ವಿಧಾನ ಪರಿಷತ್ನ ಶಿಕ್ಷಕರ ಮತಕ್ಷೇತ್ರದ ಮತದಾನ ವಿಳಂಬ: ಮತದಾರರ ಬೇಸರ
ಕಲಬುರಗಿ: ವಿಧಾನ ಪರಿಷತ್ನ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಲಬುರಗಿಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದ್ದು, ಮತದಾರರು ಕಾದು ಕಾದು ಸುಸ್ತು ಹೊಡೆಯುತ್ತಿದ್ದಾರೆ.ನೂರಾರು ಪುರುಷರು ಹಾಗೂ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದು, ಚುನಾವಣಾ ಆಯೋಗದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಮತಗಟ್ಟೆ ಸಂಖ್ಯೆ 60ರಲ್ಲಿ ಒಟ್ಟು

ಕಲಬುರಗಿ: ವಿಧಾನ ಪರಿಷತ್ನ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಲಬುರಗಿಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದ್ದು, ಮತದಾರರು ಕಾದು ಕಾದು ಸುಸ್ತು ಹೊಡೆಯುತ್ತಿದ್ದಾರೆ.ನೂರಾರು ಪುರುಷರು ಹಾಗೂ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದು, ಚುನಾವಣಾ ಆಯೋಗದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಮತಗಟ್ಟೆ ಸಂಖ್ಯೆ 60ರಲ್ಲಿ ಒಟ್ಟು 1,074 ಮತಗಳಿವೆ. ಮಧ್ಯಾಹ್ನ 2 ಗಂಟೆ ತನಕ 229 ಪುರುಷ ಹಾಗೂ 255 ಮಹಿಳಾ ಮತದಾರರು ಈತನಕ ತಮ್ಮ ಹಕ್ಕು ಚಲಾಯಿಸಿದ್ದಾರೆ.'ಇಬ್ಬರು ಮಹಿಳಾ ಹಾಗೂ ಒಬ್ಬ ಪುರುಷ ಮತದಾರರನ್ನು ಮತಕೇಂದ್ರ ಒಳಗೆ ಬಿಡಲಾಗುತ್ತಿದೆ.ನಾಲ್ಕು ತಾಸುಗಳಿಂದ ಕಾಯುತ್ತಿದ್ದೇವೆ. ಈತನಕ ನಮ್ಮ ಪಾಳಿ ಬಂದಿಲ್ಲ. ಮೂರು ತಾಸುಗಳಿಂದ ಕುಳಿತಲ್ಲೇ ಕುಳಿತಿದ್ದೇವೆ' ಎಂದು ಮತದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.'ಯಾವುದೇ ಮತದಾರರು ಅವಸರ ಮಾಡಬೇಡಿ. ಸಂಜೆ 4 ಗಂಟೆ ತನಕ ಸರದಿಯಲ್ಲಿ ನಿಂತವರಿಗೆ ಟೋಕನ್ ನೀಡಲಾಗುವುದು' ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.'ಮತದಾನ ಮಾಡಲು ಮೂರು ತಾಸು ಕಾಯುವಂತಾಯಿತು. ಸಾವಿರಕ್ಕೂ ಹೆಚ್ಚು ಮತದಾರರು ಇದ್ದರೂ ಒಂದೇ ಬೂತ್ ಮಾಡಿದ್ದಾರೆ. ಚುನಾವಣಾ ಆಯೋಗ ಇನ್ನೊಂದು ಬೂತ್ ಮಾಡಬೇಕಿತ್ತು. ಕುಡಿಯುವ ನೀರೂ ಇಟ್ಟಿರಲಿಲ್ಲ. ಇದರಿಂದ ಮತಹಾಕಲು ಹಿಂಸೆ ಅನುಭವಿಸುವಂತಾಯಿತು' ಎಂದು ನಾಗಜ್ಯೋತಿ ಹಿರೇಮಠ ಸೇರಿದಂತೆ ಹಲವು ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ