ಕಿತ್ತೂರು ಉತ್ಸವ ಕ್ರೀಡಾಕೂಟ: ವಾಲಿಬಾಲ್ನಲ್ಲಿ ಬ್ಯಾಹಟ್ಟಿಯ ತಂಡಗಳು ಚಾಂಪಿಯನ್
ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಶನಿವಾರ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ವಾಲಿಬಾಲ್ನಲ್ಲಿ ಬೆಳಗಾವಿಯ ಕ್ರೀಡಾಶಾಲೆ ಮತ್ತು ವಸತಿ ನಿಲಯ ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯ ತಂಡಗಳು ಕ್ರಮವಾಗಿ ಚಾಂಪಿಯನ್ ಆದವು.ಪುರುಷರ ವಿಭಾಗದ ಫೈನಲ್ನಲ್ಲಿ ಬೆಳಗಾವಿ ತಂಡವು 25–15, 25–20 ಸೆಟ್ಗಳಿಂದ ಚನ್ನಮ್ಮನ ಕಿತ್ತೂರು ತಾಲ

ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಶನಿವಾರ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ವಾಲಿಬಾಲ್ನಲ್ಲಿ ಬೆಳಗಾವಿಯ ಕ್ರೀಡಾಶಾಲೆ ಮತ್ತು ವಸತಿ ನಿಲಯ ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯ ತಂಡಗಳು ಕ್ರಮವಾಗಿ ಚಾಂಪಿಯನ್ ಆದವು.ಪುರುಷರ ವಿಭಾಗದ ಫೈನಲ್ನಲ್ಲಿ ಬೆಳಗಾವಿ ತಂಡವು 25–15, 25–20 ಸೆಟ್ಗಳಿಂದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮರಿಗೇರಿಯ ತಂಡವನ್ನು ಸೋಲಿಸಿತು. ಬೆಳಗಾವಿಯ ಸಿದ್ಧರಾಮೇಶ್ವರ ಕಾಲೇಜಿನ ತಂಡ ಮೂರನೇ ಸ್ಥಾನ ಪಡೆಯಿತುಮಹಿಳೆಯರ ವಿಭಾಗದ ಫೈನಲ್ನಲ್ಲಿ ಬ್ಯಾಹಟ್ಟಿ ತಂಡವು ಗದಗ ಜಿಲ್ಲೆಯ ಮುಂಡರಗಿ ತಂಡವನ್ನು 25–18, 25–23 ಸೆಟ್ಗಳಿಂದ ಮಣಿಸಿ, ಕಿತ್ತೂರು ಉತ್ಸವದಲ್ಲಿ ಸತತ ಎರಡನೇ ಬಾರಿ ಗೆದ್ದಿತು. ಖಾನಾಪುರ ತಾಲ್ಲೂಕಿನ ಬೈಲೂರಿನ ತಂಡ ತೃತೀಯ ಸ್ಥಾನ ಗಳಿಸಿತು.ಪುರುಷರ ವಿಭಾಗದ ಕಬಡ್ಡಿಯಲ್ಲಿ ಸವದತ್ತಿ ತಂಡವು 25–18 ಅಂಕಗಳಿಂದ ಗೋಕಾಕ ತಾಲ್ಲೂಕಿನ ಉದಗಟ್ಟಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ರಾಮದುರ್ಗ ತಾಲ್ಲೂಕಿನ ಅವರಾದಿ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.ಮಹಿಳೆಯರ ವಿಭಾಗದ ಕಬಡ್ಡಿಯಲ್ಲಿ ಖಾನಾಪುರ ತಾಲ್ಲೂಕಿನ ದೇಸೂರ ತಂಡವು 23–15 ಅಂಕಗಳಿಂದ ಬೈಲಹೊಂಗಲ ತಂಡ ಸೋಲಿಸಿತು. ಹುಬ್ಬಳ್ಳಿ ನಗರದ ಗೋಕುಲ ತಂಡ ಮೂರನೇ ಸ್ಥಾನ ಪಡೆಯಿತು.ಜನವೋ ಜನಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ, ಜನರನ್ನು ಸೆಳೆಯುವ ಮತ್ತೊಂದು ಚಟುವಟಿಕೆ ಎಂದರೆ ಕ್ರೀಡೆ. ಈ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ಸವದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಬೆಳಗಾವಿ, ಗದಗ, ಧಾರವಾಡ, ಕೊಪ್ಪಳ ಮತ್ತಿತರ ಜಿಲ್ಲೆಗಳ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.ಪುರುಷರು ಮತ್ತು ಮಹಿಳೆಯರ ವಿಭಾಗಗಳ ಕಬಡ್ಡಿಯಲ್ಲಿ ತಲಾ 16 ತಂಡ, ಪುರುಷರು ಮತ್ತು ಮಹಿಳೆಯರ ವಿಭಾಗಗಳ ವಾಲಿಬಾಲ್ನಲ್ಲಿ ತಲಾ 16 ತಂಡ ಭಾಗವಹಿಸಿದವು.ಸತತ ಮಳೆಯಿಂದಾಗಿ ಕಳೆದ ವರ್ಷದ ಉತ್ಸವದಲ್ಲಿ ಕ್ರೀಡಾಕೂಟ ರದ್ದಾಗಿತ್ತು. ಇದರಿಂದಾಗಿ ಕ್ರೀಡೆಗಳನ್ನು ನೋಡಲು ನಿರಾಸೆಯಿಂದ ವಾಪಸ್ ಹೋಗಿದ್ದರು. ಈ ಬಾರಿ ನಡೆದ ಕ್ರೀಡಾಕೂಟವನ್ನು ಅಪಾರ ಸಂಖ್ಯೆಯಲ್ಲಿ ಜನ ವೀಕ್ಷಿಸಿ ಸಂಭ್ರಮಿಸಿದರು. ಕೇಕೆ, ಸಿಳ್ಳೆಗಳ ಸುರಿಮಳೆಯನ್ನೇ ಹರಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.‘ಕ್ರೀಡಾಕೂಟದಲ್ಲಿ ಗೆಲುವಿಗಿಂತ ಸ್ಪರ್ಧೆ ಮುಖ್ಯ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಿ’ ಎಂದು ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ವಿಜೇತ ತಂಡಕ್ಕೆ ಗಣ್ಯರು ಬಹುಮಾನ ಕೊಟ್ಟರು.