ಅಪಘಾತದಲ್ಲಿ ತುಳಜಾಪುರ ಪಾದಯಾತ್ರಿ ಸಾವು: ಐವರಿಗೆ ಗಂಭೀರ ಗಾಯ
ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಿಂದ ತುಳಜಾಪುರ ಭವಾನಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿದ್ದಾಗ ಕಂಟೇನರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ಗುರುಸಿದ್ದ ಕುಂಬಾರ (25 ) ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರಿಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದ ನಳದುರ್ಗ ಸಮೀಪ ಶುಕ್ರವಾರ ಅಪಘಾತ ಸಂಭವಿಸಿದೆ.ಮೃತರು ನಗರದ ಬಸವೇಶ್ವರ ದೇವಸ್ಥಾನದ ಹಿಂದುಗಡೆಯ ಓ

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಿಂದ ತುಳಜಾಪುರ ಭವಾನಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿದ್ದಾಗ ಕಂಟೇನರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ಗುರುಸಿದ್ದ ಕುಂಬಾರ (25 ) ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರಿಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದ ನಳದುರ್ಗ ಸಮೀಪ ಶುಕ್ರವಾರ ಅಪಘಾತ ಸಂಭವಿಸಿದೆ.ಮೃತರು ನಗರದ ಬಸವೇಶ್ವರ ದೇವಸ್ಥಾನದ ಹಿಂದುಗಡೆಯ ಓಣಿಯ ನಿವಾಸಿ. ತೇರು ಮೈದಾನದ ಧಾರವಾಡ ಆಸ್ಪತ್ರೆ ಪಕ್ಕದಲ್ಲಿ ಸ್ವಂತದ ಜಾಹ್ನವಿ ಬೈಕ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು. ಓಣಿಯ ಗೆಳೆಯರೊಂದಿಗೆ ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ತುಳಜಾಪುರಕ್ಕೆ ಪಾದಯಾತ್ರೆ ಮೂಲಕ ತೆರಳಿದ್ದರು. ಘಟನೆಯಲ್ಲಿ ಭದ್ರು ಕುಂಬಾರ, ಮಹಾದೇವ ಸ್ವಾಮಿ, ರೋಹನ, ವೀರೇಶ ಮತ್ತಿತರರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸೊಲ್ಲಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.ಅಪಘಾತದ ವಿಷಯ ತಿಳಿದು ಮೃತರ ಹಾಗೂ ಗಾಯಾಳುಗಳ ಮನೆಗಳ ಎದುರು ಜನ ಜಂಗುಳಿ ನೆರೆದಿತ್ತು.
Read the complete story at Prajavani