ಕಲಬುರಗಿ | ಒಪಿಡಿ ಪ್ರಿಂಟರ್ ನಿಧಾನಗತಿ: ರೋಗಿಗಳಿಗೆ ಕಿರಿಕಿರಿ
ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಇಎಸ್ಐ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ಗಳ ಬಳಕೆಯಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಒಪಿಡಿ ಚೀಟಿ ಪಡೆಯಲು ರೋಗಿಗಳು ಅಥವಾ ಅವರ ಸಂಬಂಧಿಕರು ತಾಸುಗಟ್ಟಲೇ ಪಾಳಿಯಲ್ಲಿ ನಿಲ್ಲಬೇಕಾಗಿದೆ.ಪ್ರತಿ ತಿಂಗಳು ಇಎಸ್ಐ ಆಸ್ಪತ್ರೆಯಲ್ಲಿ ಅಂದಾಜು 35 ಸಾವಿರಕ್ಕಿಂತ ಹೆಚ್ಚಿನ ರೋಗಿಗಳ

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಇಎಸ್ಐ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ಗಳ ಬಳಕೆಯಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಒಪಿಡಿ ಚೀಟಿ ಪಡೆಯಲು ರೋಗಿಗಳು ಅಥವಾ ಅವರ ಸಂಬಂಧಿಕರು ತಾಸುಗಟ್ಟಲೇ ಪಾಳಿಯಲ್ಲಿ ನಿಲ್ಲಬೇಕಾಗಿದೆ.ಪ್ರತಿ ತಿಂಗಳು ಇಎಸ್ಐ ಆಸ್ಪತ್ರೆಯಲ್ಲಿ ಅಂದಾಜು 35 ಸಾವಿರಕ್ಕಿಂತ ಹೆಚ್ಚಿನ ರೋಗಿಗಳು ಒಪಿಡಿ ಹಾಗೂ ಒಳರೋಗಿಯಾಗಿ ವೈದ್ಯಕೀಯ ಸೇವೆ ಪಡೆಯುತ್ತಾರೆ. ಇಎಸ್ಐ ದಂತ ವಿಭಾಗಕ್ಕೂ ಇತ್ತೀಚೆಗೆ ಹೆಚ್ಚಿನ ರೋಗಿಗಳು ಭೇಟಿ ನೀಡುತ್ತಿದ್ದಾರೆ.ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ಗಳ ನಿಧಾನಗತಿಯ ಕೆಲಸದಿಂದ ಇಎಸ್ಐ ಕಾರ್ಡ್ ಹೊಂದಿದ ಮತ್ತು ಕಾರ್ಡ್ ಇಲ್ಲದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಒಪಿಡಿ ಚೀಟಿ ಸಿಗುತ್ತಿಲ್ಲ. ಇಎಸ್ಐ ದಂತ ವಿಭಾಗದಲ್ಲಿಯೂ ಇದೇ ಸಮಸ್ಯೆ ಇದೆ. ಒಪಿಡಿ ಕೌಂಟರ್ನಲ್ಲಿ ರೋಗಿಯ ವಿವರ ಪಡೆದು ಪ್ರಿಂಟ್ ಕೊಟ್ಟರೆ ಅದು ಪ್ರಿಂಟ್ ಆಗಲು 40 ಸೆಕೆಂಡ್ಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಆಧುನಿಕ ಪ್ರಿಂಟರ್ಗಳಿದ್ದರೆ ಕೇವಲ 2–3 ಸೆಕೆಂಡ್ಗಳಲ್ಲಿ ಪ್ರಿಂಟ್ ಪಡೆಯಬಹುದು.ಅಲ್ಲದೇ, ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಮೂಲಕ ನೀಡಿದ ಒಪಿಡಿ ಚೀಟಿಯಲ್ಲಿ ರೋಗಿಗಳ ನೋಂದಣಿ ಸಂಖ್ಯೆ, ಹೆಸರು ಮತ್ತು ವಯಸ್ಸು ಇನ್ನಿತರ ವಿವರಗಳು ಸರಿಯಾಗಿ ಕಾಣಿಸುವುದಿಲ್ಲ ಎಂಬುದು ರೋಗಿಗಳ ಅಳಲು. ಹರಸಾಹಸ ಮಾಡಿ ಒಪಿಡಿ ಚೀಟಿಯನ್ನು ಪಡೆದ ಮೇಲೆ ವೈದ್ಯರ ಬಳಿ ಹೋದರೆ, ಅಲ್ಲಿ ಹೆಸರು ನಮೂದು ಮಾಡಿಕೊಳ್ಳುವ ಅಟೆಂಡರ್ ಅಥವಾ ಶುಶ್ರೂಷಕರು ನಿಮ್ಮ ಹೆಸರು ಸಹಿತ ಬೇರೆ ವಿವರಗಳು ಕಾಣಿಸುತ್ತಿಲ್ಲ ಎನ್ನುತ್ತಾರೆ. ಅಲ್ಲಿ ಮತ್ತೊಮ್ಮೆ ಹೆಸರು, ವಯಸ್ಸು ಹೇಳಬೇಕಾಗುತ್ತಿದೆ.ವೈದ್ಯರು ಪರೀಕ್ಷಿಸಿದ ನಂತರ ಅವರು ಬರೆದ ಔಷಧಗಳನ್ನು ಆನ್ಲೈನ್ನಲ್ಲಿ ನಮೂದು ಮಾಡಬೇಕು. ಅವರು ಕೂಡ ಒಪಿಡಿ ಚೀಟಿಯಲ್ಲಿರುವ ಸಣ್ಣ ಮತ್ತು ಅಸ್ಪಷ್ಟ ಅಕ್ಷರಗಳಿಂದಾಗಿ ಸಮಸ್ಯೆ ಎದುರಿಸುತ್ತಾರೆ. ಬಳಿಕ ಔಷಾಧಾಲಯಕ್ಕೆ ಹೋದರೆ, ಅಲ್ಲಿರುವ ಫಾರ್ಮಾಸಿಸ್ಟ್, ಕಾರ್ಬನ್ ಕಾಪಿಯಲ್ಲಿ ವೈದ್ಯರು ಬರೆದ ಔಷಧಗಳು ಕಾಣಿಸುತ್ತಿಲ್ಲ ಎಂದು ಪೆನ್ನಿನಿಂದ ಬರೆದ ಒರಿಜಿನಲ್ ಕಾಪಿ ತೆಗೆದುಕೊಳ್ಳುತ್ತಾರೆ.ಯಾವ ಸಮಯಕ್ಕೆ ಯಾವ ಮಾತ್ರೆ, ಟಾನಿಕ್ ಅಥವಾ ಇನ್ನಿತರ ಔಷಧಗಳನ್ನು ತೆಗೆದುಕೊಳ್ಳಬೇಕು ಎಂದು ಕೇಳಲು ರೋಗಿಗಳು ಮರಳಿ ಶುಶ್ರೂಷಕರ ಬಳಿ ತೆರಳಿದರೆ ಇನ್ನೊಂದು ಕಾಪಿಯಲ್ಲಿ ಸರಿಯಾಗಿ ಅಕ್ಷರಗಳು ಮೂಡದ ಕಾರಣ ಅವರೂ ಸಮಯ ತಿಳಿಸಲು ಹರಸಾಹಸ ಮಾಡಬೇಕಾಗುತ್ತದೆ. ಅವರು ಮತ್ತೊಮ್ಮೆ ವೈದ್ಯರಿಂದ ತಿಳಿದುಕೊಳ್ಳಬೇಕಾಗುತ್ತಿದೆ.ಮರು ಭೇಟಿಗೂ ತೊಂದರೆ: ಕಾರ್ಬನ್ ಕಾಪಿ ಹಿಡಿದು ಮನೆಗೆ ತೆರಳುವ ರೋಗಿಗಳು, ವೈದ್ಯರ ಸಲಹೆಯಂತೆ ಮರುಭೇಟಿ ವೇಳೆಯೂ ತೊಂದರೆ ಅನುಭವಿಸುವಂತಾಗಿದೆ. ವೈದ್ಯರು ಹಿಂದೆ ತಾವು ಏನು ಸಲಹೆ ನೀಡಿದ್ದೇವೆ ಮತ್ತು ಯಾವ ಔಷಧ ನೀಡಲಾಗಿತ್ತು ಎಂದು ತಿಳಿದುಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ ಎನ್ನುತ್ತಾರೆ ರೋಗಿಗಳು.‘ನಿಧಾನಗತಿಯ ಪ್ರಿಂಟರ್ಗಳಿಂದಾಗಿ ಒಪಿಡಿ ಚೀಟಿ ಪಡೆಯಲು ತಾಸುಗಟ್ಟಲೇ ಪಾಳಿಯಲ್ಲಿ ನಿಲ್ಲಬೇಕಾಗುತ್ತಿದೆ. ಹೆಸರು ಸಹಿತ ಬೇರೆ ವಿವರಗಳು ಚೀಟಿಯಲ್ಲಿ ಅಕ್ಷರಗಳು ಕಾಣುವುದಿಲ್ಲ. ಆಧುನಿಕ ಪ್ರಿಂಟರ್ಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸುತ್ತಾರೆ ಅನಿಲ ಮತ್ತು ಜಗನ್ನಾಥ.ಇಎಸ್ಐ ಆಸ್ಪತ್ರೆಯಲ್ಲಿ ಬಳಸುತ್ತಿರುವ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ಮನೋಹರ ಕೊಲ್ಲೂರು ರೋಗಿಯ ಸಂಬಂಧಿಕಒಪಿಡಿ ಚೀಟಿಯ ಕಾರ್ಬನ್ ಕಾಪಿಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಅಕ್ಷರಗಳು ಅಸ್ಪಷ್ಟವಾಗಿರುತ್ತವೆ. ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ತಕ್ಷಣ ಕ್ರಮ’ ಆಸ್ಪತ್ರೆಯಲ್ಲಿ ಬಳಸುತ್ತಿರುವ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ಗಳಿಂದ ರೋಗಿಗಳಿಂದ ತೊಂದರೆ ಆಗುತ್ತಿದ್ದಲ್ಲಿ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಇದ್ದಲ್ಲಿ ಬದಲಾವಣೆ ಮಾಡಲಾಗುವುದು. ಇಂದೇ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಇಎಸ್ಐ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ಧನಾಜಿ ಎಸ್.ಜಾಧವ್ ಪ್ರತಿಕ್ರಿಯಿಸಿದರು.