ಪಶ್ಚಿಮ ಪದವೀಧರ ಕ್ಷೇತ್ರ: ನೀರಸ ಪ್ರತಿಕ್ರಿಯೆ, ಶೇ 76.52ರಷ್ಟು ಮತದಾನ
ಕಾರವಾರ: ವಿಧಾನ ಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ಜಿಲ್ಲೆಯ 25 ಮತಗಟ್ಟೆಗಳಲ್ಲಿ ಸುಗಮವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಆದರೆ, ಶೇ 76.52ರಷ್ಟು ಪದವೀಧರ ಮತದಾರರು ಮತ ಚಲಾಯಿಸಿದ್ದು, ಮತದಾನಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಂತಾಗಿದೆ.ಜಿಲ್ಲೆಯಲ್ಲಿ 16,039 ಮಂದಿಯಷ್ಟೇ ಪದವೀಧರ ಮತದಾರರು ಮತದಾನದ ಹಕ್ಕು ಪಡೆದುಕೊಂಡಿದ್ದರು. 6,352 ಪುರುಷರು ಮತ್ತ

ಕಾರವಾರ: ವಿಧಾನ ಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ಜಿಲ್ಲೆಯ 25 ಮತಗಟ್ಟೆಗಳಲ್ಲಿ ಸುಗಮವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಆದರೆ, ಶೇ 76.52ರಷ್ಟು ಪದವೀಧರ ಮತದಾರರು ಮತ ಚಲಾಯಿಸಿದ್ದು, ಮತದಾನಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಂತಾಗಿದೆ.ಜಿಲ್ಲೆಯಲ್ಲಿ 16,039 ಮಂದಿಯಷ್ಟೇ ಪದವೀಧರ ಮತದಾರರು ಮತದಾನದ ಹಕ್ಕು ಪಡೆದುಕೊಂಡಿದ್ದರು. 6,352 ಪುರುಷರು ಮತ್ತು 5,921 ಮಹಿಳೆಯರು ಸೇರಿ 12,273 ಮತದಾರರು ಮಾತ್ರ ಮತ ಚಲಾಯಿಸಿದರು. ಹಳಿಯಾಳದ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಶೇ 87.43ರಷ್ಟು ಮತದಾನ ನಡೆದಿದ್ದು ಗರಿಷ್ಠ ಪ್ರಮಾಣವಾದರೆ, ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದ ಕೆಎಚ್ಇಪಿ ಮತಗಟ್ಟೆಯಲ್ಲಿ ಶೇ 63.64ರಷ್ಟು ಮತದಾನ ಕನಿಷ್ಠ ಪ್ರಮಾಣದ್ದಾಗಿದೆ.ಮತದಾನಕ್ಕೆ ಅನುಕೂಲ ವಾಗುವಂತೆ ಹೆಚ್ಚು ಮತದಾರರಿರುವ ಪ್ರದೇಶದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಉಳಿದ ಚುನಾವಣೆಯಂತೆ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ 80ರಷ್ಟನ್ನೂ ತಲುಪಲಿಲ್ಲ. ಶೇ 79.12 ಪುರುಷ ಮತದಾರರು, ಶೇ 73.91 ಮಹಿಳಾ ಮತದಾರರು ಮತದ ಹಕ್ಕು ಚಲಾಯಿಸಿದರು.ಮುಂಜಾನೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಹಿರಿಯ ಮತದಾರರು ಮತ ಚಲಾಯಿಸಲು ಮತಗಟ್ಟೆಗಳತ್ತ ಉತ್ಸಾಹದೊಂದಿಗೆ ಆರಂಭಿಸಿದ್ದರು. ಕಾರವಾರ ಸೇರಿದಂತೆ ಬಹುತೇಕ ಮತಗಟ್ಟೆಗಳಲ್ಲಿ ಆರಂಭದಲ್ಲಿ ಬೆರಳೆಣಿಕೆಯಷ್ಟು ಮತದಾರರು ಮಾತ್ರವೇ ಇದ್ದರು.ಆದರೆ, ಹೊತ್ತು ಏರುತ್ತಿದ್ದಂತೆ ಮತಗಟ್ಟೆಗಳ ಎದುರು ಸರತಿ ಬೆಳೆಯತೊಡಗಿತ್ತು. ಅಂಕೋಲಾ, ಕುಮಟಾದ ತಹಶೀಲ್ದಾರ್ ಕಚೇರಿಯಲ್ಲಿ ತೆರೆದಿದ್ದ ಮತಗಟ್ಟೆಗಳಲ್ಲಿ ನೂರಾರು ಮಂದಿ ಪದವೀಧರ ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು.ಕಾರವಾರದ ಸೆಂಟ್ ಮೈಕಲ್ ಶಾಲೆಯ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಇತರ ಮತದಾರರೊಂದಿಗೆ ಸರತಿಯಲ್ಲಿ ನಿಂತು ಮತದಾನ ಮಾಡಿದರು. ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ, ಕಾರವಾರದಲ್ಲಿ ಶಾಸಕ ಸತೀಶ ಸೈಲ್ ಮತದಾನದ ಹಕ್ಕು ಚಲಾಯಿಸಿದರು.ಮತಗಟ್ಟೆಗಳ ಹೊರಗೆ ಬಿಜೆಪಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಟೇಬಲ್ ಇಟ್ಟು ಕುಳಿತಿದ್ದರು. ಮತದಾರರ ಹೆಸರು ಹುಡುಕಿಕೊಟ್ಟು, ಮತದಾನಕ್ಕೆ ಮನವಿ ಮಾಡಿದ್ದರು. ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಪೆಟ್ಟಿಗೆಗಳನ್ನು ಸೀಲ್ ಮಾಡಿ, ಭದ್ರತೆಯೊಂದಿಗೆ ಧಾರವಾಡಕ್ಕೆ ರವಾನಿಸಲಾಯಿತು.6 ಗಂಟೆವರೆಗೂ ಮತದಾನಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಕೊನೆಗೊಳ್ಳಬೇಕಿತ್ತು. ಆದರೆ, ಮಳೆ ಸುರಿದಿದ್ದರಿಂದ ಕೊನೆ ಕ್ಷಣದಲ್ಲಿ ಮತಗಟ್ಟೆಗಳತ್ತ ಮತದಾರರು ಧಾವಿಸಿದರು. ಇದರಿಂದ ಜಿಲ್ಲೆಯ 6 ಮತಗಟ್ಟೆಗಳಲ್ಲಿ ಸಂಜೆ 6 ಗಂಟೆವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.ಭಟ್ಕಳ, ಕುಮಟಾ, ಶಿರಸಿ, ಹಳಿಯಾಳ, ಮುಂಡಗೋಡದ ಮತಗಟ್ಟೆಗಳಲ್ಲಿ ಸಂಜೆ 4 ಗಂಟೆಯ ಒಳಗೆ ಮತಗಟ್ಟೆಗೆ ಬಂದು ನಿಂತಿದ್ದ ಮತದಾರರಿಗೆ ಸರತಿ ಪ್ರಕಾರ ನಿಲ್ಲಲು ಟೋಕನ್ ಹಂಚಿಕೆ ಮಾಡಲಾಯಿತು. ಟೋಕನ್ ಪಡೆದಿದ್ದ ಮತದಾರರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.ಸಿದ್ದಾಪುರ: ಶೇ78.76 ಮತದಾನಸಿದ್ದಾಪುರ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ78.76 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ತಾಲ್ಲೂಕಿನ ಆಡಳಿತಸೌಧ, ಹೆರೂರ ಉಂಬಳೆಮನೆ ನಾಡಕಚೇರಿ, ವಂದಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ತಾಲ್ಲೂಕಿನಲ್ಲಿ 1333 ಪದವೀಧರರು ಮತದಾನಕ್ಕೆ ಅರ್ಹರಾಗಿದ್ದರು.ತಹಶೀಲ್ದಾರ್ ಕಚೇರಿಯಲ್ಲಿ 613, ಉಂಬಳೆಮನೆ ನಾಡಕಚೇರಿಯಲ್ಲಿ 216 ಹಾಗೂ ವಂದಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 221 ಸೇರಿ ಒಟ್ಟು 1050 ಜನ ಮತದಾನ ಮಾಡಿದ್ದಾರೆ.ಮುಂಜಾಗೃತಾ ಕ್ರಮವಾಗಿ ಮತದಾನ ಕೇಂದ್ರದ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.ಹೊನ್ನಾವರ: ಶೇ 79 ಮತದಾನಹೊನ್ನಾವರ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಎರಡು ಮತಗಟ್ಟೆಗಳಲ್ಲಿ ಶುಕ್ರವಾರ ಮತದಾನ ನಡೆಯಿತು.ಶೇ79.07 ಮತದಾನ ದಾಖಲಾಗಿದೆ.ತಹಶೀಲ್ದಾರ್ ಕಚೇರಿ ಮತಗಟ್ಟೆಯಲ್ಲಿ 455 ಮಹಿಳೆಯರು ಸೇರಿದಂತೆ 899 ಮತದಾರರು ಹಕ್ಕು ಚಲಾಯಿಸಿದ್ದು ಶೇ80.05, ಹೆರಂಗಡಿ ಗ್ರಾಮ ಪಂಚಾಯಿತಿ ಕಚೇರಿ ಮತಗಟ್ಟೆಯಲ್ಲಿ 77 ಪುರುಷರು ಸೇರಿದಂತೆ 140 ಮತದಾರರು ಹಕ್ಕು ಚಲಾಯಿಸಿದ್ದು ಶೇ73.30 ಮತದಾನ ದಾಖಲಾಗಿದೆ.ಎರಡೂ ಮತಗಟ್ಟೆಗಳ ಸಮೀಪ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಕೊನೆಯ ಕ್ಷಣದ ಪ್ರಯತ್ನ ನಡೆಸಿದ್ದು ಕಂಡುಬಂತು.ಭಟ್ಕಳ: ಶೇ 66.02ರಷ್ಟು ಮತದಾನಭಟ್ಕಳ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ತಾಲ್ಲೂಕಿನಲ್ಲಿ ಶೇ 66.02ರಷ್ಟು ಮತದಾನ ನಡೆಯಿತು.ಒಟ್ಟೂ 1136 ಮತದಾರರ ಪೈಕಿ 396 ಪುರುಷರು ಮತ್ತು 354 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ಮಂದಗತಿಯಿಂದ ಆರಂಭವಾದ ಮತದಾನ ಮಧ್ಯಾಹ್ನದ ಹೊತ್ತಿಗೆ ಬಿರುಸು ಪಡೆಯಿತು. 4 ಗಂಟೆಯ ನಂತರವೂ ಸರದಿ ಸಾಲಿನಲ್ಲಿ ನಿಂತ ಮತದಾರರಿಗೆ ಹಕ್ಕು ಚಲಾಯಿಸಲು ಅವಕಾಶ ಕೊಡಲಾಯಿತು.386 ಮತದಾರರು ತಮ್ಮ ಹಕ್ಕು ಚಲಾಯಿಸಲಿಲ್ಲ. ತಾಲ್ಲೂಕು ಆಡಳಿತ ಕಚೇರಿಯಲ್ಲಿ ಮತದಾನ ನಡೆದಿದ್ದು, ಮತಗಟ್ಟೆಯ ಹೊರಗೆ ಕಾಂಗ್ರೆಸ್, ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಪರವಾಗಿ ಮತ ಯಾಚಿಸಿದರು. ಎರಡೂ ಪಕ್ಷಗಳ ನೂರಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರು ಇದ್ದರು. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.ಹಳಿಯಾಳ: ಶೇ87.13 ಮತದಾನಹಳಿಯಾಳ: ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆದ ಮತದಾನದ ಪ್ರಕ್ರಿಯೆಯಲ್ಲಿ ತಾಲೂಕಿನಲ್ಲಿ ಒಟ್ಟು ಶೇ.87.13ರಷ್ಟು ಮತ ಚಲಾವಣೆಯಾಗಿದೆ.ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 939 ಮತದಾರರಿದ್ದು 821 ಮತಗಳು ಚಲಾವಣೆಯಾಗಿವೆ.ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಮಧ್ಯಾಹ್ನದವರೆಗೆ ತುರುಸಿನಿಂದ ಮತದಾರರು ಸರದಿಸಾಲಿನಲ್ಲಿ ನಿಂತು ತಹಶೀಲ್ದಾರ್ ಕಾರ್ಯಾಲಯದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮಧ್ಯಾಹ್ನ ತುಸು ಮಂದಗತಿಯಿಂದ ಮತ ಚಲಾವಣೆ ಆಯಿತು.ರಾಜ್ಯ ಆಡಳಿತ ಸುಧಾರಣಾ ಅಯೋಗದ ಅಧ್ಯಕ್ಷ, ಶಾಸಕ ಆರ್ ವಿ.ದೇಶಪಾಂಡೆ ಬೆಳ್ಳಿಗ್ಗೆ ಮತ ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೋಹನ ಲಿಂಬಿಕಾಯಿ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದಾಂಡೇಲಿ: ಶೇ 76 ರಷ್ಟು ಮತದಾನದಾಂಡೇಲಿ: ಪಶ್ಚಿಮ ಪದವೀಧರರ ಕ್ಷೇತ್ರ ಚುನಾವಣೆ ಮತದಾನ ನಗರದ ಅಂಬೇವಾಡಿಯ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಶಾಂತಿಯುತವಾಗಿ ನಡೆಯಿತು.ನೋಂದಾಯಿತ ಮತದಾರರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತಗಟ್ಟೆಯ ಹೊರಗೆ ಉತ್ಸಾಹದಿಂದ ಓಡಾಡಿದರು.ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಶೇ76ರಷ್ಟು, ಅಂಬಿಕಾ ನಗರ ಮತಗಟ್ಟೆಯಲ್ಲಿ ಶೇ63 ಮತದಾನ ಆಗಿದೆ. 794ರಲ್ಲಿ 604 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂಬಿಕಾ ನಗರದಲ್ಲಿ 22 ಮತದಾರರಲ್ಲಿ 14 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.ಅಂಕೋಲಾ; ಶೇ68.62ರಷ್ಟು ಮತದಾನಅಂಕೋಲಾ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅಂಕೋಲಾ ತಾಲ್ಲೂಕಿನಲ್ಲಿ ಶೇ.68.62ರಷ್ಟು ಮತದಾನವಾಗಿದೆ.ಶುಕ್ರವಾರ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 1,715 ಮತದಾರರ ಪೈಕಿ 1,177 ಮಂದಿ ಮತ ಚಲಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.261024-20-349491190