ಬೆಂಗಳೂರು: 103 ಕಡೆ ಆರ್ಎಸ್ಎಸ್ ಪಥಸಂಚಲನ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ನಗರದ ಚಿಕ್ಕಪೇಟೆ, ವಿಜಯನಗರ, ಜೆ.ಪಿ.ನಗರ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ 103 ಕಡೆ ವಿಜಯದಶಮಿ ಪಥ ಸಂಚಲನವನ್ನು ಅ.25ರಂದು ಹಮ್ಮಿಕೊಂಡಿದೆ. ಬೆಳಿಗ್ಗೆ 7.30ರಿಂದ ಸಂಜೆ 5ರವರೆಗೆ ನಡೆಯುವ ಪಥ ಸಂಚಲನಗಳಲ್ಲಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿಜಯನಗರದ ಬಿಬಿಎಂಪಿ ಮೈದಾನ, ಅತ್ತಿಗುಪ್ಪೆಯ ಲಕ್ಷ್ಮಿವೆಂಕಟೇಶ್ವರಸ್ವಾ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ನಗರದ ಚಿಕ್ಕಪೇಟೆ, ವಿಜಯನಗರ, ಜೆ.ಪಿ.ನಗರ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ 103 ಕಡೆ ವಿಜಯದಶಮಿ ಪಥ ಸಂಚಲನವನ್ನು ಅ.25ರಂದು ಹಮ್ಮಿಕೊಂಡಿದೆ. ಬೆಳಿಗ್ಗೆ 7.30ರಿಂದ ಸಂಜೆ 5ರವರೆಗೆ ನಡೆಯುವ ಪಥ ಸಂಚಲನಗಳಲ್ಲಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿಜಯನಗರದ ಬಿಬಿಎಂಪಿ ಮೈದಾನ, ಅತ್ತಿಗುಪ್ಪೆಯ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಖಾರವೇಲ ಸಂಘ, ಎಂ.ಸಿ ಬಡಾವಣೆಯ ಬಿಜಿಎಸ್ ಆಟದ ಮೈದಾನ, ನಾಗರಬಾವಿಯ ದ.ರಾ.ಬೇಂದ್ರೆ ಆಟದ ಮೈದಾನ, ವಿಶ್ವೇಶ್ವರ ನಗರದ ವೀರಾಂಜನೇಯ ದೇವಸ್ಥಾನ, ಕುಂಬಳಗೋಡಿನ ಚಲ್ಲಘಟ್ಟದ ಶನೇಶ್ವರ ದೇವಸ್ಥಾನ ರಸ್ತೆಯಲ್ಲಿ ಪಥ ಸಂಚಲನ ನಡೆಯಲಿದೆ.ಕೆಂಗೇರಿಯಲ್ಲಿ ಗಣೇಶ ಆಟದ ಮೈದಾನ, ಕೆಂಗೇರಿ ಉಪನಗರದ ಪ್ರಿಯದರ್ಶಿನಿ ಆಟದ ಮೈದಾನ, ಶಿರ್ಕೆಯ ಸತ್ಯ ಗಣಪತಿ ದೇವಸ್ಥಾನದ ಆಟದ ಮೈದಾನದಲ್ಲಿ ಆರಂಭವಾಗುವ ಪಥ ಸಂಚಲನಗಳು ಹೊಯ್ಸಳ ವೃತ್ತದಲ್ಲಿ ಸೇರಲಿವೆ.ಜಯನಗರದ ವಿವಿಧೆಡೆ ಸಾಗುವ ಪಥ ಸಂಚಲನವು ಜೆ.ಪಿ.ನಗರದ 6ನೇ ಹಂತದ ಬಿಬಿಎಂಪಿ ಆಟದ ಮೈದಾನದಲ್ಲಿ ಬೆಳಿಗ್ಗೆ 7.30ಕ್ಕೆ ಆರಂಭವಾಗಲಿದೆ. ಮೆಜೆಸ್ಟಿಕ್ನಲ್ಲಿ ಸಂಜೆ 4ಕ್ಕೆ ಆರಂಭವಾಗುವ ಪಥ ಸಂಚಲನವು ಚಿಕ್ಕಪೇಟೆಯ ಮುನೇಶ್ವರ ದೇವಸ್ಥಾನದವರೆಗೆ ಸಾಗಲಿದೆ. ಮಲ್ಲೇಶ್ವರದ ಮಲ್ಲೇಶ್ವರ ವೃತ್ತದಲ್ಲಿ ಬೆಳಿಗ್ಗೆ 9.25ಕ್ಕೆ ಪಥ ಸಂಚಲನ ಆರಂಭವಾಗಲಿದೆ. ರಾಜಾಜಿನಗರ 2ನೇ ಬ್ಲಾಕ್ನಲ್ಲಿರುವ ಕೆಎಲ್ಇ ಆಟದ ಮೈದಾನ, ಬಸವೇಶ್ವರನಗರದ ಸೇಂಟ್ ಫ್ಲಾರೆನ್ಸ್ ಶಾಲೆ ಮೈದಾನ, ಕಮಲಾನಗರದ ಪೈಪ್ ಲೈನ್ ರಸ್ತೆ, ನಾಗಪುರ ನಗರದ ಶಂಕರ ಮಠ ಮೈದಾನ, ಮಹಾಲಕ್ಷ್ಮಿನಗರದ ಅನು ಪಬ್ಲಿಕ್ ಸ್ಕೂಲ್ ಆಟದ ಮೈದಾನದಲ್ಲಿ ಪಥಸಂಚಲನ ಶುರುವಾಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.