು ಐತಿಹಾಸಿಕ ಕಿತ್ತೂರು ಉತ್ಸವ ಎರಡೂ ಒಂದರ ನಂತರ ಒಂದು ಮೇಳೈಸಿರುವುದು ಈ ಬಾರಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.ತಳ

ಚನ್ನಮ್ಮನ ಕಿತ್ತೂರು: ವೀರವನಿತೆ ರಾಣಿ ಕಿತ್ತೂರು ಚನ್ನಮ್ಮನ 202ನೇ ವಿಜಯೋತ್ಸವ ಅಂಗವಾಗಿ ಅ. 23ರಿಂದ 25 ರವರೆಗೆ ರಾಣಿ ಚನ್ನಮ್ಮನ ಕರ್ಮಭೂಮಿಯಲ್ಲಿ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ಕ್ಕೆ ಇಡೀ ಪಟ್ಟಣವು ಕಳೆಗಟ್ಟಿದೆ. ನಾಡಹಬ್ಬ ದಸರಾ ಮತ್ತು ಐತಿಹಾಸಿಕ ಕಿತ್ತೂರು ಉತ್ಸವ ಎರಡೂ ಒಂದರ ನಂತರ ಒಂದು ಮೇಳೈಸಿರುವುದು ಈ ಬಾರಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.ತಳಿರು- ತೋರಣ, ವಿದ್ಯುದ್ದೀಪಗಳ ಅಲಂಕಾರದಿಂದ ಇಡೀ ಪಟ್ಟಣ ನವವಧುವಿನಂತೆ ಕಂಗೊಳಿಸುತ್ತಿದೆ. ರಾಣಿ ಚನ್ನಮ್ಮ, ಬಸವೇಶ್ವರ, ಗುರು ಮಡಿವಾಳೇಶ್ವರ, ಯಕ್ಷಗಾನ ಕಲಾ ವೈಭವ ದೃಶ್ಯಗಳು ದೀಪಾಲಂಕಾರದಲ್ಲಿ ಅರಳಿ ನಿಂತು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.ರಾಷ್ಟ್ರೀಯ ಹೆದ್ದಾರಿ ಬದಿಗಿರುವ ಅಶ್ವಾರೂಢ ರಾಣಿ ಚನ್ನಮ್ಮ ಪ್ರತಿಮೆ, ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ಪ್ರತಿಮೆ ಕಳೆಗಟ್ಟುವಂತೆ ಮಾಡಲಾಗಿದೆ. ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರು ಪಟ್ಟಣದಾದ್ಯಂತ ವಿಶೇಷ ರೀತಿಯ ಲೈಟ್ ಸರಮಾಲೆಗಳನ್ನು ಅಳವಡಿಸಲಾಗಿದೆ. ಇಡೀ ಊರಿನ ಇಕ್ಕೆಲಗಳು, ಗುಡಿಗಳು, ಗಿಡಗಳು, ಕೋಟೆಯೊಳಗಿನ ಬತೇರಿ, ಸರ್ಕಾರಿ ಕಟ್ಟಡಗಳು ಬೆಳಕು ಅರಳಿಸಿಕೊಂಡು ಝಗಮಗಿಸುತ್ತಿವೆ.ಉತ್ಸವದ ಉದ್ಘಾಟನೆ ಕಾರ್ಯಕ್ರಮ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಬರುವ ವೀಕ್ಷಕರಿಗೆ ಈ ಸಲವೂ ಕೋಟೆ ಆವರಣದೊಳಗೆ ರಾಣಿ ಚನ್ನಮ್ಮ ವೇದಿಕೆ, ವೀರಭದ್ರೇಶ್ವರ ದೇವಸ್ಥಾನದಲ್ಲಿ ಸರ್ದಾರ ಗುರುಸಿದ್ದಪ್ಪ ವೇದಿಕೆ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ರಾಣಿ ಚನ್ನಮ್ಮ ಸ್ಮಾರಕ ಭವನದಲ್ಲಿ ಅಮಟೂರು ಬಾಳಪ್ಪ ವೇದಿಕೆ ಸಿದ್ದಗೊಳಿಸಲಾಗಿದೆ.ಕೋಟೆ ಆವರಣದೊಳಗೆ 50,400 ಚದರಡಿಯ ರಾಣಿ ಚನ್ನಮ್ಮ ವೇದಿಕೆ ಹೆಸರಿನಲ್ಲಿ ವಿಶಾಲವಾದ ಜಲ ನಿರೋಧಕ ಶಾಮಿಯಾನ ನಿರ್ಮಾಣ ಮಾಡಲಾಗಿದೆ. ಈ ವೇದಿಕೆ ಹಿಂಭಾಗದಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಅಕ್ರಮ ಚಟುವಟಿಕೆ, ಕಿಡಿಗೇಡಿಗಳ ಕಿರಿಕಿರಿ ತಪ್ಪಿಸಲು ಪಟ್ಟಣದಾದ್ಯಂತ ಸುಮಾರು 28 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ.‘ವಿಜಯಜ್ಯೋತಿ’ಗೆ ಸ್ವಾಗತ: ರಾಜಧಾನಿ ಬೆಂಗಳೂರಿನಿಂದ ಬೀಳ್ಕೊಟ್ಟ ವಿಜಯಜ್ಯೋತಿ ಯಾತ್ರೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಂಚರಿಸಿ ಗುರುವಾರ ರಾತ್ರಿ ಇಲ್ಲಿಯ ಬಾಲಕಿಯರ ವಸತಿ ಶಾಲೆಯಲ್ಲಿ ತಂಗಿದೆ. ಶುಕ್ರವಾರ ಮುಂಜಾನೆ 11 ಗಂಟೆಗೆ ಜ್ಯೋತಿ ಯಾತ್ರೆಯ ಮೆರವಣಿಗೆಯು ಪಟ್ಟಣದಾದ್ಯಂತ ಸಂಚರಿಸಲಿದೆ. ನಾಡಿನ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.ರಾಣಿ ಚನ್ನಮ್ಮ ಹಾಗೂ ಸಂಸ್ಥಾನದ ವಿವಿಧ ದೃಷ್ಟಿಕೋನ ಇಟ್ಟುಕೊಂಡ ವಿಚಾರಗೋಷ್ಟಿಯೂ ಸಾಹಿತ್ಯಾಸಕ್ತರನ್ನು ಕೈ ಬೀಸಿ ಕರೆಯಲಿವೆ.ಅ.23ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿ ಜಾನುವಾರು ಜಾತ್ರೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಿ ಗಮನ ಸೆಳೆಯುವ ಉತ್ತಮ ತಳಿಯ ಜಾನುವಾರುಗಳಿಗೆ ನಗದು ಬಹುಮಾನ ಘೋಷಿಸಲಾಗಿದೆ. ಮೂರು ದಿನಗಳ ಉತ್ಸವಗಳಲ್ಲಿ ದೇಸಿ ಸೊಗಡಿನ ಕುಸ್ತಿ ಪಂದ್ಯಾವಳಿ, ಮ್ಯಾರಥಾನ್, ಸೈಕ್ಲಿಂಗ್, ಜಲಸಾಹಸ ಕ್ರೀಡೆ, ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ.ಸಮಾರೋಪಕ್ಕೆ ಸಿ.ಎಂಉತ್ಸವ ಉದ್ಘಾಟನೆ ಮಾಡಬೇಕಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಬಾಸಾಹೇಬ ಪಾಟೀಲ ಸೇರಿ ಜಿಲ್ಲೆಯ ಸಚಿವರು, ಶಾಸಕರು ಆಗಮಿಸುವರು ಎಂದು ಜಿಲ್ಲಾಡಳಿತ ತಿಳಿಸಿದೆ.ಖ್ಯಾತನಾಮರ ಸಾಂಸ್ಕೃತಿಕ ಕಾರ್ಯಕ್ರಮ23ಕ್ಕೆ ರಾತ್ರಿ 9.30ಕ್ಕೆ ಶಮಿತಾ ಮಲ್ನಾಡ್ ಮತ್ತು ಚಂದನ ಶೆಟ್ಟಿ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 24 ರಂದು 8.30ಕ್ಕೆ ರಾಜೇಶ ಕೃಷ್ಣನ್ ತಂಡ ಹಾಗೂ 25 ರಂದು 8.50 ಕ್ಕೆ ಚಲನಚಿತ್ರ ನಟ ಶರಣ್ ಅನಂತರ 9.30ಕ್ಕೆ ಅರ್ಜುನ್ ಜನ್ಯ ತಂಡದಿಂದ ರಸ ಮಂಜರಿ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ. ಬಾಬಾಸಾಹೇಬ ಪಾಟೀಲ, ಶಾಸಕ, ಚನ್ನಮ್ಮನ ಕಿತ್ತೂರುಜಾನುವಾರು ಜಾತ್ರೆ, ಗ್ರಾಮೀಣ ಸೊಗಡು ಬಿಂಬಿಸುವ ಕುಸ್ತಿ ಪಂದ್ಯಾವಳಿ, ಜಲಸಾಹಸ ಕ್ರೀಡೆಗಳು ಪ್ರಮುಖ ಆಕರ್ಷಣೆ. ಚುಕ್ಕಿ ನಂಜುಂಡಸ್ವಾಮಿ ಉತ್ಸವಕ್ಕೆ ಚಾಲನೆ ನೀಡುವರು261023-21-300366802