ಹುಬ್ಬಳ್ಳಿ | ನಕಲಿ ಮತದಾನ ಆರೋಪ; ಕಾಂಗ್ರೆಸ್ ಪ್ರತಿಭಟನೆ
ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಫಾತಿಮಾ ಹೈಸ್ಕೂಲ್ನ ಮತಗಟ್ಟೆ ಸಂಖ್ಯೆ 36ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವೇಳೆ 'ನಕಲಿ ಮತದಾನ' ಆಗಿದೆ ಎಂದು ಆರೋಪಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ದಿಢೀರ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಬಿಜೆಪಿ ಹಾಗ

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಫಾತಿಮಾ ಹೈಸ್ಕೂಲ್ನ ಮತಗಟ್ಟೆ ಸಂಖ್ಯೆ 36ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವೇಳೆ 'ನಕಲಿ ಮತದಾನ' ಆಗಿದೆ ಎಂದು ಆರೋಪಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ದಿಢೀರ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. 'ವೋಟ್ ಚೋರ್, ಗದ್ದಿ ಚೋಡ್' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ವೇಳೆ ಮಾತನಾಡಿದ ಮತದಾರ ಸಯ್ಯದ್ ಬೆಳಗಾವಿ, 'ಮತಗಟ್ಟೆಯಲ್ಲಿ ನನ್ನ ಹೆಸರಲ್ಲಿ ಬೇರೆಯವರು ಮತ ಹಾಕಿದ್ದು ಗಮನಕ್ಕೆ ಬಂದಿತ್ತು. ಪಾಲಿಕೆ ಸದಸ್ಯರ ಗಮನಕ್ಕೆ ತಂದಾಗ, ಸ್ವಲ್ಪ ಸಮಯ ಕಾಯಲು ತಿಳಿಸಿದರು. ಆಗ ಸಮಯ ಮಧ್ಯಾಹ್ನ 2.30. ಯಾವ ದಾಖಲೆಯೂ ಇಲ್ಲದೆ, ನನ್ನ ಹೆಸರಲ್ಲಿ ಹೇಗೆ ಮತ ಹಾಕಿದ್ದಾರೆ? ನಕಲಿ ಮತದಾನವಾಗಿದೆ' ಎಂದು ಆರೋಪಿಸಿದರು.'ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮತದಾನ ಮಾಡಿದ ಮತಗಟ್ಟೆಯಲ್ಲಿಯೇ ನಕಲಿ ಮತದಾನವಾಗಿದೆ. ಪದವೀಧರ ಯುವಕನ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ' ಎಂದು ಮುಖಂಡ ರಜತ್ ಉಳ್ಳಾಗಡ್ಡಿಮಠ ಆಕ್ಷೇಪ ವ್ಯಕ್ತಪಡಿಸಿದರು.'ಜೋಶಿ ಅವರು ಮತ ಹಾಕಲು ಬಂದಾಗ ಗದ್ದಲವಾಗಿತ್ತು. ಆ ವೇಳೆ ಯಾರೋ ಮತ ಚಲಾಯಿಸಿದ್ದು, ಚಾಲೆಂಜಿಂಗ್ ಮತ ಹಾಕುವಂತೆ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಕಮಿಷನರ್ ರುದ್ರೇಶ ಘಾಳಿ ಹೇಳಿದ್ದಾರೆ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಚುನಾವಣೆ ಬಳಿಕ ಮತಗಟ್ಟೆ ಎದುರು ಪ್ರತಿಭಟನೆ ನಡೆಸಲಾಗುವುದು' ಎಂದರು.ಪ್ರಕಾಶ ಕುರಹಟ್ಟಿ, ಸುವರ್ಣಾ ಕಲಕುಂಟ್ಲ, ಅಬ್ದುಲ್ ಘಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.