ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳಲು ಪ್ರಯತ್ನ; ಶಾಸಕ ಶಿವರಾಮ ಹೆಬ್ಬಾರ
ಶಿರಸಿ: ‘2028ರ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿ ನಾಯಕರು ಮತ್ತೆ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.‘ನಾನು ಗೆದ್ದು, ನಮ್ಮ ಸರ್ಕಾರ ಬಂದರೆ ತಮಗೆ ಸಿಗಬೇಕಾದ ಸಚಿವ ಸ್ಥಾನ ತಪ್ಪಿ ಹೋಗುತ್ತದೆ ಎಂಬ ಭಯದಿಂದ ಜಿಲ್ಲೆಯಲ್ಲಿ ನನ್ನ ಸಮುದಾಯದ ನಾಯಕರೇ (ಬ್ರಾಹ್ಮಣ) ನನ್ನನ್ನು ಸೋಲಿಸಲು ಯತ್ನಿ

ಶಿರಸಿ: ‘2028ರ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿ ನಾಯಕರು ಮತ್ತೆ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.‘ನಾನು ಗೆದ್ದು, ನಮ್ಮ ಸರ್ಕಾರ ಬಂದರೆ ತಮಗೆ ಸಿಗಬೇಕಾದ ಸಚಿವ ಸ್ಥಾನ ತಪ್ಪಿ ಹೋಗುತ್ತದೆ ಎಂಬ ಭಯದಿಂದ ಜಿಲ್ಲೆಯಲ್ಲಿ ನನ್ನ ಸಮುದಾಯದ ನಾಯಕರೇ (ಬ್ರಾಹ್ಮಣ) ನನ್ನನ್ನು ಸೋಲಿಸಲು ಯತ್ನಿಸಿದರು. ಅದಕ್ಕೆ ಅವರೇ ಪಶ್ಚಾತ್ತಾಪ ಪಡುವಂತಾಯಿತು. ಕ್ಷೇತ್ರದಲ್ಲಿ ನನ್ನದೇ ಆದ ಸಂಘಟನೆ ಮತ್ತು ಜನಬಲವಿರುವುದನ್ನು ಈಗ ಅವರು ಮನಗಂಡಿದ್ದಾರೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.‘ಯಾರೇ ಆದರೂ ಪಕ್ಷ ಬಿಡಲು ಬಲವಾದ ಕಾರಣವಿರುತ್ತದೆ. ಬಿ.ಎಸ್.ಯಡಿಯೂರಪ್ಪ ಅವರಿಂದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ತೊಂದರೆಯಾಗಿರಬಹುದು. ಆದರೆ, ನನಗೆ ಸ್ವಜಾತಿಯ ನಾಯಕರಿಂದಲೇ ತೀವ್ರ ಅನ್ಯಾಯ ಹಾಗೂ ಕಿರುಕುಳವಾಗಿದೆ’ ಎಂದರು.‘ನಾನು, ಎಸ್.ಟಿ.ಸೋಮಶೇಖರ್, ಬಸನಗೌಡ ಪಾಟೀಲ ಯತ್ನಾಳ ಮತ್ತು ಜಿ.ಟಿ.ದೇವೇಗೌಡ ಸಮಾನ ಮನಸ್ಕರು. ಏನು ಅನ್ಯಾಯವಾಗಿದೆ ಎಂಬುದು ನಮಗೆ ಮಾತ್ರ ಗೊತ್ತಿದೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾರ್ಯಕರ್ತರು ಮತ್ತು ಬೆಂಬಲಿಗರ ಹಿತಾಸಕ್ತಿ ಕಾಯ್ದುಕೊಂಡು ಮುಂದಿನ ರಾಜಕೀಯ ಹೆಜ್ಜೆ ಇಡುತ್ತೇವೆ’ ಎಂದು ಹೇಳಿದರು.261024-20-653190350