ನಿನ್ನೂರಿನ ದಾರಿಯಲ್ಲಿ ಬೀಸುವ ಗಾಳಿ ನಿನ್ನ ಆಲಿಂಗನವ ನೆನಪಿಸುತ್ತಿದೆ..!
ಹಾಯ್ ನಗ್ಮಾ ನಿನ್ನೂರಿಗೆ ಬರುವ ದಾರಿ ಅದೆಷ್ಟು ಸುಂದರ ಗೊತ್ತಾ? ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ನಳನಳಿಸುವ ಮರಗಳು, ತಂಗಾಳಿಗೆ ತಲೆದೂಗುವ ಗಿಡಗಳು, ಹಕ್ಕಿಗಳ ಕಲರವ, ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳು.. ಅಲ್ಲೆಲ್ಲೋ ನೀ ನಿಂತು ಹಾಡು ಹೇಳುವಂತೆ ಕಾಡುವ ಭಾವ.. ಅದೆಷ್ಟು ಮಧುರ. ನಮ್ಮ ಮೊದಲ ಭೇಟಿಯಾಗಿದ್ದು ಇದೇ ದಾರಿಯಲ್ಲಿ. ಆಕಸ್ಮಿಕವಾಗಿ ಆದ ಭೇಟಿ, ಮುಗುಳ್ನಗೆಯ

ಹಾಯ್ ನಗ್ಮಾ ನಿನ್ನೂರಿಗೆ ಬರುವ ದಾರಿ ಅದೆಷ್ಟು ಸುಂದರ ಗೊತ್ತಾ? ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ನಳನಳಿಸುವ ಮರಗಳು, ತಂಗಾಳಿಗೆ ತಲೆದೂಗುವ ಗಿಡಗಳು, ಹಕ್ಕಿಗಳ ಕಲರವ, ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳು.. ಅಲ್ಲೆಲ್ಲೋ ನೀ ನಿಂತು ಹಾಡು ಹೇಳುವಂತೆ ಕಾಡುವ ಭಾವ.. ಅದೆಷ್ಟು ಮಧುರ. ನಮ್ಮ ಮೊದಲ ಭೇಟಿಯಾಗಿದ್ದು ಇದೇ ದಾರಿಯಲ್ಲಿ. ಆಕಸ್ಮಿಕವಾಗಿ ಆದ ಭೇಟಿ, ಮುಗುಳ್ನಗೆಯಾಗಿ.. ಮನಸ್ಸು ಮನಸ್ಸುಗಳು ಕನಸುಗಳನ್ನ ಬದಲಿಸಿಕೊಂಡು, ಗಿಡವನ್ನು ಬಳ್ಳಿಯೊಂದು ಅಪ್ಪಿದಂತೆ ಒಂದಾಗಿದ್ದು ಇದೇ ದಾರಿಯಲ್ಲಿ..! ಇದನ್ನೂ ಓದಿ: ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..! ಈಗಲೂ ನಿನ್ನೂರಿಗೆ ಬರುವಾಗ ನಮ್ಮ ಮೊದಲ ಭೇಟಿಯ ನೆನಪು ಮತ್ತೆ ಮತ್ತೆ ಮರುಕಳಿಸುತ್ತದೆ. ಬಸ್ಸಿನ ಕಿಟಕಿಯಿಂದ ಹೊರಗೆ ನೋಡುವಾಗ ಮನಸ್ಸಿನ ಪರದೆಯ ಮೇಲೆ ನಿನ್ನ ಕಿರುನಗೆ, ನಿನ್ನ ಕೈ ಬಳೆ ಸದ್ದು, ಗೆಜ್ಜೆಯ ದನಿ ಎಲ್ಲಾ ಕಾಡುತ್ತದೆ. ದಾರಿಯ ಹಚ್ಚ ಹಸುರಿನ ಗಿಡ ಮರಗಳನ್ನು ನೋಡುವಾಗ ಬಳ್ಳಿ ಮರವನ್ನು ಅಪ್ಪಿದ್ದು ಕಂಡು ನಿನ್ನ ಮೊದಲ ಅಪ್ಪುಗೆ ನೆನಪಾಗುತ್ತದೆ. ನಿನ್ನ ಮೊದಲ ಅಪ್ಪುಗೆ ಅದೆಷ್ಟು ಗಟ್ಟಿಯಿತ್ತು ಗೊತ್ತಾ? ಕಾಡು ಮಲ್ಲಿಗೆ ಬಳ್ಳಿಯೊಂದು ಗಂಧದ ಮರವನ್ನು ಬಿಗಿದಪ್ಪಿದಂತಿತ್ತು! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ! ನಿನ್ನೂರಿನ ಹತ್ತಿರ ಬರುತ್ತಿದ್ದಂತೆ ಹೃದಯದ ಬಡಿತ ಹೆಚ್ಚಾಗುತ್ತದೆ. ಇನ್ನೇನೂ ನಿನ್ನನ್ನು ನೋಡುತ್ತೇನೆ, ನಿನ್ನ ಜೊತೆ ಮಾತನಾಡುತ್ತೇನೆ ಎಂಬ ಕಾತರ ನನ್ನ ಪ್ರಯಾಣಕ್ಕೆ ಹೊಸ ಚೈತನ್ಯ ನೀಡುತ್ತದೆ. ಮುಂದೊಂದು ದಿನ ನಾವು ಜೊತೆಯಾಗಿ ಇದೇ ದಾರಿಯಲ್ಲಿ ಪ್ರಯಾಣಿಸಬೇಕು. ಆಗಲೂ ಈ ದಾರಿ ಹಚ್ಚ ಹಸಿರಾಗಿ ಹೀಗೆ ಇರಬೇಕು. ನಮ್ಮ ಪ್ರೀತಿ ಇದೇ ದಾರಿಯ ನೆರಳಲ್ಲಿ ಬಾಡದಂತೆ ನಲಿದಾಡಬೇಕು! ಪ್ರತಿ ಪ್ರಯಣಕ್ಕೂ ನಿನ್ನನ್ನು ಬಿಗಿದಪ್ಪಿದ ಆ ಪ್ರೇಮ ಭೂಮಿಯ ಬಳಿ ಒಂದು ಭೇಟಿ ನೀಡಬೇಕು. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ! ನಿನ್ನೂರಿಗೆ ಬರುವ ಪ್ರತಿ ಪ್ರಯಾಣವೂ ನಮ್ಮ ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುತ್ತಿದೆ. ನನಗೆ ನಿನ್ನೂರಿನ ಮೇಲೆ ಇಷ್ಟೊಂದು ಪ್ರೀತಿ ಮೂಡಲು ನಿನ್ನ ಒಲವು, ಸೌಂದರ್ಯದಂತೆ ಕಂಗೊಳಿಸುವ ಈ ಪ್ರಕೃತಿಯೇ ಕಾರಣ! ಇದೆಲ್ಲ ಮನಸ್ಸಲ್ಲಿ ಸುಳಿಯುವಾಗ ಕವಿ ರವಿಂದ್ರ ಜೈನ್ ಅವರ `Gori Tera Gaon Bada Pyara, Main To Gaya Maara Aake Yahan Re’ ಹಾಡು ತುಂಬಾ ಕಾಡುತ್ತೆ. ಆ ಹಾಡಲ್ಲಿ ಪ್ರೇಯಸಿಯ ಊರಿನ ಸೌಂದರ್ಯದ ಜೊತೆ ಒಲವಿನಲ್ಲಿ ಕರಗಿ ಹೋಗುವ ರೀತಿಯನ್ನ ಕವಿ ಅದೆಷ್ಟು ಸೊಗಸಾಗಿ ವರ್ಣಿಸಿದ್ದಾರೆ ಗೊತ್ತಾ? ಈಗ ನನ್ನ ಸ್ಥಿತಿಯೂ ಅದೇ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..? ಇಂತಿ ಒಲವಿನೂರಿನ ಚೆಲುವಲ್ಲಿ ಕಳೆದುಹೋಗಿರುವ ಪ್ರೇಮ ಪಯಣಿಗ