ಮಂಗಳೂರು | ಹೊಯ್ಗೆಬಜಾರ್ ಬಳಿ 3 ಸ್ಟಾರ್ ಹೋಟೆಲ್
ಮಂಗಳೂರು: ನಗರದ ಹೊಯ್ಗೆ ಬಜಾರ್ನಲ್ಲಿರುವ ಲೈಟ್ಹೌಸ್ (ದೀಪಸ್ತಂಭ) ಪ್ರದೇಶವನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವಾಗಿ ರೂಪಿಸಲು 3 ಸ್ಟಾರ್ ಹೋಟೆಲ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ರೂಪರೇಷೆಯನ್ನು ಸಿದ್ಧಪಡಿಸಿದೆ. ಈ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ

ಮಂಗಳೂರು: ನಗರದ ಹೊಯ್ಗೆ ಬಜಾರ್ನಲ್ಲಿರುವ ಲೈಟ್ಹೌಸ್ (ದೀಪಸ್ತಂಭ) ಪ್ರದೇಶವನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವಾಗಿ ರೂಪಿಸಲು 3 ಸ್ಟಾರ್ ಹೋಟೆಲ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ರೂಪರೇಷೆಯನ್ನು ಸಿದ್ಧಪಡಿಸಿದೆ. ಈ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ.ಕರಾವಳಿಯ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಕರ್ನಾಟಕವನ್ನು ಪ್ರಮುಖ ಕರಾವಳಿ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು 2024ರ ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿಯು ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ ಖಾಲಿ ಬಿದ್ದಿರುವ ಹೊಯ್ಗೆ ಬಜಾರ್ನ ಲೈಟ್ಹೌಸ್ ಪ್ರದೇಶವನ್ನು ಈ ನೀತಿ ಯನ್ವಯ ಪ್ರವಾಸೋದ್ಯಮದ ಆಕರ್ಷಕ ಕೇಂದ್ರವನ್ನಾಗಿ ರೂಪಿಸುವ ಇರಾದೆ ಕರ್ನಾಟಕ ಜಲ ಸಾರಿಗೆ ಮಂಡಳಿಯದು.‘ಹೊಯ್ಗೆ ಬಜಾರ್ ದೀಪಸ್ತಂಭ ಪ್ರದೇಶವನ್ನು ಮೊದಲು ಮ್ಯೂಸಿಯಂ ಮಾಡುವ ಉದ್ದೇಶ ಹೊಂದಿದ್ದೆವು. ಈ ಯೋಜನೆ ಫಲಪ್ರದವಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಅಲ್ಲಿನ ದೀಪಸ್ತಂಭವನ್ನು ಅಭಿವೃದ್ಧಿಯ ಕೇಂದ್ರ ಬಿಂದುವನ್ನಾಗಿ ಉಳಿಸಿಕೊಂಡು, ಅದರ ಐತಿಹಾಸಿಕ ಮೌಲ್ಯವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅದನ್ನು ಪ್ರವಾಸಿ ಆಕರ್ಷಣೆಯಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಆತಿಥ್ಯ ಮತ್ತು ಸಂಬಂಧಿತ ಪ್ರವಾಸಿ ಮೂಲಸೌಕರ್ಯಗಳನ್ನು ಡಿಬಿಎಫ್ಒಟಿ ಆಧಾರದ ಮೇಲೆ ಕೈಗೊಳ್ಳುವುದರಿಂದ ಕರಾವಳಿ ಪ್ರವಾಸೋದ್ಯಮ ವ್ಯವಸ್ಥೆಯು ಬಲಗೊಳ್ಳಲಿದೆ’ ಎಂದು ಕರ್ನಾಟಕ ಜಲ ಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಹೊಯ್ಗೆ ಬಜಾರ್ನಲ್ಲಿ 1.5 ಎಕರೆ ಪ್ರದೇಶದಲ್ಲಿ ಗುತ್ತಿಗೆದಾರರು ಕನಿಷ್ಠ 35 ಕೊಠಡಿಗಳ ಸೌಕರ್ಯ ಹೊಂದಿರುವ ಆತಿಥ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದ್ದಾರೆ. ಯೋಜನೆಯ ಅಂದಾಜು ವೆಚ್ಚ ₹ 60.34 ಕೋಟಿ. ಯೋಜನೆಯಿಂದ ಶೇ 18.32ರಷ್ಟು ಆಂತರಿಕ ಪ್ರತಿಫಲ ದರವನ್ನು (ಐಆರ್ಆರ್) ನಿರೀಕ್ಷಿಸಲಾಗಿದೆ. ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವ ಹಣೆ ಮತ್ತು ಹಸ್ತಾಂತರ (ಡಿಬಿಎಫ್ಒಟಿ) ಆಧಾರದಲ್ಲಿ ಅವರು ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.‘ಮಂಡಳಿ ಅಧೀನದ ಜಮೀನನ್ನು ಈಗಿರುವ ಸ್ಥಿತಿಯಲ್ಲೇ ಗುತ್ತಿಗೆದಾರರಿಗೆ ಹಸ್ತಾಂತರ ಮಾಡಲಿದ್ದೇವೆ. ಯೋಜನೆಗೆ ಅಗತ್ಯ ಅನುಮತಿಗಳನ್ನು ಪಡೆಯಲು ಮತ್ತು ಪೂರ್ವಭಾವಿ ಷರತ್ತುಗಳನ್ನು ಪೂರೈಸಲು 30 ತಿಂಗಳ ಕಾಲಾವಕಾಶ ನೀಡಲಿದ್ದೇವೆ. ಮೂಲಸೌಕರ್ಯ ನಿರ್ಮಾಣಕ್ಕೆ 24 ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ. ಅದು ಸೇರಿ ಗುತ್ತಿಗೆದಾರರು ಒಟ್ಟು 30 ವರ್ಷ ಈ ಆತಿಥ್ಯ ಸೌಕರ್ಯದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆ ನಿಭಾಯಿಸಲಿದ್ದಾರೆ. ಅವರ ಸೇವೆಯ ಗುಣಮಟ್ಟವನ್ನು ಆಧರಿಸಿ ಮತ್ತೊಂದು ಅವಧಿಗೆ ಗುತ್ತಿಗೆಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ’ ಎಂದು ಅವರು ತಿಳಿಸಿದರು.ಈ ಯೋಜನೆಯನ್ನು 3-ಸ್ಟಾರ್ ಅಥವಾ 3 ಸ್ಟಾರ್ಗೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ಹೋಟೆಲ್ ಅನ್ನು ಇಲ್ಲಿ ಅಭಿವೃದ್ಧಿ ಪಡಿಸಬೇಕು. ಈ ಯೋಜನೆಗೆ ಆಯ್ಕೆಯಾದ ಗುತ್ತಿಗೆದಾರರು ಒಟ್ಟು ಆದಾಯದಲ್ಲಿ ನಿರ್ದಿಷ್ಟ ಪಾಲನ್ನು (ಮೀಸಲು ಆದಾಯದ ಕನಿಷ್ಠ ಪಾಲನ್ನು ಶೇ 2ಕ್ಕೆ ನಿಗದಿಪಡಿಸಲಾಗಿದೆ) ಸರ್ಕಾರಕ್ಕೆ ನೀಡಬೇಕು. ಯೋಜನೆಯ ಒಟ್ಟು ವೆಚ್ಚದ ಶೇ 5ರಷ್ಟನ್ನು ಕಾರ್ಯಕ್ಷಮತೆ ಭದ್ರತೆಯನ್ನಾಗಿ ಪಾವತಿಸಬೇಕು. ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ, ಪರಿಸರ, ಅರಣ್ಯ ಮತ್ತು ಹವಾಮಾನ ಬದ ಲಾವಣೆ ಸಚಿವಾಲಯದಿಂದ ಕರಾವಳಿ ನಿಯಂತ್ರಣ ವಲಯ (ಸಿಆರ್ಜೆಡ್) ಅನುಮೋದನೆ, ಮಂಗಳೂರು ಮಹಾನಗರ ಪಾಲಿಕೆ ಅಥವಾ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ವಿಭಾಗದಿಂದ ಕಟ್ಟಡ ನಕ್ಷೆ ಯೋಜನ ಅನುಮೋದನೆ, ಮತ್ತು ಸಕ್ಷಮ ಪ್ರಾಧಿಕಾರಗಳಿಂದ ಅಗ್ನಿಶಾಮಕ ಸುರಕ್ಷತಾ ಸ್ಪಷ್ಟಿಕರಣ ಸೇರಿದಂತೆ ಈ ಯೋಜನೆಗೆ ಅಗತ್ಯವಿರುವ ಎಲ್ಲಾ ಶಾಸನಬದ್ಧ ಅನುಮೋದನೆಗಳು ಗುತ್ತಿಗೆದಾರರೇ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.3-ಸ್ಟಾರ್, ಅದಕ್ಕಿಂತ ಹೆಚ್ಚಿನ ದರ್ಜೆಯ ಆತಿಥ್ಯ ಮೂಲಸೌಕರ್ಯ ನಿರ್ಮಾಣಪಿಪಿಪಿ ಮಾದರಿಯಲ್ಲಿ ಡಿಬಿಎಫ್ಒಟಿ ಆಧಾರದಲ್ಲಿ ಅನುಷ್ಠಾನ30 ವರ್ಷ ಗುತ್ತಿಗೆ ಸಂಸ್ಥೆಯಿಂದಲೇ ನಿರ್ವಹಣೆ ‘ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದೆ ದೀಪಸ್ತಂಭ’‘ಕರಾವಳಿಯ ಅನೇಕ ಪ್ರವಾಸಿ ತಾಣಗಳಲ್ಲಿ ದೀಪಸ್ತಂಭವೇ ಪ್ರಮುಖ ಆಕರ್ಷಣೆ. ಅಲ್ಲಿ ಮ್ಯೂಸಿಯಂ ಅಥವಾ ಇತರ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ನಮ್ಮಲ್ಲಿ ದೀಪಸ್ತಂಭವನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಕಾರ್ಯ ಅಷ್ಟಾಗಿ ನಡೆದಿಲ್ಲ. ಹೊಯ್ಗೆ ಬಜಾರ್ ದೀಪಸ್ತಂಭವನ್ನು ಪ್ರವಾಸಿಗರನ್ನು ಸೆಳೆಯುವ ಕೇಂದ್ರ ಬಿಂದುವನ್ನಾಗಿ ಇಟ್ಟುಕೊಂಡು, ಆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಜಿಲ್ಲೆಯ 38 ಕಿ.ಮೀ ಉದ್ದದ ಕರಾವಳಿಯ ತೀರವನ್ನು ಪ್ರವಾಸೋದ್ಯಮ ಚಟುವಟಿಕೆಗೆ ಬಳಸಿಕೊಳ್ಳಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳ ಅನುಷ್ಠಾನದ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಲಸಾರಿಗೆ ಮಂಡಳಿ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆಬೇರೆ ಬೇರೆ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದರು.