ಮೈಲಾರೇಶ್ವರ ದೇವಸ್ಥಾನ: ಗಮನ ಸೆಳೆದ ದೇವರ ರಾಜಬೀದಿ ಉತ್ಸವ
ಶಿವಮೊಗ್ಗ: ಇಲ್ಲಿನ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ವೈಭವದಿಂದ ನಡೆದಿದ್ದು, ಗುರುವಾರ ನಡೆದ ರಾಜಾಬೀದಿ ಉತ್ಸವದ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿತು.ಮಹಾನವಮಿ ಅಂಗವಾಗಿ ಆಯುಧ ಗಜಾಶ್ವಪೂಜಾ ನಡೆಯಿತು. ಮಂಗಳವಾರ ಸಂಜೆ ವಿಜಯದಶಮಿ ಅಂಗವಾಗಿ ಮೈಲಾರೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯಲಾಯಿತು. ರಾಜಾಬೀದಿ ಉತ್ಸವದ ದ

ಶಿವಮೊಗ್ಗ: ಇಲ್ಲಿನ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ವೈಭವದಿಂದ ನಡೆದಿದ್ದು, ಗುರುವಾರ ನಡೆದ ರಾಜಾಬೀದಿ ಉತ್ಸವದ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿತು.ಮಹಾನವಮಿ ಅಂಗವಾಗಿ ಆಯುಧ ಗಜಾಶ್ವಪೂಜಾ ನಡೆಯಿತು. ಮಂಗಳವಾರ ಸಂಜೆ ವಿಜಯದಶಮಿ ಅಂಗವಾಗಿ ಮೈಲಾರೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯಲಾಯಿತು. ರಾಜಾಬೀದಿ ಉತ್ಸವದ ದಿನ ಬೆಳಿಗ್ಗೆ 5 ಗಂಟೆಯಿಂದ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಮೈಲಾರೇಶ್ವರ ದೇವರ ರಾಜಬೀದಿ ಉತ್ಸವ ಆರಂಭಗೊಂಡಿದ್ದು, ದೇವಸ್ಥಾನದಿಂದ ಹೊರಟು ಬಿ.ಎಚ್.ರಸ್ತೆ, ಕೋಟೆ ಪೊಲೀಸ್ ಠಾಣೆ ರಸ್ತೆ, ಕೋಟೆ ರಸ್ತೆ ಮೂಲಕ ಕೋರ್ಪಲಯ್ಯನ ಛತ್ರದ ತುಂಗಾನದಿಯಲ್ಲಿ ಗಂಗಾಪೂಜೆ. ನಂತರ ಎಸ್.ಪಿ.ಎಂ.ರಸ್ತೆ, ಗಾಂಧಿಬಜಾರ್ ಮೂಲಕ ಶಿವಪ್ಪನಾಯಕ ಸರ್ಕಲ್, ಬಿ.ಎಚ್.ರಸ್ತೆ ಮುಖಾಂತರ ದೇವಸ್ಥಾನಕ್ಕೆ ತಲುಪಿತು. ನಂತರ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.ರಾಜಬೀದಿ ಉತ್ಸವದ ಹಾದಿಯಲ್ಲಿ ಭಕ್ತಾದಿಗಳು ಹಾಗೂ ಹರಕೆ ಹೊತ್ತವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಪಾನಕ ಹಾಗೂ ಸಿಹಿ ವಿತರಿಸಿದರು. ಮೆರವಣಿಗೆಯಲ್ಲಿ ದೇವರ ಮೂರ್ತಿಯೊಂದಿಗೆ ಗೊರವರ ವೇಷಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ಭಕ್ತರಿ ಸಮರ್ಪಿಸಿದರು.ರಾಜಬೀದಿ ಉತ್ಸವದ ನೇತೃತ್ವ ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ರಘು, ಹೇಮಂತ್ ಕುಮಾರ್, ಏಳು ಕೋಟಿ ಗೊರವರ ಅಧ್ಯಕ್ಷ ಗೊಲ್ಲ ರಾಜಣ್ಣ, ಎನ್. ಮಾಲತೇಶ್, ಹರೀಶ್, ಕೃಷ್ಣಮೂರ್ತಿ, ಮೈಲಾರಪ್ಪ, ಚಂದ್ರು, ನಿಂಗರಾಜ್, ಸಂಜು ವಹಿಸಿದ್ದರು.