ದೊಡ್ಡಬಳ್ಳಾಪುರದಲ್ಲಿ ಮತ್ತೆ ಲಘು ಭೂಕಂಪನ: 5 ಕಿ.ಮೀ ಆಳದಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪನವಾದ ಬಳಿಕ ಮತ್ತೆ ಶನಿವಾರ ತಾಲ್ಲೂಕಿನ ಆರೂಢಿ ಗ್ರಾಮದ ಬಳಿ ಭೂಕಂಪನ ಸಂಭವಿಸಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೀರಮ್ಮನಹಳ್ಳಿ ನಡುವಿನ ಪ್ರದೇಶದಲ್ಲಿ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ.ಅ. 24ರಂದು ಬೆಳಗಿನ ಜಾವ 3 ಗಂ
ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪನವಾದ ಬಳಿಕ ಮತ್ತೆ ಶನಿವಾರ ತಾಲ್ಲೂಕಿನ ಆರೂಢಿ ಗ್ರಾಮದ ಬಳಿ ಭೂಕಂಪನ ಸಂಭವಿಸಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೀರಮ್ಮನಹಳ್ಳಿ ನಡುವಿನ ಪ್ರದೇಶದಲ್ಲಿ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ.ಅ. 24ರಂದು ಬೆಳಗಿನ ಜಾವ 3 ಗಂಟೆ, 29 ನಿಮಿಷ, 42 ಸೆಕೆಂಡ್ಗೆ ಭೂಕಂಪ ಸಂಭವಿಸಿರುವುದಾಗಿ ಭೂಕಂಪನದ ದತ್ತಾಂಶದಲ್ಲಿ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು 13.497 ಅಕ್ಷಾಂಶ ಹಾಗೂ 77.420 ರೇಖಾಂಶದಲ್ಲಿದ್ದು, ಭೂಮಿಯ ಮೇಲ್ಮೈಯಿಂದ 5 ಕಿ.ಮೀ ಆಳದಲ್ಲಿ ಕಂಪನ ದಾಖಲಾಗಿದೆ. ಭೂಕಂಪನದ ತೀವ್ರತೆ ಕಡಿಮೆ ಮಟ್ಟದಲ್ಲಿದ್ದು, ಘಟನೆಯನ್ನು ಪರಿಶೀಲಿಸಲಾಗಿದೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ.
Read the complete story at Prajavani