ಶತಕದತ್ತ ಸೋನಾಮಸೂರಿ ಅಕ್ಕಿ ಬೆಲೆ
ಕೊಪ್ಪಳ: ತೀವ್ರ ಮಳೆ ಕೊರತೆ ಬೆನ್ನಲ್ಲೇ ಸೋನಾಮಸೂರಿ ಅಕ್ಕಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದ್ದು, 10 ದಿನಗಳಲ್ಲಿ ಒಂದು ಕ್ವಿಂಟಲ್ಗೆ ₹1,500ರಷ್ಟು ಬೆಲೆ ಹೆಚ್ಚಾಗಿದೆ. ಹತ್ತು ದಿನಗಳ ಹಿಂದೆ ಸೋನಾಮಸೂರಿ ಅಕ್ಕಿ ಬೆಲೆ ಕೊಪ್ಪಳದ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ಗೆ ₹7,500 ಇತ್ತು. ಶುಕ್ರವಾರ ₹9,000ಕ್ಕೆ ಏರಿಕೆಯಾಗಿದೆ. ಇನ್ನು ಕೆಲ ದಿನಗ

ಕೊಪ್ಪಳ: ತೀವ್ರ ಮಳೆ ಕೊರತೆ ಬೆನ್ನಲ್ಲೇ ಸೋನಾಮಸೂರಿ ಅಕ್ಕಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದ್ದು, 10 ದಿನಗಳಲ್ಲಿ ಒಂದು ಕ್ವಿಂಟಲ್ಗೆ ₹1,500ರಷ್ಟು ಬೆಲೆ ಹೆಚ್ಚಾಗಿದೆ. ಹತ್ತು ದಿನಗಳ ಹಿಂದೆ ಸೋನಾಮಸೂರಿ ಅಕ್ಕಿ ಬೆಲೆ ಕೊಪ್ಪಳದ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ಗೆ ₹7,500 ಇತ್ತು. ಶುಕ್ರವಾರ ₹9,000ಕ್ಕೆ ಏರಿಕೆಯಾಗಿದೆ. ಇನ್ನು ಕೆಲ ದಿನಗಳಲ್ಲಿ ₹10 ಸಾವಿರ ತಲುಪುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಹತ್ತು ದಿನಗಳ ಹಿಂದೆ ಒಂದು ಕ್ವಿಂಟಲ್ಗೆ ₹2,800 ಇದ್ದ ಭತ್ತದ ಬೆಲೆ ಈಗ ₹3,600ಕ್ಕೆ ಏರಿಕೆಯಾಗಿದೆ.ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಕ್ರೆಸ್ಟ್ಗೇಟ್ಗಳನ್ನು ಅಳವಡಿಸಿದ್ದರಿಂದ ಹಿಂದಿನ ವರ್ಷ ಹಿಂಗಾರು ಹಂಗಾಮಿಗೆ ರೈತರಿಗೆ ನೀರು ಕೊಟ್ಟಿರಲಿಲ್ಲ. ಈ ವರ್ಷದ ಮುಂಗಾರಿನಲ್ಲಿ ಭತ್ತ ಬೆಳೆಗಾರರಿಗೆ 120 ದಿನ ನೀರು ಅಗತ್ಯವಿದ್ದರೂ 100 ದಿನ ಮಾತ್ರ ನೀರು ಹರಿಸಲಾಗಿದೆ. ಫಸಲು ಕೈಗೆ ಬರುವ ಹೊತ್ತಿಗೆ ನೀರು ನಿಲುಗಡೆಯಾಗಲಿರುವ ಕಾರಣ ಭತ್ತ ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.ಇದರ ಜೊತೆಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ರೈತರಿಗೆ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ನೀರು ಹರಿಸುವುದಿಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ. ಕೃಷ್ಣಾ ನದಿಯಿಂದಲೂ ಎರಡನೇ ಬೆಳೆಗೆ ನೀರಿಲ್ಲ ಎಂದು ತಿಳಿಸಲಾಗಿದೆ.‘ಮಾರುಕಟ್ಟೆಯಲ್ಲಿ ಈಗಾಗಲೇ ಭತ್ತದ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚಳವಾಗಲಿದೆ’ ಎಂದು ಗಂಗಾವತಿ ತಾಲ್ಲೂಕಿನ ಹೊಸಕೇರಾ ಗ್ರಾಮದ ರೈತ ಪಾಮಣ್ಣ ನಾಯಕ ಹೇಳುತ್ತಾರೆ.ಕೃತಕ ಅಭಾವ?: ಭತ್ತದ ಫಸಲು ಕಡಿಮೆಯಾಗಿದ್ದು ಒಂದೆಡೆಯಾದರೆ ಇರುವ ಭತ್ತಕ್ಕೆ ಬೆಲೆ ಹೆಚ್ಚಿಸಿಕೊಳ್ಳಲು ತಮ್ಮಲ್ಲಿ ಸಂಗ್ರಹವಿರುವುದನ್ನು ಹಲವು ರೈತರು ಮಾರಾಟ ಮಾಡುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.ಭತ್ತ ಮಾರಾಟ ಮಾಡಿದರೂ ಅಕ್ಕಿ ಗಿರಣಿಗಳ ಮಾಲೀಕರು ಭತ್ತವನ್ನು ಅಕ್ಕಿಯಾಗಿಸುತ್ತಿಲ್ಲ. ಈ ಕೃತಕ ಅಭಾವ ಸೃಷ್ಟಿಸುವ ಲೆಕ್ಕಾಚಾರಗಳು ಕೂಡ ಅಕ್ಕಿ ಬೆಲೆ ಏರಿಕೆಗೆ ನಿರಂತರ ಕಾರಣವಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಕಿರಾಣಿ ಅಂಗಡಿಯ ಮಾಲೀಕರೊಬ್ಬರು ತಿಳಿಸಿದರು. ಸಾವಿತ್ರಿ ಪುರುಷೋತ್ತಮ ಅಕ್ಕಿ ಗಿರಣಿ ಮಾಲೀಕರ ಸಂಘ ರಾಜ್ಯಾಧ್ಯಕ್ಷಅಕ್ಕಿ ಬೆಲೆ ಕೆಲ ದಿನಗಳಲ್ಲಿ ಕ್ವಿಂಟಲ್ಗೆ ₹10 ಸಾವಿರ ತಲುಪುವ ಸಾಧ್ಯತೆಯಿದೆ. ಬಿಹಾರ ಹಾಗೂ ಉತ್ತರ ಪ್ರದೇಶದಿಂದ ಅಕ್ಕಿ ಬಂದರೆ ಮಾತ್ರ ಬೆಲೆ ಏರಿಕೆಗೆ ಕಡಿವಾಣ ಬೀಳಲಿದೆಸಂಜೀವ ಕೊಪ್ಪಳದ ಅಕ್ಕಿ ವ್ಯಾಪಾರಿನಮ್ಮ ಭಾಗದಲ್ಲಿ ಸೋನಾಮಸೂರಿ ಅಕ್ಕಿಗೆ ಸಾಕಷ್ಟು ಬೇಡಿಕೆಯಿದೆ. ಅಕ್ಕಿ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕದಿದ್ದರೆ ವ್ಯಾಪಾರ ಮಾಡುವುದೇ ಕಷ್ಟವಾಗಲಿದೆ