ತಮಿಳುನಾಡಿನಲ್ಲಿ ಭಾರಿ ಮಳೆ – ಕೊಡೈಕೆನಾಲ್ ಘಾಟ್ನ ಮೂರು ಕಡೆ ಭೂಕುಸಿತ, ಸಂಚಾರಕ್ಕೆ ಅಡಚಣೆ
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ (Tamilnadu) ಭಾರೀ ಮಳೆಯಾಗುತ್ತಿದ್ದು, ಕೊಡೈಕೆನಾಲ್ನಲ್ಲಿಯೂ ವರುಣನ ಅಬ್ಬರ ಜೋರಾಗಿದೆ. ಇದರ ನಡುವೆ ಕೊಡೈಕೆನಾಲ್ (Kodaikenal) ಘಾಟ್ನ ಮೂರು ಕಡೆ ಭೂಕುಸಿತ ಸಂಭವಿಸಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಶುಕ್ರವಾರ (ಅ.23) ಸುರಿದ ಭಾರಿ ಮಳೆಯಿಂದಾಗಿ ಕೊಡೈಕೆನಾಲ್ನ ಮುಖ್ಯ ಘಾಟ್ನಲ್ಲಿ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ (Tamilnadu) ಭಾರೀ ಮಳೆಯಾಗುತ್ತಿದ್ದು, ಕೊಡೈಕೆನಾಲ್ನಲ್ಲಿಯೂ ವರುಣನ ಅಬ್ಬರ ಜೋರಾಗಿದೆ. ಇದರ ನಡುವೆ ಕೊಡೈಕೆನಾಲ್ (Kodaikenal) ಘಾಟ್ನ ಮೂರು ಕಡೆ ಭೂಕುಸಿತ ಸಂಭವಿಸಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಶುಕ್ರವಾರ (ಅ.23) ಸುರಿದ ಭಾರಿ ಮಳೆಯಿಂದಾಗಿ ಕೊಡೈಕೆನಾಲ್ನ ಮುಖ್ಯ ಘಾಟ್ನಲ್ಲಿ ಮೂರು ಸ್ಥಳಗಳಲ್ಲಿ ಭೂಕುಸಿತ (Landslide) ಉಂಟಾಗಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೊಡೈಕೆನಾಲ್ನ ಘಾಟ್ ರಸ್ತೆಯ ಶ್ರೀನಿವಾಸಪುರದಲ್ಲಿ ಶುಕ್ರವಾರ ಭೂಕುಸಿತ ಸಂಭವಿಸಿದ್ದು, ಹೆದ್ದಾರಿ ಇಲಾಖೆ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಜೋರು ಮಳೆ ಮೂನ್ಸೂಚನೆ ಶುಕ್ರವಾರ ಮಧ್ಯಾಹ್ನ ಕೊಡೈಕೆನಾಲ್ ಪ್ರದೇಶದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಾರಿ ಮಳೆ ದಾಖಲಾಗಿದೆ. ಇದರ ಪರಿಣಾಮ ಮುಖ್ಯ ಬಟ್ಲಗುಂಡು-ಕೊಡೈಕೆನಾಲ್ ಘಾಟ್ ರಸ್ತೆಯಲ್ಲಿ ಹಠಾತ್ ಪ್ರವಾಹದಂತೆ ಹರಿದುಬಂದಿದೆ. ಈ ಮಾರ್ಗದಲ್ಲಿ ಸುಮಾರು ಒಂದು ಗಂಟೆಯವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಶ್ರೀನಿವಾಸಪುರ ಮತ್ತು ಶೆಂಬಗನೂರು ಜಂಕ್ಷನ್ ಬಳಿಯ ಪ್ರದೇಶದಲ್ಲಿ ಸುಮಾರು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆಯ ಮೇಲೆ ಮಣ್ಣು, ಬಂಡೆಗಳು ಬಿದ್ದಿದ್ದವು. ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಮಾಹಿತಿ ಪಡೆದ ಹೆದ್ದಾರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ಬಳಿ ನೀರಿನ ತೀವ್ರ ಹರಿವಿನಿಂದಾಗಿ ಭೂಕುಸಿತ ಉಂಟಾಗಿ, ರಸ್ತೆಯಲ್ಲಿ ದೊಡ್ಡ ಮತ್ತು ಆಳವಾದ ಗುಂಡಿಗಳು ನಿರ್ಮಾಣಗೊಂಡಿವೆ. ಪಳನಿಯಲ್ಲೂ ಭಾರಿ ಮಳೆ ದಾಖಲಾಗಿದ್ದು, ಹಲವಾರು ವಸತಿ ಪ್ರದೇಶಗಳಲ್ಲಿ ನೀರು ನಿಂತುಕೊಂಡಿರುವುದು ವರದಿಯಾಗಿದೆ. ಈಶಾನ್ಯ ಮಾರುತ ತೀವ್ರಗೊಂಡಿರುವ ಹಿನ್ನೆಲೆ ಸಾರ್ವಜನಿಕರು ಕೊಡೈಕೆನಾಲ್ ಮತ್ತು ತಂದಿಕುಡಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ದಿಂಡುಗಲ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಕೆಡುಕು ಆಗುವುದಿಲ್ಲ: ಪ್ರಮೋದಾದೇವಿ ಒಡೆಯರ್